Asianet Suvarna News Asianet Suvarna News

ಫ್ರಾಂಚೈಸಿಗಳ ಮಾತಿಗೆ ಇರ್ಫಾನ್ ತಬ್ಬಿಬ್ಬಾದ: ಅಭಿಮಾನಿಗಳ ಬಳಿ ನೋವು ತೋಡಿಕೊಂಡ ಪಠಾಣ್

IPL 10ನೇ ಆವೃತ್ತಿಯಿಂದ ಕಿಕ್'​​ಔಟ್​​​, ಅದಕ್ಕೆ ಫ್ರಾಂಚೈಸಿಗಳು ಕೊಟ್ಟ ಕಾರಣ, ಅಭಿಮಾನಿಗಳ ಬೇಸರ ಇವೆಲ್ಲದರಿಂದ ಡಿಪ್ರೆಷನ್​​​'ಗೆ ಒಳಗಾದ ಪಠಾಣ್​​ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ತನ್ನ ಅಭಿಮಾನಿಗಳನ್ನ ಸಂತೈಸುವ ಜೊತೆಗೆ ತಮ್ಮಷ್ಟಕ್ಕೆ ತಮ್ಮನ್ನು ಸಂತೈಸಿಕೊಂಡಿದ್ದಾರೆ.

This Is What Irfan Pathan Says With His Fans

IPL 10ನೇ ಆವೃತ್ತಿಯಿಂದ ಕಿಕ್'​​ಔಟ್​​​, ಅದಕ್ಕೆ ಫ್ರಾಂಚೈಸಿಗಳು ಕೊಟ್ಟ ಕಾರಣ, ಅಭಿಮಾನಿಗಳ ಬೇಸರ ಇವೆಲ್ಲದರಿಂದ ಡಿಪ್ರೆಷನ್​​​'ಗೆ ಒಳಗಾದ ಪಠಾಣ್​​ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ತನ್ನ ಅಭಿಮಾನಿಗಳನ್ನ ಸಂತೈಸುವ ಜೊತೆಗೆ ತಮ್ಮಷ್ಟಕ್ಕೆ ತಮ್ಮನ್ನು ಸಂತೈಸಿಕೊಂಡಿದ್ದಾರೆ.

‘2010 ರಲ್ಲಿ ನಾನು 5 ಬೆನ್ನು ಮೂಳೆಗಳನ್ನ ಮುರಿದುಕೊಂಡಿದ್ದೆ ಆಗ ನನ್ನ ವೈದ್ಯರು ನಾನೆಂದೂ ಕ್ರಿಕೆಟ್​​ ಆಡಲು ಸಾಧ್ಯವಿಲ್ಲ ನಿನ್ನ ಕನಸನನು ಮರೆತುಬಿಡು ಎಂದಿದ್ದರು. ಎಷ್ಟೇ ಮೂಳೆಗಳು ಮುರಿದರೂ ನಾನು ಭಾರತಕ್ಕಾಗಿ ಕ್ರಿಕೆಟ್​​ ಅನ್ನು ಆಡುವುದು ಬಿಡುವುದಿಲ್ಲ ಎಂದು ಆವತ್ತು ಹೇಳಿದ್ದೆ. ನಂತರ ನಾನು ಕಠಿಣ ಅಭ್ಯಾಸ ಮಾಡಿ ಮತ್ತೆ ಟೀಂ ಇಂಡಿಯಾಗೆ ಕಮ್​'ಬ್ಯಾಕ್​ ಮಾಡಿದ್ದೆ. ನಾನು ನನ್ನ ಜೀವನದಲ್ಲಿ ಹಲವು ಬಾರಿ ತೊಡಕುಗಳು ಬಂದಿವೆ ಆದ್ರೆ ನಾನು ಎಲ್ಲವನ್ನೂ ಎದುರಿಸಿ ಜಯಸಿದ್ದೇನೆ. ಈಗಲು ನನಗೆ ಕೆಲವು ತೊಡಕುಗಳು ಬಂದಿವೆ. ಆದರೆ ನಾನು ಸೋಲುವುದಿಲ್ಲ. ಖಂಡಿತ ನಾನು ಮತ್ತೆ ಮಟ್ಟಿ ನಿಲ್ಲುತ್ತೇನೆ.

ನನ್ನೆಲ್ಲಾ ಅಭಿಮಾನಿಗಳಿಗೆ                     

-ಇರ್ಫಾನ್​​ ಪಠಾಣ್​​, ಟೀಂ ಇಂಡಿಯಾ ಆಟಗಾರ.

ಈ ಮಾತುಗಳು ಅವರ ಅಭಿಮಾನಿಗಳನಗ್ನಷ್ಟೇ ಅಲ್ಲ, ಅವರ ಬೌಲಿಂಗ್​​​ ಅನ್ನು ಆಸ್ವಾಧಿಸಿದ ಪ್ರತೀ ಕ್ರಿಕೆಟ್​​ ಅಭಿಮಾನಿಗಳ ಹೃದಯವನ್ನ ತಟ್ಟಿದಂತೂ ಸುಳ್ಳಲ್ಲ.

Follow Us:
Download App:
  • android
  • ios