Asianet Suvarna News Asianet Suvarna News

ಈಗಲೇ ಎಬಿಡಿ ಮಗ ಆರ್'ಸಿಬಿ.. ಆರ್'ಸಿಬಿ ಎಂದು ಕನವರಿಸುತ್ತಿದ್ದಾನೆ...!

ಎಲ್ಲೆಲ್ಲೂ 'ಗೋ ಆರ್'ಸಿಬಿ' ಸ್ಲೋಗನ್ ಅನ್ನು ಅಬ್ರಾಹಂ ಮುದ್ದಾಗಿ ಹೇಳುವ ವಿಡಿಯೋವನ್ನು ಯೂಟ್ಯೂಬ್'ನಲ್ಲಿ ಈಗಾಗಲೇ ಒಂದು ಮಿಲಿಯನ್ ಜನ ವೀಕ್ಷಿಸಿದ್ದಾರೆ.

AB De Villiers Son Abraham Plays Cricket With Dad While Chanting Go RCB

ಬೆಂಗಳೂರು(ಏ.22): ಆಧುನಿಕ ಕ್ರಿಕೆಟ್'ನ ಸೂಪರ್ ಹೀರೋ, ಆರ್'ಸಿಬಿ ಪಾಲಿನ ನಂಬಿಕಸ್ಥ ಬ್ಯಾಟ್ಸ್'ಮನ್ ಎಬಿ. ಡಿವಿಲಿಯರ್ಸ್ 10ನೇ ಆವೃತ್ತಿಯ ಐಪಿಎಲ್'ನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಈಗ ಎಬಿ ಡಿವಿಲಿಯರ್ಸ್ ಮಗ ಅಬ್ರಹಾಂ ಕೂಡಾ ತಂದೆ ಹಾದಿಯನ್ನೇ ತುಳಿಯಲು ತೀರ್ಮಾನಿಸಿದಂತಿದೆ.

ಎಲ್ಲೆಲ್ಲೂ 'ಗೋ ಆರ್'ಸಿಬಿ' ಸ್ಲೋಗನ್ ಅನ್ನು ಅಬ್ರಾಹಂ ಮುದ್ದಾಗಿ ಹೇಳುವ ವಿಡಿಯೋವನ್ನು ಯೂಟ್ಯೂಬ್'ನಲ್ಲಿ ಈಗಾಗಲೇ ಒಂದು ಮಿಲಿಯನ್ ಜನ ವೀಕ್ಷಿಸಿದ್ದಾರೆ. ಪುಟ್ಟ ಕೈಯಲ್ಲಿ ಅಬ್ರಾಹಂ ಬ್ಯಾಟ್ ಬೀಸುವುದನ್ನು ನೋಡಿದರೆ, ಮುಂದೊಂದು ದಿನ ಅಬ್ರಾಹಂ ಕೂಡಾ ಮತ್ತೊಬ್ಬ ಸೂಪರ್ ಸ್ಟಾರ್ ಬ್ಯಾಟ್ಸ್'ಮನ್ ಆಗಲಿದ್ದಾನೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡುವಂತೆ ಮಾಡಿದ್ದಾನೆ.   

ನೀವೂ ಒಮ್ಮೆ ನೋಡಿ ಎಂಜಾಯ್ ಮಾಡಿ...

Follow Us:
Download App:
  • android
  • ios