Asianet Suvarna News Asianet Suvarna News

(Video)ಭಾರತ VS ಆಸ್ಟ್ರೇಲಿಯಾ ಸರಣಿಗೆ ಸೂಪರ್ ಪ್ರೋಮೋ: ಪ್ರೋಮೋ ನೋಡಿಯೇ ವೀಕ್ಷಕ ಫಿದಾ

ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ ಎಂದರೆ ತಿಂಗಳು ಮೊದಲೇ ಕ್ರಿಕೆಟ್ ಪ್ರೇಮಿಗಳು ತಯಾರಿ ನಡೆಸುತ್ತಾರೆ. ಆ ಪಂದ್ಯವನ್ನು ಪ್ರಸಾರ ಮಾಡುವ ಸ್ಪೋರ್ಟ್ಸ್ ಚಾನಲ್'ಗಳು ವಿಭಿನ್ನ ಪ್ರೋಮೋಗಳನ್ನು ಮಾಡಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನ ಸೆಳೆಯುತ್ತಾರೆ. ಆದರೆ ಈಗ ದುನಿಯಾ ಬದಲಾಗಿದೆ. ಕ್ರಿಕೆಟ್'ನಲ್ಲಿ ಭಾರತಕ್ಕೆ ಪಾಕ್ ಬದಲಿಗೆ ಆಸ್ಟ್ರೇಲಿಯಾ ಬದ್ಧ ವೈರಿಯಾಗಿದೆ. ಅದಕ್ಕೆ ಸಾಕ್ಷಿ ಚಾನಲ್'ವೊಂದು ಬಿಟ್ಟಿರುವ ಈ ಹೊಸ ಪ್ರೊಮೋ.

the Kangaroos enter Tiger territory

2015ರ ವಿಶ್ವಕಪ್​​ ವೇಳೆ ಬಂದ ಈ ಪ್ರೋಮೋವನ್ನು ಭಾರತೀಯ ಕ್ರಿಕೆಟ್​​ ಪ್ರೇಮಿಗಳು ಇಂದಿಗೂ ಮರೆತೇ ಇಲ್ಲ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2015ರ ವಿಶ್ವಕಪ್'​ನ ಪ್ರಸಾರದ ಹಕ್ಕು ಪಡೆದಿದ್ದ ಸ್ಟಾರ್​​​ ಕಂಪನಿ, ಆ ಟೂರ್ನಿಯಲ್ಲಿ ನಡೆಯಬೇಕಿದ್ದ ಇಂಡಿಯಾ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹೆಚ್ಚು ಅಭಿಮಾನಿಗಳನ್ನ ಸೆಳೆಯಲು. ಕ್ರಿಕೆಟ್​​ ಪ್ರೇಮಿಗಳಲ್ಲಿ ಕಿಚ್ಚು ಹಚ್ಚಲು ಅಂದು ಈ ರೀತಿಯ ಪ್ರೋಮೋಗಳನ್ನ ಬಿಟ್ಟು ಸಕ್ಸಸ್​​​​ ಆಗಿತ್ತು. ಇಂತಹ ಪ್ರೋಮೋಗಳು ದೇಶದ ಕ್ರಿಕೆಟ್​​ ಅಭಿಮಾನಿಗಳ ಗಮನ ಸೆಳದಿತ್ತು. ಟಿಆರ್​​​​ಪಿ ಕೂಡ ಹೆಚ್ಚಿತ್ತು.

ಭಾರತ-ಪಾಕಿಸ್ತಾನ ಪಂದ್ಯಗಳು ಎಷ್ಟು ರೋಚಕತೆ ಇರುತ್ತೋ ಅಷ್ಟೇ ರೋಚಕತೆ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದಗಲೂ ಇರುತ್ತೆ. ಈ ಅವಕಾಶವನ್ನ ಮಿಸ್​​​ ಮಾಡಿಕೊಳ್ಳಲು ಬಯಸದ ಸ್ಟಾರ್​​ ನೆಟ್​​ವರ್ಕ್​ ತಮ್ಮ ವೀಕ್ಷಕರಿಗೆ ಹೊಸ ಪ್ರೋಮೊವನ್ನ ರೆಡಿ ಮಾಡಿದೆ. ಈ ಪ್ರೋಮೋ ಮೂಲಕ ಮತ್ತೆ ಭಾರತದ ಪ್ರೇಕ್ಷಕರನ್ನ ರೊಚ್ಚಿಗೆಬ್ಬಿಸಿದೆ.

 

 

 

 

 

 

 

 

 

 

 

ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಆದರೆರೆ ಈಗಾಗಲೇ ಈ ವಿಭಿನ್ನ ಪ್ರೋಮೋವನ್ನ ಬಿಟ್ಟು ಭಾರತದ ಕ್ರಿಕೆಟ್​​ ಪ್ರೇಮಿಗಳನ್ನ ಇನ್ನಿಲ್ಲದಂತೆ ಸೆಳಿತ್ತಿದೆ. ಅಷ್ಟೇ ಅಲ್ಲ ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ಭಾರತದ ಅಭಿಮಾನಿಗಳಲ್ಲಿ ಎಷ್ಟು ಕ್ರೇಜ್​​ ಹುಟ್ಟಿಸಿದೆ ಎಂದು ತೋರಿಸಿಕೊಟ್ಟಿದ್ದಾರೆ.

Follow Us:
Download App:
  • android
  • ios