Asianet Suvarna News Asianet Suvarna News

ಮುಂದುವರೆದ ಫಾರ್ಚೂನ್'ಜೈಂಟ್ಸ್ ಜಯಭೇರಿ

ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 10-10 ಅಂಕಗಳ ಸಮಬಲ ಸಾಧಿಸಿದ್ದವು.

Gujarat Fortunegiants wins their second consecutive game at their home ground against Dabang Delhi KC

ಅಹಮದಾಬಾದ್(ಆ.12): ಆತಿಥೇಯ ಗುಜರಾತ್ ಫಾರ್ಚೂನ್‌'ಜೈಂಟ್ಸ್ ತವರಿನಲ್ಲಿ ಮತ್ತೆ ಜಯದ ನಗೆ ಬೀರಿದೆ. ಮಾಜಿ ಚಾಂಪಿಯನ್ ಯು ಮುಂಬಾವನ್ನು 18 ಅಂಕಗಳ ಅಂತರದಲ್ಲಿ ಮಣಿಸಿ ಶುಭಾರಂಭ ಮಾಡಿದ್ದ ಸುಕೇಶ್ ಹೆಗ್ಡೆ ಪಡೆ, 2ನೇ ದಿನ ಡೆಲ್ಲಿಯನ್ನು 29-25 ಅಂಕಗಳಿಂದ ಸೋಲಿಸಿ ಪ್ರಾಬಲ್ಯ ಮುಂದುವರಿಸಿತು.

ಪಂದ್ಯದ ಮೊದಲ 5 ನಿಮಿಷ ಉಭಯ ತಂಡಗಳ ಸಮಬಲದ ಹೋರಾಟ ತೋರಿದವು. ಆದರೆ 7ನೇ ನಿಮಿಷದ ವೇಳೆಗೆ ಡೆಲ್ಲಿ 2 ಅಂಕಗಳ ಮುನ್ನಡೆ ಪಡೆದುಕೊಂಡಿತು. ಆದರೆ 9ನೇ ನಿಮಿಷದಲ್ಲಿ ಗುಜರಾತ್ ಮುನ್ನಡೆಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 10-10 ಅಂಕಗಳ ಸಮಬಲ ಸಾಧಿಸಿದ್ದವು.

ದ್ವಿತಿಯಾರ್ಧದ ನಾಲ್ಕನೇ ನಿಮಿಷದಲ್ಲೇ ಸುಕೇಶ್ ಪಡೆ ಆಲೌಟ್ ಆಗುವ ಮೂಲಕ 12-17 ಅಂಕಗಳ ಹಿನ್ನಡೆ ಅನುಭವಿಸಿತು. 32ನೇ ನಿಮಿಷದಲ್ಲಿ ಡೆಲ್ಲಿಯನ್ನು ಆಲೌಟ್ ಮಾಡಿದ ಗುಜರಾತ್ 23-22ರಿಂದ ಮುನ್ನಡೆ ಪಡೆದುಕೊಂಡಿತು. ಅಲ್ಲಿಂದಾಚೆಗೆ ಪಂದ್ಯ ಕೈತಪ್ಪದಂತೆ ಎಚ್ಚರವಹಿಸಿ 4 ಅಂಕಗಳ ಜಯಬೇರಿ ಬಾರಿಸಿತು.

Follow Us:
Download App:
  • android
  • ios