Asianet Suvarna News Asianet Suvarna News

ಆದಾಯ ತೆರಿಗೆ ಸಲ್ಲಿಕೆಯಲ್ಲಿ ಫಾರ್ಮ್ 16 ಬಗ್ಗೆ ಒಂದಿಷ್ಟು ಮಾಹಿತಿ

ಆದಾಯ ತೆರಿಗೆ ಕಾಯಿದೆ 1961ರ 203 ಸೆಕ್ಷನ್'ನಡಿಯಲ್ಲಿ ಬರುವ ದಾಖಲೆಯೆ ಫಾರ್ಮ್ 16, ಇದು ಉದ್ಯೋಗಿಯ ಟಿಡಿಎಸ್'ನ ತೆರಿಗೆ ಕಡಿತಗೊಂಡಿರುವ ಮಾಹಿತಿ ನೀಡುತ್ತದೆ. ಫಾರ್ಮ್ 16, ಅನ್ನು ಸಾಮಾನ್ಯವಾಗಿ ಸಂಬಳ ಪ್ರಮಾಣಪತ್ರ ಎಂದಲೂ ಕರೆಯಲಾಗುತ್ತದೆ. ಉದ್ಯೋಗಿಗೆ ಉದ್ಯೋಗದಾತ ಒದಗಿಸುವ ದಾಖಲೆಯಾಗಿದೆ. ಉದ್ಯೋಗದಾತರಿಂದ ನಿಮ್ಮ ಹಿಂದಿನ ವರ್ಷದ ನಿಮ್ಮ ಒಟ್ಟು ಆದಾಯ, ನಿವ್ವಳ ಆದಾಯ, ತೆರಿಗೆ ಕಡಿತಗಳು, ತೆರಿಗೆ ಹೊಣೆಗಾರಿಕೆ ಮುಂತಾದ ಮಾಹಿತಿಗಳನ್ನು ಒಳಗೊಂಡಿರುತ್ತದೆ.

What role Form 16 has in income tax filing

ತೆರಿಗೆ ಪಾವತಿ ಸಂದರ್ಭದಲ್ಲಿ ಬಹುತೇಕ ಭಾರತೀಯರು ತಮ್ಮ ಆದಾಯ ತೆರಿಗೆ ಪಾವತಿಯನ್ನು ತುಂಬಿಸುವಾಗ ಪೇಚಾಡುವುದು ಸಾಮಾನ್ಯವಾಗಿರುತ್ತದೆ.ತೆರಿಗೆ ಇಲಾಖೆಗೆ ಹಲವು ಮೂಲಗಳಿಂದ ವಾರ್ಷಿಕ ವರಮಾನದ ವಿವರಗಳನ್ನು ಆದಾಯ ತೆರಿಗೆಯ ರಿಟರ್ನ್ಸ್ ಸಲ್ಲಿಸುತ್ತಾರೆ. ಹೆಚ್ಚಿನ ತೆರಿಗೆದಾರರು ತೆರಿಗೆ ಪಾವತಿಸುವ ಸಂದರ್ಭದಲ್ಲಿ ಹೆಚ್ಚು ಅನುಭವವನ್ನು ಹೊಂದಿರುತ್ತಾರೆ. ಇನ್ನೂ ಹಲವರೂ ಫಾರ್ಮ್ 16ರ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಸಾಮಾನ್ಯ.

ಫಾರ್ಮ್ 16 ಎಂದರೇನು ?

ಆದಾಯ ತೆರಿಗೆ ಕಾಯಿದೆ 1961ರ 203 ಸೆಕ್ಷನ್'ನಡಿಯಲ್ಲಿ ಬರುವ ದಾಖಲೆಯೆ ಫಾರ್ಮ್ 16, ಇದು ಉದ್ಯೋಗಿಯ ಟಿಡಿಎಸ್'ನ ತೆರಿಗೆ ಕಡಿತಗೊಂಡಿರುವ ಮಾಹಿತಿ ನೀಡುತ್ತದೆ. ಫಾರ್ಮ್ 16, ಅನ್ನು ಸಾಮಾನ್ಯವಾಗಿ ಸಂಬಳ ಪ್ರಮಾಣಪತ್ರ ಎಂದಲೂ ಕರೆಯಲಾಗುತ್ತದೆ. ಉದ್ಯೋಗಿಗೆ ಉದ್ಯೋಗದಾತ ಒದಗಿಸುವ ದಾಖಲೆಯಾಗಿದೆ. ಉದ್ಯೋಗದಾತರಿಂದ ನಿಮ್ಮ ಹಿಂದಿನ ವರ್ಷದ ನಿಮ್ಮ ಒಟ್ಟು ಆದಾಯ, ನಿವ್ವಳ ಆದಾಯ, ತೆರಿಗೆ ಕಡಿತಗಳು, ತೆರಿಗೆ ಹೊಣೆಗಾರಿಕೆ ಮುಂತಾದ ಮಾಹಿತಿಗಳನ್ನು ಒಳಗೊಂಡಿರುತ್ತದೆ.

ಫಾರ್ಮ್ 16 ಹಾಗೂ ಫಾರ್ಮ್ 16ಎಗೂ ಇರುವ ವ್ಯತ್ಯಾಸವೇನು ?

ನೀವು ಫ್ರೀಲ್ಯಾನ್ಸ್'ರ್ ಅಥವಾ ಗುತ್ತಿಗೆಯ ಉದ್ಯೋಗಿಯಾಗಿದ್ದಲ್ಲಿ, ನಿಮ್ಮ ಕ್ಲೈಂಟ್ ಅಥವಾ ಉದ್ಯೋಗದಾತರಿಂದ ಮೂಲದಲ್ಲಿ ತೆರಿಗೆ ಕಡಿತಗೊಳಿಸಿರುವುದರ ಬಗ್ಗೆ ಫಾರ್ಮ್ 16 ಎ ನಲ್ಲಿ ಉಲ್ಲೇಖಿಸಲಾಗಿರುತ್ತದೆ. ಫಾರ್ಮ್ 16ಎ ನಿಮ್ಮ ಉದ್ಯೋಗದಾತ ಅಥವಾ ಕ್ಲೈಂಟ್'ನಿಂದ ಕಮಿಷನ್ ಅಥವಾ ಪಾವತಿಗಳ ರೀತಿಯಲ್ಲಿ ಬೇರೆ ಮೂಲಗಳಿಂದ ಆದಾಯ ರೀತಿಯಲ್ಲಿ ಸ್ವೀಕರಿಸದ ಮೂಲಗಳ ಪಡೆದುಕೊಂಡ ಟಿಡಿಎಸ್ ಪ್ರಮಾಣಪತ್ರವಾಗಿರುತ್ತದೆ.

ಫಾರ್ಮ್ 16ನ್ನು ಪಡೆದುಕೊಳ್ಳುವುದು ಹೇಗೆ ?

ಉದ್ಯೋಗಿಗಳಿಗೆ ಪ್ರತಿ ವರ್ಷ ಏಪ್ರಿಲ್ ಅಂತ್ಯದ ವೇಳೆಗೆ ಫಾರ್ಮ್ 16 ನೀಡಲಾಗುತ್ತದೆ. ಈ ದಿನಗಳಲ್ಲಿ ಬಹುತೇಕ ಉದ್ಯೋಗಿಗಳು ಡಿಜಿಟಲ್ ಸಹಿಯೊಂದಿಗೆ ಆನ್'ಲೈ'ನ್'ನಲ್ಲಿ ಕಳುಹಿಸುತ್ತಾರೆ. ಆರ್ಥಿಕ ವರ್ಷದಲ್ಲಿ ವ್ಯಕ್ತಿಯೊಬ್ಬ ಸ್ವತಃ ಉದ್ಯೋಗ ಬದಲಾಯಿಸಿದ್ದರೆ ಆತ ಐಟಿಆರ್ ಫೈಲಿಂಗ್ ಮಾಡುವ ಮುನ್ನ ಹಳೆಯ ಹಾಗೂ ನೂತನ ಸಂಸ್ಥೆಯಿಂದ ಫಾರ್ಮ್ 16 ಪಡೆದುಕೊಳ್ಳುವ ಅರ್ಹತೆ ಹೊಂದಿರುತ್ತಾನೆ.

ಫಾರ್ಮ್ 16ಅನ್ನು ಅರ್ಥಮಾಡಿಕೊಳ್ಳುವುದು ಹೇಗೆ

ಫಾರ್ಮ್ 16 ಸ್ಥೂಲವಾಗಿ ವಿಭಾಗ-ಎ ಹಾಗೂ ವಿಭಾಗ ಬಿ ಎಂದು 2 ವಿಭಾಗಗಳನ್ನು ಹೊಂದಿದೆ.  ವಿಭಾಗ ಎ'ನಲ್ಲಿ ಉದ್ಯೋಗಿಯ ಪಾನ್, ವಿಳಾಸ,ಮೌಲ್ಯಮಾಪನ ವರ್ಷ, ತೆರಿಗೆ ವಿನಾಯಿತಿಗಳ ಸಾರಾಂಶ ಮತ್ತು ಉದ್ಯೋಗದಾತರಿಂದ ಸರ್ಕಾರಕ್ಕೆ ಪಾವತಿಸಿದ ಮೊತ್ತ ಸೇರಿದಂತೆ ನೌಕರರ ವಿವರಗಳನ್ನು ಒಳಗೊಂಡಿರುವ ವೇತನ ಪ್ರಮಾಣಪತ್ರ. ವಿಭಾಗ 'ಬಿ'ಯು ಒಟ್ಟು ಸಂಬಳದ ಹಂತಹಂತದ ಲೆಕ್ಕಾಚಾರಗಳು, ವಿನಾಯಿತಿ ಪಡೆದಿರುವುದು, ನಿವ್ವಳ ತೆರಿಗೆಯ ಸಂಬಳ, ವಿವಿಧ ಹೂಡಿಕೆಗಳಿಗಾಗಿ 80C ರಿಂದ 80 ರ ಅಡಿಯಲ್ಲಿನ ತೆರಿಗೆ ಕಡಿತಗಳು, ತೆರಿಗೆ ಪಾವತಿಸುವ ಮೊತ್ತ ಇತ್ಯಾದಿಗಳನ್ನು ಹೇಗೆ ಮರುಪಾವತಿಸಬೇಕೆಂದು ಸೂಚಿಸುವ ಅನೆಕ್ಸ್'ಅನ್ನು ಒಳಗೊಂಡಿರುತ್ತದೆ.

ಫಾರ್ಮ್ 16 ಹೇಗೆ ಮುಖ್ಯ

ಫಾರ್ಮ್ 16 ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಪ್ರಮುಖವಾಗಿದೆ ಏಕೆಂದರೆ ಇದು ನಿಮ್ಮ ಆದಾಯದಿಂದ ನಿಮ್ಮ ಒಟ್ಟು ಆದಾಯ ಮತ್ತು ಆದಾಯ ತೆರಿಗೆಯನ್ನು ಕಡಿತಗೊಳಿಸಲ್ಪಟ್ಟಿರುತ್ತದೆ. ಇದು ನಿಮಗೆ ಸಾಲ ಅರ್ಜಿಯ ಪರಿವೀಕ್ಷೆಯ ಪ್ರಕ್ರಿಯೆಯಲ್ಲಿ ನೀವು ಐಟಿಆರ್ ಫೈಲ್ ಮಾಡಿರದಿದ್ದರೆ ನಿರ್ದಿಷ್ಟ ಮೌಲ್ಯಮಾಪನ ವರ್ಷದಲ್ಲಿ ಸಹಾಯಕವಾಗುವ ದಾಖಲೆ.

ಫಾರ್ಮ್ 16 ಲಭ್ಯವಿಲ್ಲದಿದ್ದರೆ ಹೇಗೆ ತೆರಿಗೆ ಸಲ್ಲಿಸುತ್ತೀರಿ ?

ಫಾರ್ಮ್ 16 ಐಟಿ ರಿಟರ್ನ್ಸ್ ಸಲ್ಲಿಸುವ ವೇಳೆ ಅತೀ ಸುಲಭವಾಗಿ ಸಹಾಯಕವಾಗುವ ದಾಖಲೆ. ಆದಾಗ್ಯೂ, ಐಟಿಆರ್ ಫೈಲಿಂಗ್ ಮಾಡುವಾಗ  ಫಾರ್ಮ್ 16 ದಾಖಲಿಸುವುದು ಕಡ್ಡಾಯವಾಗಿರುವುದಿಲ್ಲ. ನೀವು ಸ್ವತಃ ನೀವಾಗಿಯೇ  ಅಥವಾ ಸಿಎ ಮೂಲಕ ಐಟಿಆರ್ ಸಲ್ಲಿಸಬಹುದು. ನಿಮ್ಮ ಬಳಿ ಫಾರ್ಮ್ 16/ಫಾರ್ಮ್ 16ಎ ಇಲ್ಲದಿದ್ದರೆ, ನೀವು ಆನ್'ಲೈನ್'ನಲ್ಲಿ ಫಾರ್ಮ್ 26ಎಎಸ್ ಮೂಲಕ ಐಟಿಆರ್'ಅನ್ನು ಸಲ್ಲಿಸಬಹುದು. ಇದು ತೆರಿಗೆ ಕಡಿತಗೊಂಡ ನಿಮ್ಮ ಮೂಲದ ಎಲ್ಲ ಮಾಹಿತಿ ಒಳಗೊಂಡಿರುತ್ತದೆ. ಇ-ಫೈಲಿಂಗ್ ಸೈಟ್'ನಲ್ಲಿ ಒಬ್ಬ ಬ್ಯಾಂಕ್ ನಿಯಮದ ಪ್ರಕಾರ ಆದಾಯ ವಿವರಗಳೊಂದಿಗೆ ತೆರಿಗೆ ರಿಟರ್ನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಎಫ್ಡಿಗಳ ಮೇಲಿನ ಬಡ್ಡಿಯ ಇತರ ಆದಾಯಗಳನ್ನು ಉಲ್ಲೇಖಿಸಬಹುದು. ತೆರಿಗೆಯ ಆದಾಯವನ್ನು ಲೆಕ್ಕ ಮಾಡಿದ ನಂತರ, ಹೆಚ್ಚುವರಿ ತೆರಿಗೆಯನ್ನು ಮೂಲದಲ್ಲಿ ಕಡಿತಗೊಳಿಸಿದರೆ, ಉಳಿಕೆ ತೆರಿಗೆ ಮೊತ್ತ ಅಥವಾ ಹೆಚ್ಚುವರಿ ತೆರಿಗೆಯ ಮರುಪಾವತಿಯನ್ನು ಮೂಲದಲ್ಲಿ ಕಡಿತಗೊಳಿಸಲಾಗುತ್ತದೆ.

-ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್ ಬಜಾರ್.ಕಾಂ

Follow Us:
Download App:
  • android
  • ios