ಕೊಹ್ಲಿ ದಾಖಲೆ ಸುಳ್ಳಾಯ್ತು: ವಿರಾಟ್'ಗಿಂತ ಹೆಚ್ಚು ರನ್ ಹೊಡೆದಿದ್ದ ಮತ್ತೊಬ್ಬ ಭಾರತೀಯ ಆಟಗಾರ
sports
By Suvarna Web Desk | 03:35 PM Wednesday, 11 January 2017


ಆದರೆ ವಿರಾಟ್ ಕೊಹ್ಲಿಗಿಂತ ಭಾರತ ತಂಡದ ಮತ್ತೊಬ್ಬ ಆಟಗಾರ 18 ವರ್ಷದ ಹಿಂದೆಯೇ ಕೊಹ್ಲಿಗಿಂತ ಹೆಚ್ಚು ರನ್ ಪೇರಿಸಿದ್ದರು. ಆ ದಾಖಲೆ ಇನ್ನು ಹಾಗೆಯೇ ಇದೆ.

 ಕೆಲವು ದಿನಗಳ ಹಿಂದೆ ಅಂತರ ರಾಷ್ಟ್ರೀಯ ಮೂರು ರಂಗಗಳಲ್ಲಿಯೂ 2016ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಅತಿ ಹೆಚ್ಚು ರನ್ ಹೊಡೆದು ದಾಖಲೆ ನಿರ್ಮಿಸಿದ್ದರು ಎಂಬ ಎಲ್ಲಡೆ ಸುದ್ದಿಯಾಗಿತ್ತು. ಆದರೆ ವಿರಾಟ್ ಕೊಹ್ಲಿಗಿಂತ ಭಾರತ ತಂಡದ ಮತ್ತೊಬ್ಬ ಆಟಗಾರ 18 ವರ್ಷದ ಹಿಂದೆಯೇ ಕೊಹ್ಲಿಗಿಂತ ಹೆಚ್ಚು ರನ್ ಪೇರಿಸಿದ್ದರು. ಆ ದಾಖಲೆ ಇನ್ನು ಹಾಗೆಯೇ ಇದೆ.

ಕೊಹ್ಲಿ 2016ರಲ್ಲಿ ಏಕದಿನ, ಟೆಸ್ಟ್. ಟಿ20 ಕ್ರಿಕೆಟ್'ನಲ್ಲಿ 2595 ರನ್ ಹೊಡೆದಿದ್ದರು. ಭಾರತ ತಂಡದ ಗೋಡೆ ಎಂದೇ ಖ್ಯಾತರಾಗಿದ್ದ ಮತ್ತೊಬ್ಬ ಮಾಜಿ ನಾಯಕ ರಾಹುಲ್ ದ್ರಾವಿಡ್ 1999 ರಲ್ಲಿ 2626 ರನ್ ಪೇರಿಸಿದ್ದರು. ಇಷ್ಟು ರನ್'ಗಳನ್ನು ದ್ರಾವಿಡ್ ಹೊಡೆದಿದ್ದು ಕೇವಲ ಏಕದಿನ ಹಾಗೂ ಟೆಸ್ಟ್ ರಂಗದಲ್ಲಿ.  

Show Full Article
COMMENTS

Currently displaying comments and replies