ಫೈನಲ್'ನಲ್ಲಿ ಮುಂಬೈ-ಪುಣೆ ಹಣಾಹಣಿ: ಕರಣ್ ದಾಳಿಗೆ ಕೋಲ್ಕತ್ತಾ ಔಟ್
sports
By Suvarna Web Desk | 11:29 PM May 19, 2017

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್'ಗಾಗಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು.

ಬೆಂಗಳೂರು(ಮೇ.19): ಕರಣ್ ಶರ್ಮಾ(4/16) ಹಾಗೂ ಜಸ್'ಪ್ರೀತ್ ಬುಮ್ರಾ(7/3) ಅವರ ಕರಾರುವಕ್ ದಾಳಿಗೆ ಗಂಭೀರ್ ಗಂಭೀರ್ ಪಡೆ 2ನೇ ಕ್ವಾಲಿಫೈಯರ್'ನಲ್ಲಿ ಮುಗ್ಗರಿಸಿತು. ಕೇವಲ 107 ರನ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 14.3 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್'ಗಾಗಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. ನಾಯಕ ಗಂಭೀರ್, ಕನ್ನಡಿಗ ಉತ್ತಪ್ಪ ಸೇರಿದಂತೆ ಯಾರೊಬ್ಬರು ಉತ್ತಮ ಆಟವಾಡಲಿಲ್ಲ. ಇಶಾಂಕ್ ಜಗ್ಗಿ(28: 31 ಎಸೆತ,3 ಬೌಂಡರಿ) ಹಾಗೂ ಸೂರ್ಯಕುಮಾರ್ ಯಾದವ್(31: 25 ಎಸೆತ,2 ಬೌಂಡರಿ,1 ಸಿಕ್ಸ್'ರ್) ಸಾಧಾರಣ ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರ್ಯಾರು ದಶಕದ ಗಡಿಯನ್ನು ದಾಟಲಿಲ್ಲ.

ಮುಂಬೈ ಪರ ಕರಣ್ ಶರ್ಮಾ (4/16), ಜಸ್'ಪ್ರೀತ್ ಬುಮ್ರಾ(7/3) ಹಾಗೂ ಮಿಷಲ್ ಜಾನ್ಸ್'ನ್ (2/28) ಉತ್ತಮ ಬೌಲಿಂಗ್'ಗೆ 18.5 ಓವರ್'ಗಳಲ್ಲಿ 107 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡಿತು.

ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲಿ ಸಿಮನ್ಸ್, ಪಟೇಲ್, ರಾಯುಡು ಅವರ ವಿಕೇಟ್ ಕಳೆದುಕೊಂಡರೂ  ನಾಯಕ ರೋಹಿತ್ ಶರ್ಮಾ(26: 24 ಎಸೆತ, 1 ಸಿಕ್ಸ್, 1 ಬೌಂಡರಿ) ಹಾಗೂ ಕರಣ್ ಪಾಂಡ್ಯ ಅಜೇಯ(45: 30 ಎಸೆತ: 8 ಬೌಂಡರಿ) ರನ್ ಹೊಡೆಯುವುದರೊಂದಿಗೆ 14.3 ಓವರ್'ಗಳಲ್ಲಿ ಜಯದ ಗುರಿ ಮುಟ್ಟಿಸಿದರು.

 

ಸ್ಕೋರ್

ಕೋಲ್ಕತಾ ನೈಟ್ ರೈಡರ್ಸ್: 107 (18.5/20)

ಮುಂಬೈ ಇಂಡಿಯನ್ಸ್: 111(14.3/20)

ಪಂದ್ಯ ಶ್ರೇಷ್ಠ : ಕರಣ್ ಶರ್ಮಾ

Show Full Article