ಹೆಸರಿಗೆ ಗುಡ್'ಬಾಯ್ ಹೇಳಿದ 'ಯಾಹೂ'
news
By Suvarna Web Desk | 10:46 PM Tuesday, 10 January 2017

ವೆರಿಝಾನ್ ಕಮ್ಯುನಿಕೇಷನ್ 4.8 ಬಿಲಿಯನ್ ಡಾಲರ್ಗೆ(32,640 ಕೋಟಿ) ಯಾಹೂ ಇಮೇಲ್, ವೆಬ್ಸೈಟ್, ಮೊಬೈಲ್ ಆ್ಯಪ್ ಮತ್ತು ಜಾಹಿರಾತು ವಿಭಾಗವನ್ನು ಖರೀದಿಸುತ್ತಿದೆ

ನ್ಯೂಜೆರ್ಸಿ(ಜ.10): ಎಲ್ಲಾ ಅಂದುಕೊಂಡಂತೆ ನಡೆದರೆ ಯಾಹೂ ತನ್ನ ಹೆಸರು ಕಳೆದುಕೊಳ್ಳಲಿದೆ. ಹೊಸ ಹೆಸರು ಅಲ್ಟಾಬಾ ಇಂಕ್. ವಿಶ್ವದ ಅಗ್ರಗಣ್ಯ ದರಸಂಪರ್ಕಸೇವಾ ಕಂಪನಿ ವೆರಿಝಾನ್ ಕಮ್ಯುನಿಕೇಷನ್ 4.8 ಬಿಲಿಯನ್ ಡಾಲರ್‌ಗೆ(32,640 ಕೋಟಿ) ಯಾಹೂ ಇಮೇಲ್, ವೆಬ್‌ಸೈಟ್, ಮೊಬೈಲ್ ಆ್ಯಪ್ ಮತ್ತು ಜಾಹಿರಾತು ವಿಭಾಗವನ್ನು ಖರೀದಿಸುತ್ತಿದೆ. ಖರೀದಿ ಪ್ರಕ್ರಿಯೆ ಮುಗಿದ ನಂತರ ಯಾಹೂ ಅಲ್ಟಾಬಾ ಇಂಕ್ ಹೆಸರು ಪಡೆಯಲಿದೆ. ಯಾವೂ ಸಿಇಒ ಮಾರಿಸಾ ಮೇಯರ್ ಸಹಸ್ಥಾಪಕ ಡೆವಿಡ್ ಫಿಲೋ ಮತ್ತು ಇತರ ನಾಲ್ಕು ನಿರ್ದೇಶಕರು ಹನ್ನೊಂದು ಸದಸ್ಯರ ಆಡಳಿತ ಮಂಡಳಿಗೆ ರಾಜಿನಾಮೆ ನೀಡಲಿದ್ದಾರೆ. ಆದರೆ, ಯಾವೂ ಬ್ರಾಂಡ್ ಅನ್ನು ವೆರಿಝಾನ್ ತನ್ನ ಬಳಿಯೇ ಇಟ್ಟುಕೊಳ್ಳಲಿದೆ.

Show Full Article