ಇದು ಲಂಡನ್ ಏರ್'ಪೋರ್ಟ್ ಅಲ್ಲ; ರಾಜ್ ಕೋಟ್ ಬಸ್'ಸ್ಟಾಂಡ್!
news
By Suvarna Web Desk | 03:15 PM April 20, 2017

ಇದು ಲಂಡನ್ ಅಥವಾ ನ್ಯೂಯಾರ್ಕ್ನ ಏರ್'ಪೋರ್ಟ್ ಅಲ್ಲ! ಬದಲಿಗೆ ಗುಜರಾತ್'ನ ರಾಜ್'ಕೋಟ್'ನಲ್ಲಿ ಉದ್ಘಾಟಿಸಿದ ಬಸ್'ಸ್ಟಾಂಡ್ ಇದು! ಹಾಗಂತ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ  ಟ್ವಿಟರ್'ನಲ್ಲಿ ತಪ್ಪಾಗಿ ಪೋಸ್ಟ್ ಹಾಕಿಕೊಂಡಿದ್ದು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ನವದೆಹಲಿ (ಏ.20): ಇದು ಲಂಡನ್ ಅಥವಾ ನ್ಯೂಯಾರ್ಕ್ನ ಏರ್'ಪೋರ್ಟ್ ಅಲ್ಲ! ಬದಲಿಗೆ ಗುಜರಾತ್'ನ ರಾಜ್'ಕೋಟ್'ನಲ್ಲಿ ಉದ್ಘಾಟಿಸಿದ ಬಸ್'ಸ್ಟಾಂಡ್ ಇದು! ಹಾಗಂತ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ  ಟ್ವಿಟರ್'ನಲ್ಲಿ ತಪ್ಪಾಗಿ ಪೋಸ್ಟ್ ಹಾಕಿಕೊಂಡಿದ್ದು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ಗುಜರಾತ್'ನ ರಾಜ್'ಕೋಟ್'ನಲ್ಲಿ ಈ ಹೈಟೆಕ್ ಬಸ್'ಸ್ಟಾಂಡ್ ಗೆ ಶಂಕು ಸ್ಥಾಪನೆ ಮಾಡಲಾಗಿದೆ.  ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡ ಬಳಿಕ ಅದರ ಹೊರನೋಟ ಹೇಗಿರುತ್ತದೆ ಎನ್ನುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. 3ಡಿ ಸಿಎಡಿ ಮಾದರಿಯಲ್ಲಿ ತೆಗೆದ ಫೋಟೋವನ್ನು ಬಾಬುಲ್ ಸುಪ್ರಿಯೋ ಟ್ವೀಟರ್ ನಲ್ಲಿ ಶೇರ್ ಮಾಡಿ, ಇದು ಇಂಗ್ಲೆಂಡ್ ಅಥವಾ ನ್ಯೂಯಾರ್ಕ್ನ ಏರ್'ಪೋರ್ಟಲ್ಲ. ರಾಜ್ ಕೋಟಲ್ಲಿ ಉದ್ಘಾಟನೆಯಾದ ಬಸ್'ಸ್ಟಾಂಡ್ ಎಂದು ಟ್ವೀಟಿಸಿದ್ದರು. ವಾಸ್ತವವಾಗಿ ಈ ಬಸ್'ಸ್ಟಾಂಡ್ ಇನ್ನೂ ಉದ್ಘಾಟನೆಯಾಗಿಲ್ಲ. ಶಂಕುಸ್ಥಾಪನೆಯಾಗಿದೆ ಅಷ್ಟೇ! ಉದ್ಘಾಟನೆಯೇ ಆಗಿದೆ ಎಂದು ಸಚಿವರು ಮಾಡಿರುವ ಪೋಸ್ಟ್  ಟ್ವೀಟಿಗರ ಆಕ್ರೋಶಕ್ಕೆ ಒಳಗಾಗಿದೆ. ಯಾವಾಗ ಇವರ ಪೋಸ್ಟ್ ಟ್ರೋಲ್ ಆಗಲು ಶುರುವಾಯ್ತೋ, ಬಾಬುಲ್ ಸುಪ್ರಿಯೋ ಮುಜುಗರದಿಂದ ತಪ್ಪಿಸಿಕೊಳ್ಳಲು ನನ್ನ ಕ್ಲಾಸ್'ಮೇಟ್'ವೊಬ್ಬ ಇದನ್ನು ಕಳುಹಿಸಿದ. ನಾನು ಅದನ್ನೇ ಹಾಕಿದೆ ಎಂದು ತೇಪೆ ಹಚ್ಚಿದ್ದಾರೆ. ಪೋಸ್ಟ್ ಮಾಡುವಾಗ ಸ್ವಲ್ಪ ಅಜಾಗರೂಕರಾಗಿ ಸಾಮಾಜಿಕ ಜಾಲಿಗರು ಹೇಗೆ ಪೋಸ್ಟನ್ನು ಜಾಲಾಡುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.

 

Show Full Article