ಐದನೇ ಅಂಧರ ಏಕದಿನ ವಿಶ್ವಕಪ್ ಟೂರ್ನಿಗೆ ಅಫ್ರಿದಿ ರಾಯಭಾರಿ
sports
By Suvarna Web Desk | 10:01 AM March 18, 2017

ಐದನೇ ಆವೃತ್ತಿಯ ಅಂಧರ ಏಕದಿನ ವಿಶ್ವಕಪ್ ಟೂರ್ನಿಯು 2018ರ ಜನವರಿಯಲ್ಲಿ ಜರುಗಲಿದ್ದು, ಪಾಕಿಸ್ತಾನ ಅಂಧರ ಕ್ರಿಕೆಟ್ ಕೌನ್ಸಿಲ್, ಯುನೈಟೆಡ್ ಅರಬ್ ಎಮಿರೈಟ್ಸ್ ಮತ್ತು ಪಾಕಿಸ್ತಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ.

ಕರಾಚಿ(ಮಾ.18): ಐದನೇ ವಿಶ್ವ ಅಂಧರ ಕ್ರಿಕೆಟ್ ಪಂದ್ಯಾವಳಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಇದನ್ನು ಪಾಕಿಸ್ತಾನ ಅಂಧರ ಕ್ರಿಕೆಟ್ ಸಮಿತಿ (ಪಿಬಿಸಿಸಿ) ಸ್ಪಷ್ಟಪಡಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಆಟಗಾರ ಅಫ್ರಿದಿ, ವಿಶ್ವ ಜಾಗತಿಕ ಕ್ರಿಕೆಟ್‌'ನಲ್ಲಿ ತಮ್ಮದೇ ಆದ ಜನಪ್ರಿಯತೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ರೋಲ್ ಮಾಡೆಲ್ ಎನಿಸಿದ್ದಾರೆ. ಹೀಗಾಗಿ ಅಫ್ರಿದಿ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಪಿಬಿಸಿಸಿ ಅಧ್ಯಕ್ಷ ಸೈಯದ್ ಸುಲ್ತಾನ್ ಷಾ ಹೇಳಿದ್ದಾರೆ.

ಅಫ್ರಿದಿ ಅವರ ಪ್ರಚಾರದಿಂದ ಅಂಧರ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೇರಲಿದೆ ಎಂದು ಸೈಯದ್ ತಿಳಿಸಿದ್ದಾರೆ.

ಐದನೇ ಆವೃತ್ತಿಯ ಅಂಧರ ಏಕದಿನ ವಿಶ್ವಕಪ್ ಟೂರ್ನಿಯು 2018ರ ಜನವರಿಯಲ್ಲಿ ಜರುಗಲಿದ್ದು, ಪಾಕಿಸ್ತಾನ ಅಂಧರ ಕ್ರಿಕೆಟ್ ಕೌನ್ಸಿಲ್, ಯುನೈಟೆಡ್ ಅರಬ್ ಎಮಿರೈಟ್ಸ್ ಮತ್ತು ಪಾಕಿಸ್ತಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ.

ಒಟ್ಟು 9 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು ಈಗಾಗಲೇ ನಾಲ್ಕು ತಂಡಗಳು ಪಾಕಿಸ್ತಾನದಲ್ಲಿ ಆಡಲು ಒಪ್ಪಿಕೊಂಡಿವೆ ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.

Show Full Article