Asianet Suvarna News Asianet Suvarna News

ಕಾಶ್ಮೀರದಲ್ಲಿ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ರಾಷ್ಟ್ರಗೀತೆ..!

ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಉಗ್ರರ ಪೋಸ್ಟರ್‌ಗಳನ್ನು ಸಹ ಸ್ಟೇಡಿಯಂ ಸುತ್ತಮುತ್ತಲಿನ ಗೋಡೆಗಳ ಮೇಲೆ ಅಂಟಿಸಲಾಗಿತ್ತು ಎಂದು ಹೇಳಲಾಗಿದೆ.

Students wear Pakistan uniform sing POK anthem

ಶ್ರೀನಗರ(ಮೇ.23): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮೈದಾನವೊಂದರಲ್ಲಿ ಕ್ರಿಕೆಟ್‌ ಪ್ರಾರಂಭಕ್ಕೂ ಮುನ್ನ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಗಿದೆ.

ಈ ವಿಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಈ ಕುರಿತಾದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಪುಲ್ವಾಮಾ ಜಿಲ್ಲೆಯ ಸ್ಟೇಡಿಯಂನಲ್ಲಿ ಶೈನಿಂಗ್‌ ಸ್ಟಾರ್ಸ್‌ ಮತ್ತು ಪುಲ್ವಾಮಾ ಟೈಗರ್ಸ್‌ ನಡುವೆ ಫೈನಲ್‌ ಕ್ರಿಕೆಟ್‌ ಪಂದ್ಯದ ಮುನ್ನ ಎರಡೂ ತಂಡಗಳು ಸಾಲಾಗಿ ನಿಂತುಕೊಂಡ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆಯನ್ನು ಮೈಕ್‌'ನಲ್ಲಿ ಪ್ರಸಾರ ಮಾಡಲಾಗಿದೆ.

ಈ ವಿಡಿಯೊ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಉಗ್ರರ ಪೋಸ್ಟರ್‌ಗಳನ್ನು ಸಹ ಸ್ಟೇಡಿಯಂ ಸುತ್ತಮುತ್ತಲಿನ ಗೋಡೆಗಳ ಮೇಲೆ ಅಂಟಿಸಲಾಗಿತ್ತು ಎಂದು ಹೇಳಲಾಗಿದೆ.

ಆ ದೃಶ್ಯ ನಿಮ್ಮ ಮುಂದೆ...

Follow Us:
Download App:
  • android
  • ios