Asianet Suvarna News Asianet Suvarna News

(ವಿಡಿಯೋ)ಮೆಸೇಜ್ ಓದುವಾಗ ಎಚ್ಚರದಿಂದಿರಿ ಇಲ್ಲವಾದಲ್ಲಿ ನೀವೂ ಈಕೆಯಂತೆ ಗುಂಡಿಗೆ ಬೀಳಬಹುದು!

ಕೆಲವೊಂದು ಬಾರಿ ನಾವು ಮೊಬೈಲ್'ನಲ್ಲಿ ಅದೆಷ್ಟು ಮುಳುಗಿರುತ್ತೇವೆಂದರೆ ಖುದದಾಗಿ ನಾವೇ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಇಂತಹುದೇ ಘಟನೆಯೊಂದು ಅಮೆರಿಕಾದ ಮಹಿಳೆಯೊಂದಿಗೆ ನಡೆದಿದೆ. ಆಕೆ ಮೊಬೈಲ್'ಗೆ ಬಂದ ಮೆಸೇಜ್'ಗಳನ್ನು ಓದುವುದರಲ್ಲಿ ಎಷ್ಟು ತಲ್ಲೀನಳಾಗಿದ್ದಳೆಂದರೆ ತನ್ನೆದುರಿಗಿರುವ ಬೇಸ್'ಮೆಂಟ್'ನ ಬಾಗಿಲು ತೆರೆದಿದೆ ಎಂಬುವುದೂ ಆಕೆಯ ಗಮನಕ್ಕೆ ಬರಲಿಲ್ಲ. ಪರಿಣಾಮ ಬೇಸ್ಮೆಂಟ್'ಗೆ ಜಾರಿ ಬಿದ್ದು ಗಾಯಾಳುವಾಗಿದ್ದಾಳೆ.

woman falls down in basement while reading mobile message

ನ್ಯೂಜರ್ಸಿ(ಜೂ.10): ಕೆಲವೊಂದು ಬಾರಿ ನಾವು ಮೊಬೈಲ್'ನಲ್ಲಿ ಅದೆಷ್ಟು ಮುಳುಗಿರುತ್ತೇವೆಂದರೆ ಖುದದಾಗಿ ನಾವೇ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಇಂತಹುದೇ ಘಟನೆಯೊಂದು ಅಮೆರಿಕಾದ ಮಹಿಳೆಯೊಂದಿಗೆ ನಡೆದಿದೆ. ಆಕೆ ಮೊಬೈಲ್'ಗೆ ಬಂದ ಮೆಸೇಜ್'ಗಳನ್ನು ಓದುವುದರಲ್ಲಿ ಎಷ್ಟು ತಲ್ಲೀನಳಾಗಿದ್ದಳೆಂದರೆ ತನ್ನೆದುರಿಗಿರುವ ಬೇಸ್'ಮೆಂಟ್'ನ ಬಾಗಿಲು ತೆರೆದಿದೆ ಎಂಬುವುದೂ ಆಕೆಯ ಗಮನಕ್ಕೆ ಬರಲಿಲ್ಲ. ಪರಿಣಾಮ ಬೇಸ್ಮೆಂಟ್'ಗೆ ಜಾರಿ ಬಿದ್ದು ಗಾಯಾಳುವಾಗಿದ್ದಾಳೆ.

ಅಮೆರಿಕಾದ ನ್ಯೂಜರ್ಸಿಯಲ್ಲಿ ನಡೆದ ಈ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯಾವ ರೀತಿ ಲೋಕದ ಪರಿವೆಯಿಲ್ಲದೇ ಮೊಬೈಲ್'ಗೆ ಬಂದ ಸಂದೇಶಗಳನ್ನು ಓದುವುದರಲ್ಲಿ ತಲ್ಲೀನಳಾದ ಮಹಿಳೆ ಬೇಸ್ಮೆಂಟ್'ನಲ್ಲಿ ಬೀಳುತ್ತಾಳೆ ಎಂಬುವುದನ್ನು ಈ ವಿಡಿಯೋದಲ್ಲಿ ನೀವು ಗಮನಿಸಬಹುದು. ಪಕ್ಕದಲ್ಲೇ ಹಾದು ಹೋಗುತ್ತಿದ್ದ ಯುವತಿಯರು ಕೂಡಾ ಮಹಿಳೆ ಬೀಳುತ್ತಿರುವುದನ್ನು ಕಂಡು ಭಯಗೊಂಡಿದ್ದಾರೆ ಆದರೂ ಹತ್ತಿರ ತೆರಳಿ ಏನಾಗಿದೆ ಎಂಬುವುದನ್ನು ತಿಳಿಯುವ ಯತ್ನ ನಡೆಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಕಾರ್ಮಿಕನೊಬ್ಬ ಬೇಸ್ಮೆಂಟ್ ಒಳಗಿನಿಂದ ಹೊರ ಬಂದಿದ್ದಾನೆ.

ಇನ್ನು ಮಹಿಳೆ ಬಿದ್ದ ಬೇಸ್ಮೆಂಟ್ 6 ಅಡಿ ಆಳವಿತ್ತು. ಹಾಗೂ ಗ್ಯಾಸ್ ಲೈನ್ ಸರಿ ಮಾಡುವ ಸಲುವಾಗಿ ಇದರ ಬಾಗಿಲು ತೆರೆಯಲಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ. ಇನ್ನು ತುರ್ತು ಸೇವಾ ಘಟಕಕ್ಕೆ ಕರೆ ಮಾಡಿ ಮಹಿಳೆಯನ್ನು ಹೊರಗೆಳೆದಿದ್ದಾರೆ. ಬಿದ್ದ ರಭಸಕ್ಕೆ ಮಹಿಳೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

Follow Us:
Download App:
  • android
  • ios