Asianet Suvarna News Asianet Suvarna News

ಕನ್ನಡದಲ್ಲಿ ರಾಹುಲ್ ದ್ರಾವಿಡ್ ಸಿನಿಮಾ: ನಿರ್ದೇಶಕರ್ಯಾರು ಗೊತ್ತೆ ?

ಕ್ರಿಕೆಟರ್ ಧೋನಿ ಜೀವನ ಬೆಳ್ಳಿ ತೆರೆಗೆ ಬಂದು ಹೋಗಿದೆ. ದುಡ್ಡನ್ನೂ ಬಾಚಿಕೊಂಡಿದೆ. ಕ್ರಿಕೆಟರ್ ಅಜರ್ ಮೇಲೂ ಅದ್ಭುತ ಸಿನಿಮಾ ಬಂದು ಹೋಗಿದೆ. ಸಚಿನ್ ತೆಂಡೂಲ್ಕರ್ ಜೀವನ ಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್  ಮೇ.26 ಕ್ಕೆ ತೆರೆ ಕಾಣಲು ಸಿದ್ದವಾಗಿದೆ.

Rahul dravid  life story Now Movie

ಬೆಂಗಳೂರು(ಮೇ.15): ಬಾಲಿವುಡ್​'ನಲ್ಲಿ ಕ್ರೀಡಾಧಾರಿತ ಚಿತ್ರ ಹೆಚ್ಚು ಹೆಚ್ಚು ಬರ್ತಿವೆ. ಕ್ರಿಕೆಟರ್'ಗಳ ಜೀವನಾಧಾರಿತ ಚಿತ್ರಗಳೂ ಬಂದು ಹೋಗಿವೆ. ಅಜರುದ್ದೀನ್,ಧೋನಿ ಮೇಲೂ ಸಿನಿಮಾ ಆಗಿವೆ.ಆದರೆ, ಕನ್ನಡದಲ್ಲಿಯೇ ಈಗ ಕ್ರಿಕೆಟರ್ ರಾಹುಲ್ ದ್ರಾವಿಡ್ ಜೀನದ ಮೇಲೆ ಸಿನಮಾ ಆಗಲಿದೆ. ಹೀಗೊಂದು ಸುದ್ದಿ ಈಗ ದಟ್ಟವಾಗಿ ಹರಡಿದೆ.

ಬಾಲಿವುಡ್ ಅಂಗಳದಲ್ಲೀಗ ಕ್ರೀಡಾಧರಿಸಿದ ಚಿತ್ರಗಳದ್ದೇ ಬೇಡಿಕೆ. ನೂರಾರು ಕೋಟಿ ಬಾಚಿಕೊಂಡು ಕೊಡ್ತಿರೋದು ಅಂತಹ ಕ್ರೀಡೆ ಆಧರಿಸಿದ ಚಿತ್ರಗಳೇ. ಕ್ರಿಕೆಟರ್ ಧೋನಿ ಜೀವನ ಬೆಳ್ಳಿ ತೆರೆಗೆ ಬಂದು ಹೋಗಿದೆ. ದುಡ್ಡನ್ನೂ ಬಾಚಿಕೊಂಡಿದೆ. ಕ್ರಿಕೆಟರ್ ಅಜರ್ ಮೇಲೂ ಅದ್ಭುತ ಸಿನಿಮಾ ಬಂದು ಹೋಗಿದೆ. ಸಚಿನ್ ತೆಂಡೂಲ್ಕರ್ ಜೀವನ ಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್  ಮೇ.26 ಕ್ಕೆ ತೆರೆ ಕಾಣಲು ಸಿದ್ದವಾಗಿದೆ.

ಕ್ರಿಕೆಟ್ ಆಟಗಾರರಿಂದ ಸಿನಿಮಾ

ಕನ್ನಡದ ಕಣ್ಣುಗಳು ರಾಹುಲ್ ಮೇಲೆ ಬಿದ್ದಿವೆ.ಹತ್ತಿರದಿಂದ ರಾಹುಲ್'ರನ್ನ ಕಂಡ ಯುವ ಮನಸುಗಳೆ ಆ ಕನಸು ಕಂಡಿವೆ. ಅದು ಯಾರೂ ಅಂತಿರೋ ರಂಗಿತರಂಗ ಚಿತ್ರದ ಅನೂಪ್-ನಿರೂಪ್ ಬಂಡಾರಿ. ಹೌದು, ರಾಹುಲ್ ದ್ರಾವಿಡ್ ಬಗ್ಗೆ ಸಿನಿಮಾ ಮಾಡೊ ಕನಸು ಹೊತ್ತವರು ರಂಗಿತರಂಗ ಚಿತ್ರದ ಅನೂಪ್ ಮತ್ತು ನಿರೂಪ್. ಇವರು ಸ್ವತಃ ಸ್ಟೇಟ್ ಲೆವಲ್ ಕ್ರಿಕೆಟ್ ಆಟಗಾರರು. ಇಬ್ಬರು ರಾಹುಲ್ ದ್ರಾವಿಡ್'ರನ್ನ ಹತ್ತಿರದಿಂದಲೂ ನೋಡಿದ್ದಾರೆ.
ಆದರೆ, ರಾಹುಲ್ ಮೇಲೆ ಸಿನಿಮಾ ಆಗ್ತದೋ ಬಿಡ್ತದೋ. ರಾಹುಲ್ ಅದನ್ನ ಒಪ್ತಾರೋ ಬಿಡ್ತಾರೆ. ಆದರೆ, ಸುದ್ದಿ ಮಾತ್ರ ದಟ್ಟವಾಗಿದೆ. ಅನೂಪ್ ಅದಕ್ಕೆ ಕ್ಲಾರಿಫಿಕೇಷನ್ ಕೂಡ ಕೊಟ್ಟಿದ್ದಾರೆ. ಒಂದು ವೇಳೆ ರಾಹುಲ್ ಒಪ್ಪಿದರೆ ಸಿನಿಮಾ ಮಾಡೋ ದೊಡ್ಡ ಆಸೆನೂ ಅನೂಪ್'ಗಿದೆ. ಸದ್ಯಕ್ಕೆ ಅನೂಪ್ ಯೋಚನೆ ಮಾಡ್ತಿದ್ದಾರೆ. ಕಥೆ ಆದ್ಮೇಲೆ ರಾಹುಲ್​ ರನ್ನ ಮೀಟ್ ಮಾಡಿದರೂ ಆಶ್ಚರ್ಯ  ಇಲ್ಲ.

-ರೇವನ್ ಪಿ.ಜೇವೂರ್​, ಸುವರ್ಣ ನ್ಯೂಸ್

Follow Us:
Download App:
  • android
  • ios