ಹೈದರಾಬಾದ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅಜರ್ ನಾಮಪತ್ರ ಸಲ್ಲಿಕೆ
sports
By Suvarna Web Desk | 01:07 PM Tuesday, 10 January 2017

ಆಂಧ್ರಪ್ರದೇಶದಲ್ಲಿ ಕ್ರಿಕೆಟ್​'ಗೆ ಚೇತರಿಕೆ ನೀಡುವ ಮತ್ತು ಭಾರತೀಯ ಕ್ರಿಕೆಟ್'ಗೆ ಪ್ರತಿಭೆಗಳನ್ನು ಹೆಕ್ಕಿ ಕೊಡುವ ಉದ್ದೇಶದಿಂದ ಕ್ರಿಕೆಟ್ ಆಡಳಿತ್ಕೆ ಕೈಹಾಕಲು ಯತ್ನಿಸಿದ್ದೇನೆ ಎಂದು ಅಜರ್ ಹೇಳಿದ್ದಾರೆ.

ಹೈದರಾಬಾದ್(ಜ. 10): ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್  ಕ್ರಿಕೆಟ್'​ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಆಟಗಾರನಾಗಿ ಅಲ್ಲ, ಬದಲಿಗೆ ಕ್ರಿಕೆಟ್ ಆಡಳಿತಕ್ಕೆ ಕೈ ಹಾಕಿದ್ದಾರೆ. ಹೈದ್ರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜರ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

53 ವರ್ಷದ ಅಜರ್ ಅವರು ಕ್ರಿಕೆಟ್ ಮಂಡಳಿ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲು. ಮ್ಯಾಚ್ ಫಿಕ್ಸಿಂಗ್​'ನಿಂದ ನಿಷೇಧ ಹೊಂದಿದ್ದ ಅಜರ್'​ಗೆ ಬಿಸಿಸಿಐ ಕ್ಲೀನ್​​ ಚಿಟ್ ನೀಡಿತ್ತು. ಹೀಗಾಗಿ, ಅಜರ್ ಕ್ರಿಕೆಟ್ ಕ್ಷೇತ್ರಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿದೆ.

ಆಂಧ್ರಪ್ರದೇಶದಲ್ಲಿ ಕ್ರಿಕೆಟ್​'ಗೆ ಚೇತರಿಕೆ ನೀಡುವ ಮತ್ತು ಭಾರತೀಯ ಕ್ರಿಕೆಟ್'ಗೆ ಪ್ರತಿಭೆಗಳನ್ನು ಹೆಕ್ಕಿ ಕೊಡುವ ಉದ್ದೇಶದಿಂದ ಕ್ರಿಕೆಟ್ ಆಡಳಿತ್ಕೆ ಕೈಹಾಕಲು ಯತ್ನಿಸಿದ್ದೇನೆ ಎಂದು ಅಜರ್ ಹೇಳಿದ್ದಾರೆ.

ಉದ್ಯಮಿಗಳು, ರಾಜಕಾರಣಿಗಳು, ರಿಟೈರ್ಡ್​ ಸರ್ಕಾರಿ ನೌಕರರು ಮತ್ತು 70 ವರ್ಷ ಮೀರಿದವರು ಕ್ರಿಕೆಟ್ ಆಡಳಿತದಲ್ಲಿ ಇರುವಂತ್ತಿಲ್ಲ ಎಂದು ಲೋಧಾ ಸಮಿತಿ ಶಿಫಾರಸು ಮಾಡಿದೆ. ಆಟಗಾರ ಹಾಗೂ ನಾಯಕನಾಗಿ ಮತ್ತು ಸಂಸದನಾಗಿ ಅಪಾರ ಅನುಭವ ಹೊಂದಿರುವ ಅಜರ್ ಅವರು ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಚೇತರಿಕೆ ನೀಡುವಷ್ಟು ಸಮರ್ಥರೆನಿಸಿದ್ದಾರೆ. ಹೀಗಾಗಿ, ಅಜರ್ ಅವರು ಹೆಚ್'ಸಿಎ ಅಧ್ಯಕ್ಷ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದೆ ಎಂದು ಕ್ರಿಕೆಟ್ ಸಂಸ್ಥೆ ಮೂಲಗಳು ಹೇಳುತ್ತಿವೆ.

Show Full Article