Asianet Suvarna News Asianet Suvarna News

ಆಸ್ಟ್ರೇಲಿಯಾ 300 ರನ್'ಗೆ ಆಲೌಟ್; ಸ್ಮಿತ್ ಶತಕ; ಕುಲದೀಪ್ ಸ್ಪಿನ್ ಮೋಡಿ

ಈ ಪಂದ್ಯದಲ್ಲಿ ಭಾರತದ ಬೌಲರ್'ಗಳು ಉತ್ತಮ ಪ್ರದರ್ಶನ ನೀಡಿದರು. ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಕುಲದೀಪ್ ಯಾದವ್ ತಮ್ಮ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ವಿಜೃಂಬಿಸಿದರು.

australia all out for 300 runs in 4th test at dharmasala

ಧರ್ಮಶಾಲಾ(ಮಾ. 25): ಸ್ಟೀವನ್ ಸ್ಮಿತ್ ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್ ಮ್ಯಾಚ್'ನಲ್ಲಿ 300 ರನ್ ಗಡಿ ಮುಟ್ಟಿ ಸಮಾಧಾನಪಟ್ಟಿದೆ. ಇತ್ತ, ಭಾರತ ತಂಡದ ಬೌಲರ್'ಗಳು ಎದುರಾಳಿಗಳನ್ನು 300 ರನ್'ಗೆ ನಿಯಂತ್ರಿಸಿದ ಖುಷಿಯೊಂದಿಗೆ ದಿನ ಮುಗಿಸಿದ್ದಾರೆ.

ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿತು. ಮ್ಯಾಟ್ ರೆನ್'ಶಾ ವಿಕೆಟ್ ಆರಂಭದಲ್ಲೇ ಉರುಳಿಬಿದ್ದಿತಾದರೂ ಡೇವಿಡ್ ವಾರ್ನರ್ ಮತ್ತು ನಾಯಕ ಸ್ಟೀವ್ ಸ್ಮಿತ್ 2ನೇ ವಿಕೆಟ್'ಗೆ 134 ರನ್ ಜೊತೆಯಾಟ ಆಡಿದರು. ವಾರ್ನರ್ ನಿರ್ಗಮನದ ಬಳಿಕ ಆಸ್ಟ್ರೇಲಿಯಾ ಭಾರೀ ಕುಸಿತಕ್ಕೊಳಗಾಯಿತು. 34 ರನ್ ಅಂತರದಲ್ಲಿ 4 ವಿಕೆಟ್'ಗಳು ಪತನಗೊಂಡವು. 178 ರನ್'ಗೆ 5 ವಿಕೆಟ್ ಕಳೆದುಕೊಂಡ ಕಾಂಗರೂಗಳ ಇನ್ನಿಂಗ್ಸ್'ಗೆ ಮತ್ತೆ ಚೇತರಿಕೆ ನೀಡಿದವರು ನಾಯಕ ಸ್ಮಿತ್, ಮ್ಯಾಥ್ಯೂ ವೇಡ್ ಮತ್ತು ಪ್ಯಾಟ್ ಕುಮಿನ್ಸ್. ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿರುವ ಸ್ಮಿತ್ 20ನೇ ಟೆಸ್ಟ್ ಶತಕ ದಾಖಲಿಸಿದರು.

ಇತ್ತ, ಈ ಪಂದ್ಯದಲ್ಲಿ ಭಾರತದ ಬೌಲರ್'ಗಳು ಉತ್ತಮ ಪ್ರದರ್ಶನ ನೀಡಿದರು. ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಕುಲದೀಪ್ ಯಾದವ್ ತಮ್ಮ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ವಿಜೃಂಬಿಸಿದರು.

ಒಂದು ಓವರ್ ಬ್ಯಾಟ್ ಮಾಡಿದ ಭಾರತ ತಂಡ ವಿಕೆಟ್ ನಷ್ಟವಿಲ್ಲದೇ ಶೂನ್ಯ ರನ್'ವೊಂದಿಗೆ ದಿನಾಂತ್ಯಗೊಳಿಸಿದೆ.

ಸ್ಕೋರು ವಿವರ(ಮೊದಲ ದಿನಾಂತ್ಯಕ್ಕೆ):

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 88.3 ಓವರ್ 300 ರನ್ ಆಲೌಟ್
(ಸ್ಟೀವ್ ಸ್ಮಿತ್ 111, ಮ್ಯಾಥ್ಯೂ ವೇಡ್ 57, ಡೇವಿಡ್ ವಾರ್ನರ್ 56, ಪ್ಯಾಟ್ ಕಮಿನ್ಸ್ 21 ರನ್ - ಕುಲದೀಪ್ ಯಾದವ್ 68/4, ಉಮೇಶ್ ಯಾದವ್ 69/2)

ಭಾರತ ಮೊದಲ ಇನ್ನಿಂಗ್ಸ್ 1 ಓವರ್ 0/0

Follow Us:
Download App:
  • android
  • ios