ವಿದ್ಯಾಬಾಲನ್ ಗರ್ಭಿಣಿಯಂತೆ?
news
By Suvarna Web Desk | 08:53 AM Monday, 20 March 2017

ಮದುವೆಯಾದ ಮಹಿಳೆಯೊಬ್ಬಳು ಆಸ್ಪತ್ರೆಗೆ ಹೋದ್ರೆ ಆಕೆ ಗರ್ಭಿಣಿ ಎಂದು ಅರ್ಥ ಕಲ್ಪಿಸುವುದೇ

ಮುಂಬೈ(ಮಾ.20): ಬಾಲಿವುಡ್ ಬೆಡಗಿ ವಿದ್ಯಾಬಾಲನ್ ಗರ್ಭಿಣಿಯಂತೆ ಎಂಬ ಅಂತೆ-ಕಂತೆಗಳು ಹರಿದಾಡ್ತಾ ಇದ್ದವು. ಈ ಬಗ್ಗೆ ವಿದ್ಯಾಬಾಲನ್ ಸ್ಪಷ್ಟನೆ ನೀಡಿದ್ದು, ಅದೆಲ್ಲ ವದಂತಿ. ನಾನು ಗರ್ಭಿಣಿಯಲ್ಲ ಎಂದಿದ್ದಾಳೆ ಬಾಲನ್. ಇತ್ತೀಚಿನ ಸಂದರ್ಶನವೊಂದರಲ್ಲಿ ಅಂತೆ ಕಂತೆಗಳಿಗೆ ವಿದ್ಯಾಬಾಲನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಕೈನೋವಿನ ಕಾರಣಕ್ಕೆ ಆಸ್ಪತ್ರೆಗೆ ಹೋಗ್ತಾ ಇದ್ದೇನೆ. ಆದರೆ ಬೇರೆಯದೇ ಸುದ್ದಿ ಹರಡುತ್ತಿದೆ. ಮದುವೆಯಾದ ಮಹಿಳೆಯೊಬ್ಬಳು ಆಸ್ಪತ್ರೆಗೆ ಹೋದ್ರೆ ಆಕೆ ಗರ್ಭಿಣಿ ಎಂದು ಅರ್ಥ ಕಲ್ಪಿಸುವುದೇ ಎಂದು  ಪ್ರಶ್ನೆ ಕೇಳಿದ್ದಾಳೆ ನಟಿ.

Show Full Article