Asianet Suvarna News Asianet Suvarna News

ನಾಳೆ ಬಿಬಿಎಂಪಿ ಮೇಯರ್ ಚುನಾವಣೆ :ಗೆಲ್ಲುವವರ ಬಗ್ಗೆ,ಇನ್ನಷ್ಟು ಮಾಹಿತಿ

Tomorrow BBMP Mayor Election

ಬೆಂಗಳೂರು(ಸೆ.27): ನಾಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಜಯಂತಿ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯಲಿದೆ. ಈ ಚುನಾವಣಾ ಪ್ರಕ್ರಿಯೆಗೆ ನಗರ ಜಿಲ್ಲಾಧಿಕಾರಿ ಶಂಕರ್ , ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಾಕ್ಷಿಯಾಗಲಿದ್ದಾರೆ.

 

ಬಿಬಿಎಂಪಿ ಚುನಾವಣೆ :

ಒಟ್ಟು ಮತಗಳು                - 269

ಮ್ಯಾಜಿಕ್ ನಂಬರ್             - 135

ಬಿಬಿಎಂಪಿ ನಂಬರ್ ಗೇಮ್ :ಪಕ್ಷಗಳ ಬಲಾಬಲ ಹೀಗಿದೆ

ಕಾಂಗ್ರೆಸ್ :

ಕಾರ್ಪೊರೇಟರ್​ಗಳು          - 76

ವಿಧಾನಸಭೆ ಸದಸ್ಯರು        - 13

ವಿಧಾನ ಪರಿಷತ್ ಸದಸ್ಯರು - 15

ಸಂಸದರು                       - 02

ರಾಜ್ಯಸಭಾ ಸದಸ್ಯರು         - 06

-----------------------------------

ಒಟ್ಟು                              - 112

ಜೆಡಿಎಸ್ :

ಕಾರ್ಪೊರೇಟರ್​ಗಳು          - 14

ವಿಧಾನಸಭೆ ಸದಸ್ಯರು        - 03

ವಿಧಾನ ಪರಿಷತ್ ಸದಸ್ಯರು - 05

ಸಂಸದರು                       - 00

ರಾಜ್ಯಸಭಾ ಸದಸ್ಯರು         - 01

-----------------------------------

ಒಟ್ಟು                              - 23

ಬಿಜೆಪಿ :

ಕಾರ್ಪೊರೇಟರ್​ಗಳು          - 99

ವಿಧಾನಸಭೆ ಸದಸ್ಯರು        - 12

ವಿಧಾನ ಪರಿಷತ್ ಸದಸ್ಯರು - 08

ಸಂಸದರು                       - 03

ರಾಜ್ಯಸಭಾ ಸದಸ್ಯರು         - 03

-------------------------------------------------------------------------------

ಒಟ್ಟು                              - 125

 

ಪಕ್ಷೇತರ ರಾಜ್ಯಸಭಾ ಸದಸ್ಯರು         - 02 (ಬಿಜೆಪಿ ಬೆಂಬಲಿಸಬಹುದು)

ಪಕ್ಷೇತರ ಕಾರ್ಪೊರೇಟರ್​ಗಳು          - 07 (ಮೈತ್ರಿ ಬೆಂಬಲಿಗರು)

ಕಾಂಗ್ರೆಸ್ + ಜೆಡಿಎಸ್

112 + 23 = 135

ಬಿಜೆಪಿ = 125

ಪಕ್ಷೇತರರು =07 + 02

ಮೇಯರ್ ಚುನಾವಣೆಗೆ ನಡೆಯುವ ಪ್ರಮುಖ ಬೆಳವಣಿಗೆಗಳು

1) ಬೆಳಿಗ್ಗೆ 9 ರಿಂದ 10 ರೊಳಗೆ ನಾಮಪತ್ರ ಸಲ್ಲಿಕೆ

2) ಮೇಯರ್ ,ಉಪಮೇಯರ್​ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

3) ನಾಮಪತ್ರ ವಾಪಸಾತಿಗೆ 10.30 ಗಂಟೆವರೆಗೂ ಸಮಯ

4) 11ಕ್ಕೆ ಅಧಿಕೃತ ಅಭ್ಯರ್ಥಿಯ ನಾಮಪತ್ರ ಘೋಷಣೆ

5) 11.30 ಗಂಟೆ ಕೌನ್ಸಿಲ್​ ಹಾಲ್​ನಲ್ಲಿ ಹಾಜರಿರೊ ಅಭ್ಯರ್ಥಿಗಳ  ಏಣಿಕೆ

6) 259 ಮತದಾರರಿಂದ ಹಾಜರಾತಿ ಪುಸ್ತಕಕ್ಕೆ ಸಹಿ

7) 12ಕ್ಕೆ ಮೇಯರ್ ,ಉಪಮೇಯರ್​  ಅಭ್ಯರ್ಥಿಗಳಿಗೆ ಚುನಾವಣೆ

8) ಮತದಾರರು ಕೈ ಎತ್ತುವ ಮೂಲಕ ಬೆಂಬಲ

9) ಚುನಾವಣಾ ನೋಡೆಲ್​ ಅಧಿಕಾರಿಗಳು ಮತದಾರರ ಸಂಖ್ಯೆ ಏಣಿಕೆ

10) ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಅಧಿಕಾರಿಗಳಿಂದ ಮತದಾರರ ಸಂಖ್ಯೆ ಮಾಹಿತಿ

11) ಚುನಾವಣಾ ಆಯುಕ್ತರು ಮತ ಏಣಿಕೆ ಪರಿಶೀಲಸಿ ಅಂತಿಮವಾಗಿ 12.30 ಗಂಟೆಗೆ ಮೇಯರ್​ ಘೋಷಣೆ

ಮೇಯರ್ ಅಭ್ಯರ್ಥಿಗಳು

1) ಕಾಂಗ್ರೆಸ್​ ಮೇಯರ್ ಆಭ್ಯರ್ಥಿ

 

ಜಿ. ಪದ್ಮಾವತಿ

ಪ್ರಕಾಶ್​ ನಗರ ವಾರ್ಡ್

4 ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ

2 ಬಾರಿ ಜೆಡಿಎಸ್​ ಕಾರ್ಫೊರೇಟರ್ ಆಗಿ , ಮತ್ತೆ 2 ಬಾರಿ ಕಾಂಗ್ರೆಸ್ ಕಾರ್ಪೋರೇಟರ್ ಆಗಿ ಆಯ್ಕೆ

ಬಿಜೆಪಿ ಸುರೇಶ್ ಕುಮಾರ್ ವಿರುದ್ಧ ಶಾಸಕ ಆಭ್ಯರ್ಥಿಯಾಗಿಯೂ ಒಮ್ಮೆ ಸ್ಪರ್ಧೆ

ಹಿಂದುಳಿದ ವರ್ಗ -ಬಿ  ವರ್ಗಕ್ಕೆ ಸೇರಿದ್ದಾರೆ

 

2) ಕಾಂಗ್ರೆಸ್​ ಮೇಯರ್ ಅಭ್ಯರ್ಥಿ

 

ಪಿ. ಸೌಮ್ಯ ಶಿವಕುಮಾರ್​

ಶಾಂತಿನಗರ ವಾರ್ಡ್​

2 ಬಾರಿ ಕಾರ್ಫೋರೇಟರ್​ ಆಗಿ ಆಯ್ಕೆಯಾಗಿದ್ದಾರೆ

ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ

ಸಾಮಾನ್ಯ ವರ್ಗಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದವರು

ಎಂ.ಎ. ಪದವಿದರು

ಉಪ ಮೇಯರ್

ಉಪ ಮೇಯರ್ ರೇಸ್​ನಲ್ಲಿ ರಾಧಾಕೃಷ್ಣ ವಾರ್ಡ್‌ನ ಆನಂದ್ ಹಾಗೂ ನಾಗಪುರ ವಾರ್ಡಿನ ಭದ್ರೇಗೌಡ ಇದ್ದಾರೆ

 

 

 

 

Follow Us:
Download App:
  • android
  • ios