ಚೀನಾ ಬ್ಯಾಡ್ಮಿಂಟನ್'ನಿಂದ ಹೊರಬಿದ್ದ ಕಶ್ಯಪ್
sports
By Suvarna Web Desk | 09:40 PM Thursday, 20 April 2017

ಜನವರಿಯಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಕಶ್ಯಪ್, ಅದಾದ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದರು.

ಚಾಂಗ್‌'ಝೂ(ಏ.20): ಗ್ಲಾಸ್ಗೋ ಕಾಮನ್‌'ವೆಲ್ತ್ ಗೇಮ್ಸ್ ಚಾಂಪಿಯನ್ ಭಾರತದ ಪರುಪಳ್ಳಿ ಕಶ್ಯಪ್ ಚೀನಾ ಮಾಸ್ಟರ್ಸ್‌ ಗ್ರ್ಯಾನ್ ಪ್ರೀ ಗೋಲ್ಡ್ ಪಂದ್ಯಾವಳಿಯ ಪ್ರೀ-ಕ್ವಾರ್ಟರ್ ಫೈನಲ್‌'ನಲ್ಲಿ ಮುಗ್ಗರಿಸಿದ್ದಾರೆ.

150,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತದ ಪಂದ್ಯಾವಳಿಯಲ್ಲಿ ಕಶ್ಯಪ್, ಚೀನಾದ ಕಿಯಾವೊ ಬಿನ್ ವಿರುದ್ಧದ ಮೂರು ಕ್ಲಿಷ್ಟಕರ ಗೇಮ್‌'ಗಳಲ್ಲಿ 10-21, 22-20, 13-21ರಿಂದ ಸೋಲೊಪ್ಪಿಕೊಂಡರು.

ಸುಮಾರು 1 ಗಂಟೆ 16 ನಿಮಿಷ ನಡೆದ ಪಂದ್ಯದಲ್ಲಿ ಕಶ್ಯಪ್ ಪ್ರಬಲ ಪೈಪೋಟಿ ನೀಡಿದರಾದರೂ, ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ.

ಜನವರಿಯಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಕಶ್ಯಪ್, ಅದಾದ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದರು.

Show Full Article