Asianet Suvarna News Asianet Suvarna News

ರಾಯಲ್ಟಿಯಲ್ಲಿ ಸೈನಾ, ಸಾನಿಯಾ ಹಿಂದಿಕ್ಕಿದ ಸಿಂಧು

PV Sindhu Rio silver leads to 3 year Rs 50cr golden deal

ನವ​ದೆ​ಹ​ಲಿ(ಸೆ.27): ಬೇಸ್‌​ಲೈನ್‌ ಎಂಬ ಫಿಟ್ನೆಸ್‌ ಕಂಪ​ನಿ​ಯೊಂದಕ್ಕೆ ಮುಂದಿನ ಮೂರು ವರ್ಷ​ಗಳ ಕಾಲ ರಾಯ​ಭಾ​ರಿ​ಯಾ​ಗಿ ಆಯ್ಕೆ​ಯಾ​ಗಿ​ರುವ ರಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು, ಗೌರವ ಧನದ ವಿಚಾರದಲ್ಲಿ ಸೈನಾ ನೆಹ್ವಾಲ್‌ ಮತ್ತು ಸಾನಿಯಾ ಮಿರ್ಜಾ ಅವರನ್ನೂ ಹಿಂದಿಕ್ಕಿದ್ದಾರೆ. ಗೌರವ ಧನದ ರೂಪ​ದ​ಲ್ಲಿ ರೂ.50 ಕೋಟಿ ಮೊತ್ತ​ವನ್ನು ಪಡೆ​ದಿ​ದ್ದಾ​ರೆ ಎಂದು ‘ಫಸ್ಟ್‌ ಪೋಸ್ಟ್‌’ ವರದಿ ಮಾಡಿದೆ. ಈ ಮೂಲಕ ಅವರು, ದೇಶ​ದಲ್ಲಿ ಕ್ರಿಕೆಟೇತರ ಕ್ರೀಡಾ​ಳು​ಗ​ಳಿಗೂ ಶುಕ್ರದೆಸೆ ಆರಂಭ​ವಾ​ಗಿ​ರು​ವು​ದನ್ನು ಸಾಬೀ​ತು​ಪ​ಡಿ​ಸಿ​ದ್ದಾರೆಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.

ಮೂಲ​ಗಳ ಪ್ರಕಾರ, ಸಿಂಧು ಅವರನ್ನು ರಾಯ​ಭಾ​ರಿ​ಯ​ನ್ನಾ​ಗಿ​ಸಲು ಸುಮಾರು 16 ಕಂಪ​ನಿ​ಗಳು ಪೈಪೋಟಿ ನಡೆ​ಸಿವೆ. ಇವು​ಗ​ಳಲ್ಲಿ ಸಿಂಧು ಅವರು ಖುದ್ದಾಗಿ 9 ಕಂಪ​ನಿ​ಗಳ ಆಫ​ರ್‌​ಗ​ಳನ್ನು ಮಾತ್ರ ಪರಿ​ಗ​ಣ​ನೆಗೆ ತೆಗೆ​ದು​ಕೊಂಡಿದ್ದು ಇನ್ನೂ ಯಾವು​ದಕ್ಕೂ ಒಪ್ಪಿಗೆ ನೀಡಿಲ್ಲ ಎಂದು ಹೇಳ​ಲಾ​ಗಿದೆ.

ಸೈನಾ, ಸಾನಿಯಾ ಹಿಂದ​ಕ್ಕೆ: ಈ ಹಿಂದೆ, 2015ರ ಫೋರ್ಬ್ಸ್ ಸೆಲೆಬ್‌ ಪಟ್ಟಿ​ಯ ಪ್ರಕಾರ, ಸೈನಾ ಅವರ ಗರಿಷ್ಠ ರಾಯಲ್ಟಿಮೊತ್ತ ವಾರ್ಷಿಕ ಸರಾ​ಸರಿ ಲೆಕ್ಕ​ದಲ್ಲಿ ರೂ. 16.99 ಕೋಟಿ ಇದ್ದರೆ, ಸಾನಿಯಾ ಅವರ ಮೊತ್ತ ರೂ. 13.25 ಕೋಟಿ​ಯ​ಷ್ಟಿತ್ತು. ಎರಡು ವರ್ಷ​ಗಳ ಹಿಂದೆ ಸೈನಾ ನೆಹ್ವಾಲ್‌ ಅವರು, ಐಒ​ಎಸ್‌ ಸ್ಪೋರ್ಟ್ಸ್ ಹಾಗೂ ಎಂಟ​ರ್‌​ಟೈ​ನ್‌​ಮೆಂಟ್‌ ಸಂಸ್ಥೆಯ ಎರಡು ವರ್ಷ​ಗಳ ರಾಯ​ಭಾ​ರ​ತ್ವ​ಕ್ಕಾಗಿ ಸಹಿ ಮಾಡಿ​ದಾಗ ರೂ. 25 ಕೋಟಿ ಪಡೆ​ದಿ​ದ್ದರು. ಆ ಮೂಲಕ, ಅದು ಕ್ರಿಕೆಟ್‌ ಹೊರ​ತಾದ ಆಟ​ಗಾ​ರ​ರೊ​ಬ್ಬರು ಗಳಿ​ಸಿದ ಅತಿ ದೊಡ್ಡ ಗೌರ​ವ​ ಧನ ಹೆಗ್ಗ​ಳಿಕೆಗೆ ಪಾತ್ರ​ರಾ​ಗಿ​ದ್ದರು. ಇದೀಗ, ಬೇಸ್‌​ಲೈನ್‌ ಸಂಸ್ಥೆ​ಯೊಂದಿ​ಗಿನ ಒಪ್ಪಂದ ಮೂಲಕ ಆ ದಾಖ​ಲೆ​ಯನ್ನು ಸಿಂಧು ಮುರಿ​ದಿ​ದ್ದಾರೆ.

Follow Us:
Download App:
  • android
  • ios