ಮಹಿಳಾ ವಿಶ್ವಕಪ್-2017 ಗೆ ಅರ್ಹತೆ ಪಡೆದ ಭಾರತ ತಂಡ
sports
By Suvarna Web Desk | 01:34 PM February 17, 2017

ಕೊಲಂಬೋದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್  ಪಂದ್ಯಾವಳಿಯ ಸೂಪರ್ 6 ಹಂತದ 2 ನೇ ಏಕದಿನ  ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು 9 ವಿಕೆಟ್ ಗಳಲ್ಲಿ  ಮಣಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್-2017 ಕ್ಕೆ ಅರ್ಹತೆ ಪಡೆದಿದೆ.

ನವದೆಹಲಿ (ಫೆ.17): ಕೊಲಂಬೋದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್  ಪಂದ್ಯಾವಳಿಯ ಸೂಪರ್ 6 ಹಂತದ 2 ನೇ ಏಕದಿನ  ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು 9 ವಿಕೆಟ್ ಗಳಲ್ಲಿ  ಮಣಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್-2017 ಕ್ಕೆ ಅರ್ಹತೆ ಪಡೆದಿದೆ.

ಟಾಸ್ ಗೆದ್ದ ಬಳಿಕ ಬೌಲಿಂಗನ್ನು ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಫೀಲ್ಡಿಂಗ್ ಮಾಡಿ ಬಾಂಗ್ಲಾದೇಶಕ್ಕೆ ರನ್ ಗಳನ್ನು ಪೇರಿಸಲು ಅವಕಾಶ ನೀಡಲಿಲ್ಲ. 50 ಓವರ್ ಗೆ 155 ರನ್ ಗಳಿಗೆ ತೃಪ್ತಪಟ್ಟುಕೊಳ್ಳಬೇಕಾಯಿತು. 155 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 33. 3 ಓವರ್ ಗಳಿಗೆ 158 ರನ್ ಗಳಿಸಿ ಬಾಂಗ್ಲಾವನ್ನು ಮಣಿಸಿತು.

ಜೂನ್ ನಲ್ಲಿ ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. 

Show Full Article