Asianet Suvarna News Asianet Suvarna News

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್'ನಲ್ಲಿ ಭಾರತಕ್ಕೆ 333 ರನ್ ಹೀನಾಯ ಸೋಲು

ಭಾರತಕ್ಕೆ 441 ರನ್ ಟಾರ್ಗೆಟ್ ಸಿಕ್ಕಾಗ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೆ, ಕಡೇಪಕ್ಷ ಪಂದ್ಯವು ನಾಲ್ಕನೇ ದಿನಕ್ಕಾದರೂ ಹೋಗಬಹುದೆಂಬ ನಿರೀಕ್ಷೆ ಹುಸಿಯಾಯಿತು.

india lose to australia in first test at pune

ಪುಣೆ(ಫೆ. 25): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 333 ರನ್'ಗಳಿಂದ ಪರಾಭವಗೊಂಡಿದೆ. ಗೆಲ್ಲಲು 441 ರನ್ ಗುರಿ ಪಡೆದ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸಲ್ಲಿ ಕೇವಲ 107 ರನ್ನಿಗೆ ಆಲೌಟ್ ಆಯಿತು. ಚೇತೇಶ್ವರ್ ಪೂಜಾರ ಬಿಟ್ಟರೆ ಉಳಿದ ಭಾರತೀಯರು ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್ ಪಡೆದಿದ್ದ ಸ್ಟೀವ್ ಕೀಫೆ ಈ ಬಾರಿಯೂ 6 ವಿಕೆಟ್ ಪಡೆದು ಭಾರತವನ್ನು ಕಾಡಿದರು. ನೇಥನ್ ಲಯಾನ್ 4 ವಿಕೆಟ್ ಪಡೆದು ಭಾರತೀಯ ಬ್ಯಾಟಿಂಗ್'ನ ಬೆನ್ನೆಲುಬು ಮುರಿದರು. ಸ್ಪಿನ್ ಪಿಚ್'ನಲ್ಲಿ ಭಾರತೀಯರ ಹೆಡೆಮುರಿ ಕಟ್ಟಿದ ಈ ಇಬ್ಬರು ಸ್ಪಿನ್ನರುಗಳು ಈ ಪಂದ್ಯದಲ್ಲಿ 17 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ನಿನ್ನೆ ಎರಡನೇ ದಿನದಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದ್ದ ಆಸ್ಟ್ರೇಲಿಯಾ 285 ರನ್'ಗೆ ಆಲೌಟ್ ಆಗಿ ಒಟ್ಟಾರೆ 440 ರನ್ ಮುನ್ನಡೆ ಪಡೆದುಕೊಂಡಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಶತಕ ಗಳಿಸಿದರು. ಮ್ಯಾಟ್ ರೆನ್ಶಾ, ಮಿಶೆಲ್ ಮಾರ್ಷ್, ಮ್ಯಾಥ್ಯೂ ವೇಡ್ ಮತ್ತು ಮಿಶೆಲ್ ಸ್ಟಾರ್ಕ್ ಕೂಡ ಉಪಯುಕ್ತ ರನ್ ಕೊಡುಗೆ ನೀಡಿ ತಂಡದ ಸ್ಥಿತಿಯನ್ನು ಉತ್ತಮಗೊಳಿಸಿದರು.

ಆಸ್ಟ್ರೇಲಿಯಾದ ಬ್ಯಾಟುಗಾರರು ತೋರಿದ ಶಿಸ್ತು ಮತ್ತು ತಾಂತ್ರಿಕ ಧೋರಣೆಯನ್ನು ಭಾರತೀಯರು ಅಳವಡಿಸಿಕೊಳ್ಳುವಲ್ಲಿ ವಿಫಲರಾದರು. ಸ್ಟೀವ್ ಓಕೀಫೆ ಮತ್ತು ಲಯೋನ್ ಅವರ ಸ್ಪಿನ್ ಬೌಲಿಂಗ್ ಎದುರಿಸುವ ರೀತಿಯನ್ನು ಅಂದಾಜಿಸುವಲ್ಲಿ ಭಾರತೀಯರು ಸೋತರು.

ಭಾರತಕ್ಕೆ 441 ರನ್ ಟಾರ್ಗೆಟ್ ಸಿಕ್ಕಾಗ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೆ, ಕಡೇಪಕ್ಷ ಪಂದ್ಯವು ನಾಲ್ಕನೇ ದಿನಕ್ಕಾದರೂ ಹೋಗಬಹುದೆಂಬ ನಿರೀಕ್ಷೆ ಹುಸಿಯಾಯಿತು. ಒತ್ತಡದಲ್ಲಿ ವಿರಾಟ್ ಕೊಹ್ಲಿ ಮಿಂಚುತ್ತಾರೆಂಬ ನಿರೀಕ್ಷೆಯೂ ಈ ಬಾರಿ ಸುಳ್ಳಾಯಿತು.

Follow Us:
Download App:
  • android
  • ios