Asianet Suvarna News Asianet Suvarna News

ಬಿಎಫ್'ಸಿಗೆ ಬಲಿಷ್ಠ ಜೊಹೊರ್ ಸವಾಲು

BFC up against champs JDT

ಜೊಹೊರ್‌ ಬಹ್ರು (ಮ​ಲೇ​ಷ್ಯಾ​)(ಸೆ.27): ಪ್ರತಿ​ಷ್ಠಿತ ಎಎ​ಫ್‌ಸಿ ಫುಟ್ಬಾಲ್‌ ಟೂರ್ನಿಯ ಸೆಮಿ​ಫೈ​ನಲ್‌ಗೆ ಕಾಲಿ​ಟ್ಟಿ​ರುವ ಭಾರ​ತದ ಮೂರನೇ ತಂಡ​ವೆಂಬ ಹೆಗ್ಗ​ಳಿಕೆ ಪಡೆ​ದಿ​ರುವ ಬೆಂಗ​ಳೂರು ಫುಟ್ಬಾಲ್‌ ಕ್ಲಬ್‌ (ಬಿ​ಎ​ಫ್‌​ಸಿ) ಬುಧ​ವಾರ ನಡೆ​ಯ​ಲಿ​ರುವ ತನ್ನ ಉಪಾಂತ್ಯ ಹಂತದ ಮೊದಲ ಲೆಗ್‌ ಪಂದ್ಯ​ದಲ್ಲಿ ಜೊಹೊರ್‌ ಡರುಲ್‌ ಟಾಝಿಮ್‌ (ಜೆಡಿಟಿ) ತಂಡ​ವನ್ನು ಎದು​ರಿ​ಸ​ಲಿದೆ.

ಇಲ್ಲಿ ಲಾರ್ಕಿನ್‌ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ ಈ ಪಂದ್ಯದಲ್ಲಿ ಬಿಎ​ಫ್‌ಸಿ ವಿರುದ್ಧ ಕಣ​ಕ್ಕಿ​ಳಿ​ಯ​ಲಿ​ರುವ ಜೆಡಿಟಿ ತಂಡವು ಇತ್ತೀ​ಚೆ​ಗಷ್ಟೇ ನಡೆ​ದಿದ್ದ ಮಲೇಷ್ಯಾ ಲೀಗ್‌ ಫುಟ್ಬಾಲ್‌ ಪಂದ್ಯಾ​ವ​ಳಿ​ಯಲ್ಲಿ ಪ್ರಶಸ್ತಿ ಜಯಿಸಿ ಉತ್ಸಾ​ಹ​ದ​ಲ್ಲಿದೆ. ಅಲ್ಲದೆ, ಸ್ವದೇ​ಶ​ದ​ಲ್ಲಿಯೇ ಆ ತಂಡ ಬೆಂಗ​ಳೂರು ಪಡೆ​ಯನ್ನು ಎದು​ರಿ​ಸು​ತ್ತಿ​ರು​ವು​ದ​ರಿಂದ ಸಹ​ಜ​ವಾ​ಗಿಯೇ ಅದರ ಆತ್ಮ​ವಿ​ಶ್ವಾ​ಸವೂ ಬೆಟ್ಟ​ದ​ಷ್ಟಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ, ಬ್ಲೂ ಬಾಯ್‌್ಸ ಪಡೆ ಇಲ್ಲಿ ಯಾವ ರೀತಿಯ ಪ್ರದ​ರ್ಶನ ನೀಡ​ಲಿದೆ ಎಂಬುದು ಕುತೂ​ಹ​ಲ​ಕಾರಿ.

ಪಂದ್ಯದ ಬಗ್ಗೆ ಮಾತ​ನಾ​ಡಿದ ಬಿಎ​ಫ್‌ಸಿ ತಂಡದ ಪ್ರಧಾನ ಕೋಚ್‌ ರೋಕಾ, ‘‘ಎದು​ರಾಳಿ ತಂಡದ ಬಲದ ಬಗ್ಗೆ ನಮಗೆ ಸ್ಪಷ್ಟ​ವಾದ ಅರಿ​ವಿದೆ. ಅಲ್ಲದೆ, ತಮ್ಮದೇ ನೆಲ​ದಲ್ಲಿ ಬಿಎ​ಫ್‌ಸಿ ತಂಡ​ವನ್ನು ಎದು​ರಿ​ಸು​ತ್ತಿ​ರುವ ಆ ತಂಡದ ಮನೋ​ಬ​ಲವೂ ಸದೃ​ಢ​ವಾ​ಗಿದ್ದು, ಅತ್ಯಲ್ಪ ಅಜಾ​ರೂ​ಕ​ತೆಯೂ ಬ್ಲೂ ಬಾಯ್‌್ಸ ಪಡೆಗೆ ಅಪಾ​ಯ​ಕಾ​ರಿ​ಯಾಗಿ ಪರಿ​ಣ​ಮಿ​ಸ​ಬ​ಹುದು. ಹಾಗಾಗಿ, ಎಚ್ಚ​ರಿ​ಕೆ​ಯಿಂದ ಆಡ​ಬೇ​ಕಿದೆ. ಬ್ಲೂ ಬಾಯ್‌್ಸ ಪಡೆಗೆ ಇದೊಂದು ಸುಂದರ ಸವಾ​ಲು’’ ಎಂದು ತಿಳಿ​ಸಿ​ದರು.

Follow Us:
Download App:
  • android
  • ios