Asianet Suvarna News Asianet Suvarna News

ನ್ಯೂಜಿಲೆಂಡ್​​ ವಿರುದ್ಧದ 2ನೇ ಟೆಸ್ಟ್​​ ಕೂಡ ಐತಿಹಾಸಿಕ: ಭಾರತಕ್ಕಿದು ತವರಿನಲ್ಲಿ 250ನೇ ಟೆಸ್ಟ್​​​

historic 250th test

ಕೋಲ್ಕತ್ತಾ(ಸೆ.26): ನ್ಯೂಜಿಲೆಂಡ್​​ ವಿರುದ್ಧದ 2ನೇ ಟೆಸ್ಟ್​​ ಕೂಡ ಭಾರತಕ್ಕೆ ಐತಿಹಾಸಿಕ ಪಂದ್ಯವಾಗಿದೆ. ಭಾರತಕ್ಕೆ ತವರಿನ 250ನೇ ಟೆಸ್ಟ್​​ ಇದಾಗಿದೆ. 

ಕೋಲ್ಕತ್ತಾದ ಈಡನ್​​ ಗಾರ್ಡನ್​​ ಮೈದಾನ 250ನೇ ಟೆಸ್ಟ್​​ಗೆ ಆತಿಥ್ಯವಹಿಸಲಿದೆ. ಲಾರ್ಡ್ಸ್​​ ಮೈದಾನದಲ್ಲಿರುವಂತೆ ಇಲ್ಲಿಯೂ ಟೆಸ್ಟ್​​​ ದಿನದಾಟದ ಆರಂಭಕ್ಕೂ ಮುನ್ನ ಗಂಟೆ ಭಾರಿಸುವುದನ್ನು ಚಾಲ್ತಿಗೆ ತರುವ ನಿಟ್ಟಿನಲ್ಲಿ ಯೋಚಿಸಲಾಗಿದೆ.

250ನೇ ಟೆಸ್ಟ್​​ ಅನ್ನು ಅವಿಸ್ಮರಣೀಯಗೊಳಿಸಲು ಬೆಂಗಾಳ್​ ಕ್ರಿಕೆಟ್​​ ಬೋರ್ಡ್​​ ಕೂಡ ಚಿಂತನೆ ನಡೆಸಿದೆ. 500ನೇ ಟೆಸ್ಟ್ ಮಾದರಿಯಲ್ಲೇ ಇದನ್ನು ಅದ್ಧೂರಿಯಾಗಿ ನಡೆಸಲು ಯೋಜನೆ ರೂಪಿಸಿದೆ. 


 

Follow Us:
Download App:
  • android
  • ios