Asianet Suvarna News Asianet Suvarna News

ಒಂಟಿ ಸಲಗಕ್ಕೆ ಅಸ್ಸಾಂನ ಆನೆ ಚಿಕಿತ್ಸಕನಿಂದ ಟ್ರೀಟ್ಮೆಂಟ್

ರೋಬ್ಬರಿ 52 ದಿನಗಳ ಕಾಲ ರಾಮನಗರದಲ್ಲಿ  ನರಕಯಾತನೆ ಅನುಭವಿಸಿದ್ದ ಕಾಡಾನೆಗೆ ಕೊನೆಗೂ ಚಿಕಿತ್ಸೆ  ಭಾಗ್ಯ ಸಿಕ್ಕಿದೆ.  ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರಿನ ಜಲಾಶಯದಲ್ಲಿ ಒಂಟಿ ಸಲಗವೊಂದು ಅಪಾಯಕ್ಕೆ ಸಿಲುಕಿತ್ತು. ಈವರೆಗೂ ಅರಣ್ಯ ಇಲಾಖೆ ನೆಪ ಮಾತ್ರಕ್ಕೆ  ನೋವು ನಿವಾರಕ ಮಾತ್ರೆಗಳನ್ನು ನೀಡುತ್ತಿತ್ತು. ಆದರೆ ಇದೀಗ ಆ ಕಾಡಾನೆಗೆ ಕೊನೆಗೂ ನರಕದಿಂದ ಮುಕ್ತಿ ಸಿಗುವ ಕಾಲ ಬಂದಿದೆ. ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ ನೀಡಿದ್ದಾರೆ. ಶಕ್ತಿಯಿಲ್ಲದೇ ಕುಂಟುತ್ತಲೇ ಹೆಜ್ಜೆ ಹಾಕುತ್ತಾ ಇರುವ ಒಂಟಿಸಲಗಕ್ಕೆ ಆಹಾರ ನೀಡಲಾಗಿದೆ. ಜತೆಗೆ ವೈದ್ಯರ ತಂಡ ಚಿಕಿತ್ಸೆ ನೀಡಿದ್ದಾರೆ. ಆನೆಯ ಚಿಕಿತ್ಸೆಯ ಬಗ್ಗೆ ವೀಕ್ಷಣೆ ನಡೆಸಲು ಅಸ್ಸಾಂ ರಾಜ್ಯದ ಗುವಾಹಟಿಯ ಡಾ.ಕುಶಾಲ್​ ಶರ್ಮ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Wounded Elephant Gets Tratment

ಬೆಂಗಳೂರು(ಅ.21): ಬರೋಬ್ಬರಿ 52 ದಿನಗಳ ಕಾಲ ರಾಮನಗರದಲ್ಲಿ  ನರಕಯಾತನೆ ಅನುಭವಿಸಿದ್ದ ಕಾಡಾನೆಗೆ ಕೊನೆಗೂ ಚಿಕಿತ್ಸೆ  ಭಾಗ್ಯ ಸಿಕ್ಕಿದೆ.  ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರಿನ ಜಲಾಶಯದಲ್ಲಿ ಒಂಟಿ ಸಲಗವೊಂದು ಅಪಾಯಕ್ಕೆ ಸಿಲುಕಿತ್ತು. ಈವರೆಗೂ ಅರಣ್ಯ ಇಲಾಖೆ ನೆಪ ಮಾತ್ರಕ್ಕೆ  ನೋವು ನಿವಾರಕ ಮಾತ್ರೆಗಳನ್ನು ನೀಡುತ್ತಿತ್ತು.

ಆದರೆ ಇದೀಗ ಆ ಕಾಡಾನೆಗೆ ಕೊನೆಗೂ ನರಕದಿಂದ ಮುಕ್ತಿ ಸಿಗುವ ಕಾಲ ಬಂದಿದೆ. ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ ನೀಡಿದ್ದಾರೆ. ಶಕ್ತಿಯಿಲ್ಲದೇ ಕುಂಟುತ್ತಲೇ ಹೆಜ್ಜೆ ಹಾಕುತ್ತಾ ಇರುವ ಒಂಟಿಸಲಗಕ್ಕೆ ಆಹಾರ ನೀಡಲಾಗಿದೆ. ಜತೆಗೆ ವೈದ್ಯರ ತಂಡ ಚಿಕಿತ್ಸೆ ನೀಡಿದ್ದಾರೆ. ಆನೆಯ ಚಿಕಿತ್ಸೆಯ ಬಗ್ಗೆ ವೀಕ್ಷಣೆ ನಡೆಸಲು ಅಸ್ಸಾಂ ರಾಜ್ಯದ ಗುವಾಹಟಿಯ ಡಾ.ಕುಶಾಲ್​ ಶರ್ಮ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

 ಆಗಸ್ಟ್​ 30 ರಂದು ಬೆಂಗಳೂರಿನ ಗೋಪಾಲನಗರದಲ್ಲಿ ಈ ಆನೆ ಕಾಲುವೆಗೆ ಬಿದ್ದು ಬಲಗಾಲು ಮುರಿದುಕೊಂಡಿತ್ತು. ಇದೀಗ ಈ ಕಾಡಾನೆಗೆ ವೈದ್ಯರು ಚಿಕಿತ್ಸೆ ನೀಡಲು ಒಲವು ತೋರಿದ್ದಾರೆ. ಅಲ್ಲದೇ ಮಂಚನಬೆಲೆಯಲ್ಲಿ  ಇಂದು ಆನೆಯ ಕಾಲಿನ ಎಕ್ಸ್​ ರೇ ತೆಗೆದು ಆ್ಯಂಟಿ ಬಯೋಟಿಕ್ಸ್​ ನೀಡಿ, ವಿಟಮಿನ್​ ಥೆರಮಿ ನಡೆಸೋದಾಗಿ ಡಾ. ಕುಶಾಲ್​ ಶರ್ಮ ತಿಳಿಸಿದ್ದಾರೆ.

 

Follow Us:
Download App:
  • android
  • ios