Asianet Suvarna News Asianet Suvarna News

ಹಾಶೀಂ ಆಮ್ಲಾ ಆಟಕ್ಕೆ ಮಣಿದ ಲಯನ್ಸ್

ಕನ್ನಡಿಗ ಕೆ.ಸಿ ಕಾರ್ಯಪ್ಪ, ಅಕ್ಷರ್ ಪಟೇಲ್ ಹಾಗೂ ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಪಡೆದು ಕಿಂಗ್ಸ್ ಇಲೆವನ್ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Punjab Beat Gujarat By 26 Runs

ರಾಜ್‌'ಕೋಟ್(ಏ.23):ಆಲ್ರೌಂಡರ್ ಅಕ್ಷರ್ ಪಟೇಲ್ (34ರನ್ ಹಾಗೂ2 ವಿಕೆಟ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ (65) ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಗುಜರಾತ್ ಲಯನ್ಸ್ ವಿರುದ್ಧ 26 ರನ್‌'ಗಳ ಗೆಲುವು ದಾಖಲಿಸಿದೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 20 ಓವರ್'ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188ರನ್ ಬಾರಿಸಿತು. ಇದಕ್ಕುತ್ತರವಾಗಿ ಗುಜರಾತ್ ಲಯನ್ಸ್ 7 ವಿಕೆಟ್ ನಷ್ಟಕ್ಕೆ 162ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಸತತ  ಪಂದ್ಯಗಳಲ್ಲಿ ಸೋಲಿನ ಕಹಿ ಉಂಡಿದ್ದ ಕಿಂಗ್ಸ್ ಇಲೆವೆನ್ ಕೊನೆಗೂ ಗೆಲುವಿನ ನಿಟ್ಟುಸಿರುಬಿಟ್ಟಿದೆ.

ಇನ್ನು ಗುಜರಾತ್ ಲಯನ್ಸ್ 7 ಪಂದ್ಯಗಳಲ್ಲಿ 5ನೇ ಸೋಲು ಅನುಭವಿಸಿ ದುಸ್ಥಿತಿಗೆ ಕುಸಿಯಿತು. ಅಲ್ಲದೆ ಅಂಕಪಟ್ಟಿಯಲ್ಲಿ ಕಡೆ ಸ್ಥಾನದಲ್ಲೇ ಉಳಿದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್‌'ಗೆ ಹಾಶೀಂ ಆಮ್ಲಾ ಅದ್ಭುತ ಆರಂಭ ಒದಗಿಸಿದರು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾದರು. ಶಾನ್ ಮಾರ್ಷ್ (30) ಹಾಗೂ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ (31) ರನ್ ಗಳಿಸಿ ಆಮ್ಲಾಗೆ ಉತ್ತಮ ಸಾಥ್ ನೀಡಿದರು. ಆದರೆ ಕೊನೆಯಲ್ಲಿ ಅಕ್ಷರ್ ಪಟೇಲ್ ಸ್ಫೋಟಕ ಆಟವಾಡಿ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಗೆಲುವಿನ ಗುರಿ ಬೆನ್ನತ್ತಿದ ತವರಿನ ತಂಡಕ್ಕೆ ಮೊದಲ ಓವರಲ್ಲೇ ಬ್ರೆಂಡನ್ ಮೆಕ್ಕಲಂ ವಿಕೆಟ್ ಪತನಗೊಂಡಿದ್ದು ಆಘಾತ ಮೂಡಿಸಿತು. ಆದರೆ ಸುರೇಶ್ ರೈನಾ (32) ಹಾಗೂ ದಿನೇಶ್ ಕಾರ್ತಿಕ್ (58) ರನ್ ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ.

ಕನ್ನಡಿಗ ಕೆ.ಸಿ ಕಾರ್ಯಪ್ಪ, ಅಕ್ಷರ್ ಪಟೇಲ್ ಹಾಗೂ ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಪಡೆದು ಕಿಂಗ್ಸ್ ಇಲೆವನ್ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರ್:

ಕಿಂಗ್ಸ್ ಇಲೆವನ್ ಪಂಜಾಬ್: 188/7

ಹಾಶೀಂ ಆಮ್ಲಾ : 65

ಅಕ್ಷರ್ ಪಟೇಲ್ : 34

ಆ್ಯಂಡ್ರೊ ಟೈ : 35/2

ಗುಜರಾತ್ ಲಯನ್ಸ್: 162/7

ದಿನೇಶ್ ಕಾರ್ತಿಕ್ : 58

ಸುರೇಶ್ ರೈನಾ : 32

ಕೆ.ಸಿ ಕಾರ್ಯಪ್ಪ : 24/2

ಪಂದ್ಯ ಪುರುಷೋತ್ತಮ : ಹಾಶೀಂ ಆಮ್ಲಾ

Follow Us:
Download App:
  • android
  • ios