Asianet Suvarna News Asianet Suvarna News

ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಪರೀಕ್ಷಾರ್ಥ ಡಿಆರ್‌ಎಸ್‌ಗೆ ಒಪ್ಪಿಗೆ

ಡಿಆರ್‌ಎಸ್ ಸಂಪೂರ್ಣವಾಗಿ ಅವಲಂಬಿತವಾಗಿರುವ ಹಾಕ್ ಐ ತಂತ್ರಜ್ಞಾನದಲ್ಲಿನ ಲೋಪಗಳ ಬಗ್ಗೆ ಬಿಸಿಸಿಐ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದರಿಂದಾಗಿ ಇದರ ಅಳವಡಿಕೆಗೆ ಹಿಂದೇಟು ಹಾಕುತ್ತಿತ್ತು. ಆದರೆ, ಇತ್ತೀಚೆಗೆ ಈ ತಂತ್ರಜ್ಞಾನದಲ್ಲಿ ಸುಧಾರಣೆ ತಂದಿರುವುದಾಗಿ ಪ್ರತಿಪಾದಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ), ಡಿಆರ್‌ಎಸ್ ಅಳವಡಿಕೆಗೆ ಬಿಸಿಸಿಐ ಮನವೊಲಿಸಲು ಪ್ರಯತ್ನಿಸಿತ್ತು. ಹೀಗಾಗಿ ಪ್ರಾಯೋಗಿಕವಾಗಿ ಅದನ್ನು ಪರೀಕ್ಷಿಸಲು ಮುಂದಾಗಿರುವ ಬಿಸಿಸಿಐ, ಸದ್ಯಕ್ಕೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿದೆ.

drs in india and england series

ಮುಂಬೈ(ಅ.22): ನವೆಂಬರ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿವಾದಾತ್ಮಕ ಡಿಆರ್‌ಎಸ್ (ಡಿಸಿಷನ್ ರಿವ್ಯೆ ಸಿಸ್ಟಂ) ವ್ಯವಸ್ಥೆಯನ್ನು ‘ಪರೀಕ್ಷಾರ್ಥವಾಗಿ’ ಅಳವಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.