ಮೂರೂ ವಿಭಾಗದಲ್ಲೂ ತಂಡ ಬಲಿಷ್ಟವಾಗಿದೆ
sports
By Suvarna Web Desk | 04:41 AM April 21, 2017

ಸನ್'ರೈಸರ್ಸ್ ಹೈದರಾಬಾದ್ ತಂಡ ಆರು ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ಜಯ ಸಾಧಿಸಿ, ಎರಡರಲ್ಲಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಹೈದರಾಬಾದ್‌(ಏ.21): ಹೊಸಬರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಸಾಮರ್ಥ್ಯ ಸಾಬೀತುಪಡಿ​ಸಿರುವುದು ಆಯ್ಕೆ ಸಮಸ್ಯೆಯನ್ನು ಹೆಚ್ಚಿಸಿದ್ದು, ಇಂಥದ್ದೊಂದ ಸ್ಪರ್ಧಾತ್ಮಕ ಸಮಸ್ಯೆಗಳು ಎಂದಿಗೂ ಸ್ವಾಗತಾರ್ಹವೇ ಎಂದು ಸನ್‌'ರೈಸ​ರ್ಸ್ ಹೈದರಾಬಾದ್‌ ತಂಡದ ಸಲಹೆಗಾರ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ.

‘‘ನಮ್ಮ ತಂಡಕ್ಕೆ ಯಾವುದೇ ವಿಭಾಗದಲ್ಲೂ ನ್ಯೂನತೆಗಳಿಲ್ಲ. ಎಲ್ಲಾ ಮೂರೂ ವಿಭಾಗಗಳಲ್ಲಿ ತಂಡ ಬಲಿಷ್ಠವಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಆಟಗಾರರು ಅದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರತಿ ಪಂದ್ಯದಲ್ಲೂ ನಮ್ಮ ಆಟದ ಗುಣಮಟ್ಟಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ತಂಡ ಪ್ರತಿಭಾನ್ವಿತರ ಬೀಡಾಗಿರುವುದು ನಮ್ಮ ಅದೃಷ್ಟ'' ಎಂದೂ ಅವರು ಹೇಳಿದ್ದಾರೆ. 

ಸದ್ಯ ಸನ್'ರೈಸರ್ಸ್ ಹೈದರಾಬಾದ್ ತಂಡ ಆರು ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ಜಯ ಸಾಧಿಸಿ, ಎರಡರಲ್ಲಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Show Full Article