Asianet Suvarna News Asianet Suvarna News

(ವಿಡಿಯೋ)ಗೇಲ್'ನ ಸಂದರ್ಶನ ಮಾಡಿದ ಕೊಹ್ಲಿ:

RCB ನಾಯಕ ವಿರಾಟ್ ಮೈಕ್ ಹಿಡಿದು ಆ್ಯಂಕರ್'ನಂತೆ ಗೇಲ್ ಬಳಿ ಕೆಲವು ಪ್ರಶ್ನೆಗಳನ್ನು ಕೇಳಿ ಸಂದರ್ಶನ ನಡೆಸಿದರು. ಇವರಿಬ್ಬರ ಪ್ರಶ್ನೋತ್ತರಗಳು ಹಾಸ್ಯಭರಿತವಾಗಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿವೆ. ಈ ವೇಳೆ ಕೇಳಿದ ಕೆಲ ಪ್ರಶ್ನೆಗಳು ಹೀಗಿವೆ.

Virat Kohli Takes The Interview Of Chris Gayle

ಬೆಂಗಳೂರು(ಎ.21): ಐಪಿಎಲ್ 10ನೇ ಆವೃತ್ತಿಗೆ ಭರ್ಜರಿ ಪ್ರಾರಂಭ ಲಭಿಸಿದೆ. ತಂಡಗಳು ಗೆಲ್ಲಬೇಕೆಂಬ ಹಠದಿಂದ ುತ್ತಮ ಪ್ರದರ್ಶನ ನೀಡುತ್ತಿವೆ. ಇದೇ ರೀತಿ ಮಂಗಳವಾರದಂದು ನಡೆದ ಆರ್'ಸಿಬಿ ಹಾಗೂ ಗುಜರಾತ್ ಲಯನ್ಸ್ ತಂಡಗಳ ನಡುವೆ ನಡೆದ ಪಂದ್ಯ ಕುತೂಹಲಭರಿತವಾಗಿತ್ತು. ಈ ಪಂದ್ಯದಲ್ಲಿ ದೈತ್ಯ ಗೇಲ್ 77 ರನ್ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದರು. ಇವರು ಗಳಿಸಿದ ಈ ರನ್'ಗಳು ಗುಜರಾತ್ ಲಯನ್ಸ್ ವಿರುದ್ಧ ಗೆಲುವು ಸಾಧಿಸಲು RCBಗೆ ಬಹಳಷ್ಟು ಸಹಾಯ ಮಾಡಿತು. ಇಷ್ಟೇ ಅಲ್ಲದೇ ಗೇಲ್ ಟಿ20 ಪಯಣದಲ್ಲಿ 10 ಸಾವಿರ ರನ್'ಗಳನ್ನು ಪೂರೈಸಿದರು. ಈ ಮೂಲಕ ಟಿ 20ಯಲ್ಲಿ 10 ಸಾವಿರ ರನ್ ಗಳಿಸಿದ ಏಕೈಕ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು.

ಈ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ RCB ನಾಯಕ ವಿರಾಟ್ ಮೈಕ್ ಹಿಡಿದು ಆ್ಯಂಕರ್'ನಂತೆ ಗೇಲ್ ಬಳಿ ಕೆಲವು ಪ್ರಶ್ನೆಗಳನ್ನು ಕೇಳಿ ಸಂದರ್ಶನ ನಡೆಸಿದರು. ಇವರಿಬ್ಬರ ಪ್ರಶ್ನೋತ್ತರಗಳು ಹಾಸ್ಯಭರಿತವಾಗಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿವೆ. ಈ ವೇಳೆ ಕೇಳಿದ ಕೆಲ ಪ್ರಶ್ನೆಗಳು ಹೀಗಿವೆ.

ಕೊಹ್ಲಿ: ಕ್ರಿಸ್ ನನ್ನೊಂದಿಗೆ ಇನ್ನಿಂಗ್ಸ್ ಆರಂಭಿಸಿ ಹೇಗನಿಸಿತು?

ಗೇಲ್: ನಿಮ್ಮೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿ ತುಂಬಾ ಖುಷಿಯಾಗುತ್ತದೆ. ನೀವು ಕ್ರಿಕೆಟ್ ದಿಗ್ಗಜ ಅಲ್ಲದೇ ನೀವು ಇನ್ನೂ ರನ್ ಗಳಿಸಬೇಕು. ಇನ್ನೊಂದೆಡೆ ನೀವು ಬ್ಯಾಟಿಂಗ್ ಮಾಡುವುದನ್ನು ನೋಡಿಯೂ ನನಗೆ ತುಂಬಾ ಖುಷಿಯಾಗುತ್ತದೆ. ನೀವು ರನ್ ಗಳಿಸುವ ಶೈಲಿ ನೋಡಿ ಆನಂದ ಸಿಗುತ್ತದೆ. ಈವರೆಗಿನ ಕ್ರಿಕೆಟ್ ಪಯಣದಲ್ಲಿ ನೀವು ಬಹಳ ಗಳಿಸಿದ್ದೀರಿ, ಇದರಂತೆ ಮುಂದೆಯೂ ಬಹಳ ರನ್ ಗಳಿಸುತ್ತೀರೆಂಬ ವಿಶ್ವಾಸ ನನ್ನಲ್ಲಿದೆ

ಕೊಹ್ಲಿ: ಟಿ20ಯಲ್ಲಿ ಇದು ನಮ್ಮ 10ನೇ ವರ್ಷದ ಪಾಲುದಾರಿಕೆ. ನೀವು ಸುಮಾರು 40ರ ಸರಾಸರಿ ಹಾಗೂ 149ರ ಸ್ಟ್ರೈಕ್ ರೇಟ್'ನಲ್ಲಿ ಟಿ 20ಯಲ್ಲಿ ಈವರೆಗೂ ಒಟ್ಟು 10 ಸಾವಿರ ರನ್ ಗಳಿಸಿದ್ದೀರಿ. ಿವುಗಳಲ್ಲಿ 18 ಸೆಂಚುರಿಗಳು ಸೇರಿದ್ದು, ಇದು ನಿಜಕ್ಕೂ ನಂಬಲಸಾಧ್ಯವಾದ ಸಾಧನೆಯಾಘಿದೆ. ನಿಮ್ಮೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿ ನನ್ನ ಬಗ್ಗೆ ನನಗೇ ಗೌರವ ಮೂಡುತ್ತದೆ. ಆದರೆ ಇಷ್ಟು ವರ್ಷಗಳಲ್ಲಿ ನಿಮ್ಮನ್ನು ನೀವು ಯಾವ ರೀತಿ 'ಯುನಿವರ್ಸಲ್ ಬಾಸ್' ಆಗಿ ಉಳಿಸಕೊಳ್ಳಲು ಸಫಲರಾದಿರಿ?

ಗೇಲ್: 10 ಸಾವಿರ ರನ್ ಗಳಿಸುವುದು ಹಾಗೂ ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದು ಅದ್ಭುತವೇ ಸರಿ. ನಮ್ಮ ಪಾಲುದಾರಿಕೆ ಹಲವು ಬಾರಿ ಆಗಿದೆ ಆದರೆ ಅವೆಲ್ಲವಲ್ಲಿ ಈ ಕ್ಷಣ ಅತ್ಯಂತ ಅಮೂಲ್ಯವಾಗಿದೆ. RCB ಯಂತಹ ಪ್ರಾಂಚೈಸಿಯ ಸದಸ್ಯನಾಗಿ ಆಡುವುದು ಕೂಡಾ ನನ್ನ ಅದೃಷ್ಟ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನೀವೆಲ್ಲರೂ ನನಗೆ ಬಹಳ ವಿಶೇಷ ವ್ಯಕ್ತಿಗಳು, ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಂ ಶೇರ್ ಮಾಡುವ ಅನುಭವ ಹಾಗೂ ಅಲ್ಲಿ ಸಿಗುವ ಮೋಜು ಮಸ್ತಿ ಮರೆಯಲು ಅಸಾಧ್ಯ

Follow Us:
Download App:
  • android
  • ios