Asianet Suvarna News Asianet Suvarna News

ಗಮನ ನೀಡದ ಕೇಂದ್ರ: ಮೂತ್ರ ಸೇವಿಸಿ ರೈತರ ಪ್ರತಿಭಟನೆ

ಈವರೆಗೆ ಮೃತ ರೈತರ ತಲೆಬುರುಡೆ ಹಿಡಿದು, ಅರ್ಧ ಮೀಸೆ ಬೋಳಿಸಿ, ತಲೆ ಬೋಳಿಸಿ, ಸಂಪೂರ್ಣ ಬೆತ್ತಲಾಗಿ, ಇಲಿ ತಿಂದು, ರಸ್ತೆ ಮೇಲೆ ಅನ್ನ-ಸಾರು ಕಲಿಸಿ ತಿಂದು.. ವಿನೂತನ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಶನಿವಾರ ಮಾನವನ ಮೂತ್ರ ಕುಡಿದು ರೈತರು ಪ್ರತಿಭಟನೆ ನಡೆಸುವ ವೇಳೆ ಇದನ್ನು ತಡೆಯಲು ಪೊಲೀಸರು ಯತ್ನಿಸಿದರು. ಆದರೆ ಅಷ್ಟೊತ್ತಿನಲ್ಲಿ ರೈತರು ಮೂತ್ರ ಸೇವಿಸಿಯಾಗಿತ್ತು.

TN Farmers Consume Urine to Stress their Demands

ನವದೆಹಲಿ: ಬರ ಪರಿಹಾರ, ಬೆಳೆಗಳಿಗೆ ಬೆಂಬಲ ಬೆಲೆ ಇತ್ಯಾದಿಗೆ ಆಗ್ರಹಿಸಿ ದಿಲ್ಲಿಯ ಜಂತರ್‌ಮಂತರ್‌ನಲ್ಲಿ 39 ದಿನದಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಇನ್ನೊಂದು ಮಜಲು ಮುಟ್ಟಿದೆ. ಶನಿವಾರ ಪ್ರತಿಭಟನಾನಿರತ ರೈತರು ಮಾನವನ ಮೂತ್ರ ಕುಡಿದು ಪ್ರತಿಭಟನೆ ನಡೆಸಿದ್ದಾರೆ.

ಈವರೆಗೆ ಮೃತ ರೈತರ ತಲೆಬುರುಡೆ ಹಿಡಿದು, ಅರ್ಧ ಮೀಸೆ ಬೋಳಿಸಿ, ತಲೆ ಬೋಳಿಸಿ, ಸಂಪೂರ್ಣ ಬೆತ್ತಲಾಗಿ, ಇಲಿ ತಿಂದು, ರಸ್ತೆ ಮೇಲೆ ಅನ್ನ-ಸಾರು ಕಲಿಸಿ ತಿಂದು.. ವಿನೂತನ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಶನಿವಾರ ಮಾನವನ ಮೂತ್ರ ಕುಡಿದು ರೈತರು ಪ್ರತಿಭಟನೆ ನಡೆಸುವ ವೇಳೆ ಇದನ್ನು ತಡೆಯಲು ಪೊಲೀಸರು ಯತ್ನಿಸಿದರು. ಆದರೆ ಅಷ್ಟೊತ್ತಿನಲ್ಲಿ ರೈತರು ಮೂತ್ರ ಸೇವಿಸಿಯಾಗಿತ್ತು.

‘ಸರ್ಕಾರ ನಮಗೆ ನೀರು ಕೊಡುತ್ತಿಲ್ಲ. ಅದಕ್ಕಾಗಿ ಮೂತ್ರ ಕುಡಿದೆವು' ಎಂದು ರೈತ ಮುಖಂಡ ಪಿ. ಅಯ್ಯಕ್ಕಣ್ಣು ಕಿಡಿಕಾರಿದರು. ನಾವು ಮೂತ್ರ ಕುಡಿಯದಂತೆ ಪೊಲೀಸರು ತಡೆಯಬಹುದು. ಆದರೆ ಅದನ್ನು ನಾವು ಬಕೆಟ್‌ನಲ್ಲಿ ಸಂಗ್ರಹಿಸದಂತೆ ಅವರು ತಡೆಯಲಾರರು. ನಾವು ಈ ಬಕೆಟ್‌ ಅನ್ನು ತಮಿಳುನಾಡಿಗೆ ಕಳುಹಿಸಿಕೊಡಲಿದ್ದೇವೆ ಎಂದು ರೈತ ನಾಯಕರು ಹೇಳಿದ್ದಾರೆ. ಇಷ್ಟೆಲ್ಲಾ ಪ್ರತಿಭಟನೆಯ ಹೊರತಾಗಿಯೂ ನಮ್ಮ ಬೇಡಿಕೆಗೆ ಸರ್ಕಾರ ಮಣಿಯದೇ ಹೋದಲ್ಲಿ ನಾವು ಮಾನವ ಮಲ ಸೇವಿಸಲಿದ್ದೇವೆ ಎಂದು ರೈತರು ಎಚ್ಚರಿಸಿದ್ದಾರೆ.

Follow Us:
Download App:
  • android
  • ios