Asianet Suvarna News Asianet Suvarna News

(ವಿಡಿಯೋ)ಸೆಮಿಫೈನಲ್'ಗೆ ಗೆಲ್ಲಿಸಿಕೊಟ್ಟ ಕನ್ನಡತಿಯರಿಂದ 'ಇಂಗ್ಲೆಂಡ್'ನಲ್ಲಿ ಕನ್ನಡ ಕಲರವ

ಬ್ಯಾಟಿಂಗ್'ನಲ್ಲಿ ಚಿಕ್ಕಮಗಳೂರಿನ ಹುಡುಗಿ ವೇದಾ ಕೃಷ್ಣಮೂರ್ತಿ 58 ಎಸತಗಳಲ್ಲಿ 7 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ'ರ್'ಗಳಿಂದ 70 ರನ್ ಗಳಿಸಿದ್ದರು. ಅದೇ ರೀತಿ ಮತ್ತೊಬ್ಬಳು ಕನ್ನಡತಿ ಬೆಂಗಳೂರಿನ ರಾಜೇಶ್ವರಿ ಗಾಯಕ್ವಾಡ್ ತಮ್ಮ ಜೀವನ ಶ್ರೇಷ್ಠ 7.3 ಓವರ್'ಗಳಲ್ಲಿ 15 ರನ್'ಗಳಿಗೆ 5 ವಿಕೇಟ್ ಕಿತ್ತು ನ್ಯೂಜಿಲದಯಾಂಡ್ ತಂಡವನ್ನು 79 ರನ್;ಗಳಿಗೆ ಆಲ್'ಔಟ್ ಮಾಡಿದ್ದರು.

Veda And Rajeswri speak kannada at ICC Match ceremony

ಡರ್ಬಿ(ಜು.16): ಇಂಗ್ಲೆಂಡ್'ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್'ನ ಸೆಮಿಫೈನಲ್ ಹಣಾಹಣಿಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ನಿನ್ನೆ ಇಬ್ಬರು ಕನ್ನಡತಿಯರ ಕೆಚ್ಚೆದಯ ಆಟದಿಂದ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡದ ವನಿತೆಯರು ಕಿವೀಸ್ ವಿರುದ್ಧ ಭರ್ಜರಿ ಜಯಗಳಿಸಿತ್ತು.

ಬ್ಯಾಟಿಂಗ್'ನಲ್ಲಿ ಚಿಕ್ಕಮಗಳೂರಿನ ಹುಡುಗಿ ವೇದಾ ಕೃಷ್ಣಮೂರ್ತಿ 58 ಎಸತಗಳಲ್ಲಿ 7 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ'ರ್'ಗಳಿಂದ 70 ರನ್ ಗಳಿಸಿದ್ದರು. ಅದೇ ರೀತಿ ಮತ್ತೊಬ್ಬಳು ಕನ್ನಡತಿ ಬೆಂಗಳೂರಿನ ರಾಜೇಶ್ವರಿ ಗಾಯಕ್ವಾಡ್ ತಮ್ಮ ಜೀವನ ಶ್ರೇಷ್ಠ 7.3 ಓವರ್'ಗಳಲ್ಲಿ 15 ರನ್'ಗಳಿಗೆ 5 ವಿಕೇಟ್ ಕಿತ್ತು ನ್ಯೂಜಿಲ್ಯಾಂಡ್ ತಂಡವನ್ನು 79 ರನ್;ಗಳಿಗೆ ಆಲ್'ಔಟ್ ಮಾಡಿದ್ದರು.

ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ  ರಾಜೇಶ್ವರಿ ಗಾಯಕ್ವಾಡ್ ಪಂದ್ಯ ಶ್ರೇಷ್ಠರಾದರು. ಆದರೆ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಾಗ ವೀಕ್ಷಕ ವಿವರಣೆಕಾರ ಸೈಮಲ್ ಡುಲ್ ಪಂದ್ಯದ ಅನುಭವವನ್ನು ರಾಜೇಶ್ವರಿ ಅವರಿಗೆ ಕೇಳಿದರು. ಆಂಗ್ಲ ಭಾಷೆಯಲ್ಲಿ ಪರಿಣಿತಿಯಿಲ್ಲದ ಕಾರಣ ಕನ್ನಡತಿ ರಾಜೇಶ್ವರಿಗೆ ಮತ್ತೊಬ್ಬ ಕನ್ನಡತಿ ವೇದಾ ಕೃಷ್ಣಮೂರ್ತಿ ನೆರವಾದರು. ಸೈಮನ್ ಇಂಗ್ಲಿಷ್'ನಲ್ಲಿ ಕೇಳಿದ ಪ್ರಶ್ನೆಗಳನ್ನು ವೇದಾ ರಾಜೇಶ್ವರಿಗೆ ಕನ್ನಡದಲ್ಲಿ ಭಾಷಾಂತರಿಸಿದರು. ಕನ್ನಡದಲ್ಲಿ ಕೇಳಿಸಿಕೊಂಡ ಅವರು ಹಿಂದಿಯಲ್ಲಿ ಉತ್ತರಿಸಿದರು. ಹೀಗೆ ಕಸ್ತೂರಿ ಕನ್ನಡದ ಕಂಪು ಇಂಗ್ಲೆಂಡ್'ನ ಕ್ರಿಕೆಟ್ ಮೈದಾನದಲ್ಲಿ ಪಸರಿಸಿತು.  

ಕನ್ನಡ ಸಂಭಾಷಣೆಯ ವಿಡಿಯೋ

 

 

 

 

       

 

Follow Us:
Download App:
  • android
  • ios