Asianet Suvarna News Asianet Suvarna News

`ಕೊಹ್ಲಿ ಮತ್ತು ಧೋನಿ ನಾಯಕತ್ವದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ'

"ಕೊಹ್ಲಿ ಮತ್ತು ಧೋನಿ ನಾಯಕತ್ವದ ಶೈಲಿಯಲ್ಲಿ ವ್ಯತ್ಯಾಸವಿದೆ ಎಂದು ನನಗನ್ನಿಸುತ್ತಿಲ್ಲ. ಬಹುತೇಕ ಇಬ್ಬರ ಶೈಲಿ ಒಂದೇ ರೀತಿ ಇದೆ. ನಮ್ಮ ಬೌಲಿಂಗ್`ನಲ್ಲಿ ಬೌಂಡರಿ, ಸಿಕ್ಸರ್`ಗಳು ಸಿಡಿದಾಗ ನಮ್ಮ ಪರವಾಗಿ ನಿಲ್ಲುತ್ತಿದ್ದ ಕೊಹ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೇ ಬೌಲ್ ಮಾಡುವಂತೆ ಸಲಹೆ ನೀಡುತ್ತಿದ್ದರು. ಒಬ್ಬ ಬೌಲರ್`ಗೆ ಈ ಮಾತುಗಳು ಹೆಚ್ಚು ಆತ್ಮಸ್ಥೈರ್ಯ ಕೊಡುತ್ತವೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

Not much difference between Virat Kohli and MS Dhoni

ಪುಣೆ(ಜ.16): ವಿರಾಟ್ ಕೊಹ್ಲಿ ಅಧಿಕೃತವಾಗಿ ನಾಯಕನಾಗಿ ಮೈದಾನಕ್ಕಿಳಿದ ನಿನ್ನೆಯ ಏಕದಿನ ಪಂದ್ಯ ಅಕ್ಷರಶಃ ಅಗ್ನಿಪರೀಕ್ಷೆಯಾಗಿತ್ತು. ಬ್ಯಾಟಿಂಗ್ ಪಿಚ್ ಲಾಭ ಪಡೆದ ಇಂಗ್ಲೆಂಡ್ ತಂಡ 350 ರನ್ ಕಲೆಹಾಕಿತು. ಕಷ್ಟಸಾಧ್ಯವಾದ ಸ್ಕೋರನ್ನ ಬೆನ್ನಟ್ಟಿದ ಕೊಹ್ಲಿ ಗೆಲುವನ್ನ ತಂದುಕೊಟ್ಟರು.   

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬಿಗ್ ಸ್ಕೋರಿಗೆ ಭಾರತದ ಭರವಸೆಗಳ ಬೌಲರ್`ಗಳ ವೈಫಲ್ಯವೂ ಕಾರಣವಾಗಿತ್ತು. ಅಶ್ವಿನ್, ಬುಮ್ರಾ, ಉಮೇಶ್ ಯಾದವ್ ಆಂಗ್ಲರಿಗೆ ನಿರಾಯಾಸವಾಗಿ ರನ್ ಬಿಟ್ಟುಕೊಟ್ಟರು. ಆಲ್ರೌಂಡರ್`ಗಳಾದ ಹಾರ್ದಿಕ್ ಮತ್ತು ಜಡೇಜಾ ಮಾತ್ರ ಕೊಂಚ ಕಡಿವಾಣ ಹಾಕಿದರು. 46 ರನ್ ನೀಡಿ 2 ವಿಕೆಟ್ ಕಿತ್ತ ಹಾರ್ದಿಕ್ ಕೊಹ್ಲಿ ನಾಯಕತ್ವವನ್ನ ಹೊಗಳಿದ್ದಾರೆ, ಕೊಹ್ಲಿ ಮತ್ತು ಧೋನಿ ನಾಯಕತ್ವದಲ್ಲಿ ತುಂಬಾ ವ್ಯತ್ಯಾಸವೇನೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.