Asianet Suvarna News Asianet Suvarna News

ವೀರೂ ಟೀಂ ಇಂಡಿಯಾ ಕೋಚ್ ಆಗಲಿಲ್ಲ ಯಾಕೆ?: ಎರಡು ಎಡವಟ್ಟುಗಳಿಂದ ಕೈತಪ್ಪಿದ ಕೋಚ್ ಹುದ್ದೆ!

ಟೀಂ ಇಂಡಿಯಾದಗೆ ರವಿ ಶಾಸ್ತ್ರಿ ಮುಖ್ಯಾ ಕೋಚ್​​ ಆಗಿ ಪ್ರವೇಶ ಕೊಟ್ಟಾಗಿದೆ. ಕೊಹ್ಲಿ ಹುಡುಗರ ಮೇಷ್ಟ್ರೂ ಆಗಿದ್ದಾರೆ. ಆದರೆ ಇಂದಿಗೂ ಭಾರತದ ಕೋಟ್ಯಾಂತರ ಜನಕ್ಕೆ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಅಂದರೆ ವಿರೇಂದ್ರ ಸೆಹ್ವಾಗ್​ ಯಾಕೆ ಕೋಚ್​​ ಆಗಲಿಲ್ಲ ಎನ್ನುವುದು. ಬಿಸಿಸಿಐ ಸಲಹಾ ಸಮಿತಿಗೆ ಸೆಹ್ವಾಗ್​ ಹತ್ತಿರದವರಾದರೂ ಕೋಚ್​ ಯಾಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

Two Mistakes By Which Virendra Sehwag Lost The Position Of Team Indias Coach

ಮುಂಬೈ(ಜು.17): ಟೀಂ ಇಂಡಿಯಾದಗೆ ರವಿ ಶಾಸ್ತ್ರಿ ಮುಖ್ಯಾ ಕೋಚ್​​ ಆಗಿ ಪ್ರವೇಶ ಕೊಟ್ಟಾಗಿದೆ. ಕೊಹ್ಲಿ ಹುಡುಗರ ಮೇಷ್ಟ್ರೂ ಆಗಿದ್ದಾರೆ. ಆದರೆ ಇಂದಿಗೂ ಭಾರತದ ಕೋಟ್ಯಾಂತರ ಜನಕ್ಕೆ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಅಂದರೆ ವಿರೇಂದ್ರ ಸೆಹ್ವಾಗ್​ ಯಾಕೆ ಕೋಚ್​​ ಆಗಲಿಲ್ಲ ಎನ್ನುವುದು. ಬಿಸಿಸಿಐ ಸಲಹಾ ಸಮಿತಿಗೆ ಸೆಹ್ವಾಗ್​ ಹತ್ತಿರದವರಾದರೂ ಕೋಚ್​ ಯಾಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಲಹಾ ಸಮಿತಿಯ ಫೇವರಾಗಿದ್ದರೂ ಸೆಹ್ವಾಗ್​ ಯಾಕೆ ನೇಮಕವಾಗಲಿಲ್ಲ..?

ಇದೊಂದು ಪ್ರಶ್ನೆ ಸದ್ಯ ಎಲ್ಲರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಟೀಂ ಇಂಡಿಯಾದ ಕೋಚ್​​​ ಆಗುವ ಎಲ್ಲಾ ಅರ್ಹತೆ ಸೆಹ್ವಾಗ್​​'ರಲ್ಲಿ ಇದ್ದರೂ ಯಾಕೆ ಕೋಚ್​​​ ಆಗಲಿಲ್ಲ, ಸಲಹಾ ಸಮಿತಿಯಲ್ಲಿರುವ ಸಚಿನ್​ ತೆಂಡೂಲ್ಕರ್​​​, ವಿವಿಎಸ್​​​ ಲಕ್ಷ್ಮಣ್​​​ ಮತ್ತು ಸೌರವ್​ ಗಂಗೂಲಿರೊಂದಿಗೆ ಸೆಹ್ವಾಗ್​​ ಉತ್ತಮ ಭಾಂಧವ್ಯ ಹೊಂದಿದ್ದರೂ ಸೆಹ್ವಾಗ್​ರನ್ನ ಯಾಕೆ ನೇಮಕ ಮಾಡಲಿಲ್ಲ, ಸ್ವತಃ ಬಿಸಿಸಿಐಯೇ ಬಲವಂತವಾಗಿ ಅರ್ಜಿ ಸಲ್ಲಿಸಲು ಹೇಳಿತ್ತು. ಆದ್ರೂ ಕೋಚ್​​​ ಹುದ್ದೆಗೆ ಸೆಹ್ವಾಗ್​​ರನ್ನ ಯಾಕೆ ಕೋಚ್​​​​ ಆಗಿ ನೇಮಿಸಲಿಲ್ಲ ಎಂಬ ಪ್ರಶ್ನೆಗಳು ಸದ್ಯ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದಕೆಲ್ಲಾ ಉತ್ತರ ಸ್ವತಃ ಸೆಹ್ವಾಗ್​.

​​​ತಮ್ಮ ತಲೆಯ ಮೇಲೆ ತಾವೇ ಕಲ್ಲು ಚಪ್ಪಡಿ ಎಳೆದುಕೊಂಡ್ರು

​​​ಅಂದು ಸೆಹ್ವಾಗ್​​ ಸರಿಯಾಗಿ ಇದ್ದಿದ್ದರೆ, ಇಂದು ರವಿಶಾಸ್ತ್ರಿ ಬದಲಿಗೆ ವಿರೇಂದ್ರ ಸೆಹ್ವಾಗ್​ ಟೀಂ ಇಂಡಿಯಾದ ಕೋಚ್​​​ ಆಗುತ್ತಿದ್ದರು. ಅವಮಾನ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗುವ ಸಂಧರ್ಭ ಬರುತ್ತಿರಲಿಲ್ಲ. ಸೆಹ್ವಾಗ್​​ ಮಾಡಿದ 2 ಎಡವಟ್ಟು ಇಂದು ಅವರಿಗೆ ಈ ಪರಿಸ್ಥಿತಿ ತಂದೊಡ್ಡಿದೆ.

ವಿರೂ ಮಾಡಿದ್ದ ಯಡವಟ್ಟುಗಳ ಬಗ್ಗೆ ಹೇಳುವುದಕ್ಕೂ ಮೊದಲು ಒಂದು ಇಂಟರೆಸ್ಟಿಂಗ್​ ವಿಷ್ಯವನ್ನು ಹೇಳಲೇಬೇಕು. ಸೆಹ್ವಾಗ್​​ ಇದೇ ತಿಂಗಳ 10ರಂದು ಸಲಹಾ ಸಮಿತಿ ಎದುರು ಸಂದರ್ಶನಕ್ಕೆ ತೆರಳುವುದಕ್ಕೂ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿಯನ್ನು ಸಂಪರ್ಕಿಸಿದ್ದರಂತೆ. ಕೊಹ್ಲಿಗೆ ಫೋನ್​ ಮಾಡಿ ತಾವು ಕೋಚ್​ ಆದರೆ ನಿನಗೇನು ಅಭಯಂತ್ರ ಇಲ್ಲವೇ ಎಂದು ಕೇಳಿದ್ದರಂತೆ. ಅದಕ್ಕೆ ಕೊಹ್ಲಿ ನಾನು ಕೋಚ್​​​ ನೇಮಕದ ವಿಷ್ಯಕ್ಕೆ ತಲೆ ಹಾಕುವುದಿಲ್ಲ ಎಂದಿದ್ದಾರಂತೆ. ಕೊಹ್ಲಿ ಹೀಗಂದ ಮೇಲೆನೇ ಸೆಹ್ವಾಗ್​ ಸಂದರ್ಶನಕ್ಕೆ ಹಾಜಾರಾಗಿದ್ದಂತೆ.

​​​ಸಂದರ್ಶನದಲ್ಲಿ ವೀಕ್​​​ ಪರ್ಫಾಮೆನ್ಸ್​​​..!

ಸೆಹ್ವಾಗ್​​ ಕೋಚ್​​​ ಸ್ಥಾನ ಕೈ ತಪ್ಪಲು ಮುಖ್ಯ ಕಾರಣವೆಂದರೆ ಸಂದರ್ಶನದಲ್ಲಿ ವಿಫಲರಾಗಿದ್ದು. ಕೊಹ್ಲಿಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ ಮೇಲೆ ಸಂದರ್ಶನಕ್ಕೆ ಹೋದ ವಿರೂ ಸಂದರ್ಶನದಲ್ಲಿ ಸಲಹಾ ಸಮಿತಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲವಂತೆ. ರವಿ ಶಾಸ್ತ್ರಿ ಮತ್ತು ಟಾಮ್​ ಮೂಡಿಗೆ ಹೋಲಿಸಿದ್ರೆ ಸೆಹ್ವಾಗ್​ ಪ್ರೆಸೆಂಟೇಷನ್​​ ತುಂಬಾನೆ ಕಳಪೆಯಾಗಿತ್ತಂತೆ. ವಿರೂರ ಪ್ರೆಸೆಂಟೇಷನ್ ಸಲಹಾ ಸಮಿತಿಗೂ ಬೇಸರ ತಂದಿತ್ತಂತೆ.

​​​ಸೆಹ್ವಾಗ್​​ ಜೊತೆ ಅವರ ತಂಡವನ್ನೂ ಕರೆತರಲು ಪ್ಲಾನ್​​​

ವಿರೂಗೆ ಕೋಚ್​​​ ಸ್ಥಾನ ಕೈ ತಪ್ಪಲು ಎರಡನೇ ಮುಖ್ಯ ಕಾರಣವಾಗಿದ್ದೆ ಅವರ ಒಂದು ಕಂಡಿಷನ್​. ತಾವು ಕೋಚ್​​ ಆಗಿ ನೇಮಕವಾದರೆ ಅವರದ್ದೇ ಅದ ಸಪೋರ್ಟಿಂಗ್​ ಸ್ಟಾಫ್​​ರನ್ನ ಕರೆತರುವ ಪ್ಲಾನ್​ ಮಾಡಿದ್ದರಂತೆ. ಅದನ್ನ ಬಿಸಿಸಿಐ ಬಳಿಯೂ ಪ್ರಸ್ತಾಪಿಸಿದ್ದರಂತೆ. ಅವರ ಪ್ಲಾನ್​ ಪ್ರಕಾರ ಫಿಸಿಯೋ ಆಗಿ ಅಮಿತ್​​​ ತ್ಯಾಗಿಯನ್ನು ನೇಮಕ ಮಾಡಬೇಕಿತ್ತಂತೆ, ಸಹಾಯಕ ಕೋಚ್​​ ಆಗಿ ಮಿಥುನ್​ ಮನಾಸ್​​​ರನ್ನ ನೇಮಿಸಬೇಕಿತ್ತಂತೆ. ಈ ಷರತ್ತು ಬಿಸಿಸಿಐಗೆ ಇಷ್ಟವಾಗಲಿಲ್ಲ. ಇದು ಸೆಹ್ವಾಗ್​​ ಕೋಚ್​​​​ ನೇಮಕಕ್ಕೆ ಭಾರಿ ಹಿನ್ನಡೆಯಾಯಿತು.

ಇವೆರಡು ಕಾರಣಗಳಿಂದ ಸೆಹ್ವಾಗ್​​ ತಮ್ಮ ಕೋಚ್​​​ ಸ್ಥಾನವನ್ನು ಕಳೆದುಕೊಂಡರಂತೆ. ಸದ್ಯ ಕೋಚ್​​​ ಹುದ್ದೆ ಕೈ ತಪ್ಪಿದ ಬೇಸರದಲ್ಲಿರುವ ವಿರೂ ವಿದೇಶಕ್ಕೆ ಹಾರಿದ್ದಾರೆ. ತಮ್ಮ ನೋವನ್ನ ಮರೆಯಲು ಕೆನಡಾಗೆ ಹೋಗಿದ್ದಾರೆ. ಇಷ್ಟರಲ್ಲಾಗಲೇ ಸೆಹ್ವಾಗ್​ಗೆ ತಮ್ಮ ತಪ್ಪಿನ ಅರಿವಾಗಿರುತ್ತೆ. ತಮ್ಮ ತಲೆಯ ಮೇಲೆ ತಾವೆ ಕಲ್ಲು ಚಪ್ಪಡಿ ಎಳದುಕೊಂಡಿರೋದು ತಿಳಿದಿರುತ್ತೆ. ಆದ್ರೆ ಕಾಲ ಮೀರಿದ್ದಾಗಿದೆ. ಈಗ ಚಿಂತಿಸಿ ಪ್ರಯೋಜನವಿಲ್ಲ. ಇನ್ನೂ ಮುಂದಾದರೂ ಯೋಚಿಸಿ ಮುನ್ನಡೆಯುವುದು ಉತ್ತಮ.

Follow Us:
Download App:
  • android
  • ios