Asianet Suvarna News Asianet Suvarna News

ಧೋನಿ ಬಗ್ಗೆ ಪುಣೆ ಯೂ'ಟರ್ನ್ !

ಆದ­ರೀಗ ಫೈನಲ್ಗೂ ಮುನ್ನ ದಿನವಾದ ಶನಿವಾರ, ಪುಣೆ ತಂಡದ ಅಧಿಕೃತ ಟ್ವಿಟರ್ಟೈಮ್ಲೈನ್ನಲ್ಲಿ ಹಾಕಿದ ಫೋಟೋವೊಂದು ಅಚ್ಚರಿಗೆ ಕಾರಣವಾಗಿದೆ.

Dhoni and Pune U Turn

ನವದೆಹಲಿ(ಮೇ.21): ಪುಣೆ ಸೂಪರ್‌ಜೈಂಟ್‌ ತಂಡ ತಡವಾಗಿಯಾ­ದರೂ ಎಂ.ಎಸ್‌.ಧೋನಿಯ ಮಹತ್ವವನ್ನು ಅರಿತುಕೊಂ­ಡಿದೆ.

ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಅವಮಾನಿಸಿದ್ದ ತಂಡದ ಮಾಲೀಕರು, ಅವರ ಆಟ ಹಾಗೂ ನಾಯಕತ್ವದ ಗುಣ­ಗಳನ್ನು ಪ್ರಶ್ನಿಸಿ ಟ್ವಿಟರ್‌ನಲ್ಲಿ ಅನಗತ್ಯ ವಿವಾದ ಸೃಷ್ಟಿಸಿದ್ದರು. ಪುಣೆ ಮಾಲೀಕರ ಈ ನಡ­ವಳಿಕೆಗೆ ಭಾರತೀಯ ಕ್ರಿಕೆಟ್‌ ಅಭಿಮಾನಿ­ಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಆದ­ರೀಗ ಫೈನಲ್‌ಗೂ ಮುನ್ನ ದಿನವಾದ ಶನಿವಾರ, ಪುಣೆ ತಂಡದ ಅಧಿಕೃತ ಟ್ವಿಟರ್‌ ಟೈಮ್‌ಲೈನ್‌ನಲ್ಲಿ ಹಾಕಿದ ಫೋಟೋವೊಂದು ಅಚ್ಚರಿಗೆ ಕಾರಣವಾಗಿದೆ. ‘ಯಾವ ತಂಡಕ್ಕೆ ಬೆಂಬಲಿಸುವುದು ಎಂದು ಮರೆತಿರಾ ? ಅದರ ಹೆಸರು ಎಂ.ಎಸ್‌.ಧೋನಿ ತಂಡ' ಎಂದು ಫೋಟೋಗೆ ಶೀರ್ಷಿಕೆ ಹಾಕಲಾಗಿದೆ.

Follow Us:
Download App:
  • android
  • ios