Asianet Suvarna News Asianet Suvarna News

ಅಕ್ಟೋಬರ್ ಮಾಸಾಂತ್ಯಕ್ಕೆ ಕಣಕ್ಕಿಳಿಯಲಿದ್ದಾರೆ ಸೈನಾ

Saina Nehwal Hopes to Return to the Court by October End

ಹೈದರಾಬಾದ್‌(ಸೆ.28): ಅಕ್ಟೋಬರ್‌ ತಿಂಗಳ ಮಾಸಾಂತ್ಯಕ್ಕೆ ಮತ್ತೆ ಬ್ಯಾಡ್ಮಿಂಟನ್‌ ಕೋರ್ಟ್‌ಗೆ ಇಳಿಯವುದಾಗಿ ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಹೇಳಿದ್ದಾರೆ.

‘‘ಮೊಣಕಾಲು ನೋವಿನಿಂದಾಗಿ ಪುನಶ್ಚೇತನ ಶಿಬಿರದಲ್ಲಿ ಈಗಾಗಲೇ ಆರು ವಾರಗಳನ್ನು ಸವೆಸಿಯಾಗಿದೆ. ವೈದ್ಯ ಹೀತ್‌ ಮ್ಯಾಥ್ಯೂಸ್‌ ಅವರ ಮಾರ್ಗದರ್ಶನದಲ್ಲಿ ಚೇತರಿಸಿಕೊಳ್ಳುತ್ತಿದ್ದೇನೆ. ಪ್ರಸಕ್ತ ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿರುವ ನಾನು ಮತ್ತಷ್ಟು ಸ್ಥಾನ ಕುಸಿತ ಕಾಣುವ ಸಂಭವವಿದೆ. ಆದಾಗ್ಯೂ ನವೆಂಬರ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಮತ್ತೆ ಶ್ರೇಯಾಂಕದಲ್ಲಿ ಪ್ರಗತಿ ಕಾಣುವ ವಿಶ್ವಾಸವಿದೆ’’ ಎಂದು ಸೈನಾ ನೆಹ್ವಾಲ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, ಇತ್ತೀಚೆಗೆ ಮುಕ್ತಾಯವಾದ ರಿಯೊ ಒಲಿಂಪಿಕ್ಸ್'ನಲ್ಲಿ ಗುಂಪು ಹಂತದಲ್ಲೇ ಉಕ್ರೇನ್ ಆಟಗಾರ್ತಿ ಎದುರು ಮುಗ್ಗರಿಸುವ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಮೂಡಿಸಿದ್ದರು.

Follow Us:
Download App:
  • android
  • ios