Asianet Suvarna News Asianet Suvarna News

ಕ್ಯಾತೆ ತೆಗೆಯುವುದು ಡೆಲ್ಲಿಯವರ ಹುಟ್ಟುಗುಣ: ಗಂಭೀರ್

‘‘ಮೈದಾನದಿಂದಾಚೆ ನಾನು ಶಾಂತವಾಗಿ ವರ್ತಿಸುತ್ತೇನೆ, ಆಟದ ವೇಳೆ ಕಾಣುವ ಸಿಟ್ಟು, ಆಕ್ರೋಶ ಇದ್ಯಾವುದನ್ನೂ ನೀವು ಮೈದಾನದ ಹೊರಗೆ ನೋಡಲು ಸಾಧ್ಯವಿಲ್ಲ’’ ಎಂದು ಗಂಭೀರ್ ಹೇಳಿದ್ದಾರೆ.

Looking at Me and Virat Kohli You Can Say Delhi People Abuse More

ಕೋಲ್ಕತಾ(ಏ.23): ಕ್ರಿಕೆಟ್ ಮೈದಾನದಲ್ಲಿ ಸಹ ಆಟಗಾರರನ್ನು, ಎದುರಾಳಿಗಳನ್ನು ನಿಂದಿಸುವುದರಲ್ಲಿ ತಪ್ಪಿಲ್ಲ ಎಂದು ಕೆಕೆಆರ್ ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

‘‘ನನ್ನನ್ನು ಹಾಗೂ ವಿರಾಟ್ ಕೊಹ್ಲಿಯನ್ನು ನೋಡಿದವರು, ಇವರಿಬ್ಬರು ಅತಿಯಾಗಿ ಸಿಟ್ಟು ಮಾಡಿಕೊಳ್ಳುತ್ತಾರೆ. ಸದಾ ಇತರರನ್ನು ನಿಂದಿಸುತ್ತಲೇ ಇರುತ್ತಾರೆ ಎಂದು ಟೀಕಿಸಬಹುದು. ಆದರೆ ಇದು ಡೆಲ್ಲಿ ಜನರ ಹುಟ್ಟು ಸ್ವಭಾವ. ನಾವು ಹೆಚ್ಚು ಸ್ಮರ್ಧಾತ್ಮಕವಾಗಿರಲು ಪ್ರಯತ್ನಿಸುತ್ತೇವೆ. ಹೀಗಾಗಿ ಸಣ್ಣ ತಪ್ಪುಗಳು ಸಹ ನಮಗೆ ದೊಡ್ಡದಾಗಿ ಕಾಣುತ್ತವೆ’’ ಎಂದು ಗಂಭೀರ್ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

‘‘ಮೈದಾನದಿಂದಾಚೆ ನಾನು ಶಾಂತವಾಗಿ ವರ್ತಿಸುತ್ತೇನೆ, ಆಟದ ವೇಳೆ ಕಾಣುವ ಸಿಟ್ಟು, ಆಕ್ರೋಶ ಇದ್ಯಾವುದನ್ನೂ ನೀವು ಮೈದಾನದ ಹೊರಗೆ ನೋಡಲು ಸಾಧ್ಯವಿಲ್ಲ’’ ಎಂದು ಗಂಭೀರ್ ಹೇಳಿದ್ದಾರೆ.

Follow Us:
Download App:
  • android
  • ios