Asianet Suvarna News Asianet Suvarna News

ಈ ಶಾಲೆಯ ವಿದ್ಯಾರ್ಥಿನಿಯರಿಗೆ 'ಮುಟ್ಟಿನ ರಜೆ' ಇದೆ

ಉದ್ಯೋಗಸ್ಥ  ಮಹಿಳೆಯರಿಗೆ ಮುಟ್ಟಿನ ರಜೆ ನೀಡಬೇಕು ಎನ್ನುವ ವಾದ ಆಗಾಗ ಕೇಳಿ ಬರುತ್ತದೆ. ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕೇರಳದ ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕಳೆದ ಶತಮಾನಗಳಿಂದಲೂ ಮೂರು ದಿನ 'ಮುಟ್ಟಿನ ರಜೆ' ನೀಡುವ ಪರಿಪಾಠವನ್ನು ಹೊಂದಿದೆ.  

This Kerala school had allowed period leave over 105 years ago

ಕೇರಳ (ಆ.20): ಉದ್ಯೋಗಸ್ಥ  ಮಹಿಳೆಯರಿಗೆ ಮುಟ್ಟಿನ ರಜೆ ನೀಡಬೇಕು ಎನ್ನುವ ವಾದ ಆಗಾಗ ಕೇಳಿ ಬರುತ್ತದೆ. ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕೇರಳದ ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕಳೆದ ಶತಮಾನಗಳಿಂದಲೂ ಮೂರು ದಿನ 'ಮುಟ್ಟಿನ ರಜೆ' ನೀಡುವ ಪರಿಪಾಠವನ್ನು ಹೊಂದಿದೆ.  

ಇಲ್ಲಿನ ತ್ರಿಪುನಿತುರಾ ಮಹಿಳಾ  ಸರ್ಕಾರಿ ಶಾಲೆಯಲ್ಲಿ 1912 ವಿದ್ಯಾರ್ಥಿನಿಯರು ಕಲಿಯುತ್ತಿದ್ದು,  ಪ್ರತಿತಿಂಗಳು ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ. ಒಂದು ವೇಳೆ ವಾರ್ಷಿಕ ಪರೀಕ್ಷೆ ಸಮಯದಲ್ಲಿ ಮುಟ್ಟಾದರೆ ಆ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.

ಶೈಕ್ಷಣಿಕ ಕಾನೂನಿನ ಪ್ರಕಾರ, ವಾರ್ಷಿಕ ಪರೀಕ್ಷೆಗೆ ಕುಳಿತುಕೊಳ್ಳಲು 300 ದಿನಗಳ ಹಾಜರಾತಿ ಅತ್ಯಗತ್ಯ. ನಿಯಮಿತವಾಗಿ ಟೆಸ್ಟ್’ಗಳನ್ನು ಮಾಡಲಾಗುತ್ತದೆ. ಅದಕ್ಕೆ ವಿದ್ಯಾರ್ಥಿಗಳು ಹಾಜರಾಗುವುದು ಕಡ್ಡಾಯ. ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಯರು ಶಾಲೆಗೆ ಬರದಿದ್ದಾಗ ಸಮಸ್ಯೆಯಾಗುತ್ತದೆ ಎಂದು ಶೈಕ್ಷಣಿಕ ಅಧಿಕಾರಿಗಳು ಹೇಳಿದ್ದಾರೆ.

ಶತಮಾನಗಳಿಂದಲೂ ಈ ಶಾಲೆಯಲ್ಲಿ ಮುಟ್ಟಿನ ರಜೆ ನೀಡುವ ಪರಿಪಾಠ ಬೆಳೆದುಕೊಂಡು ಬಂದಿದೆ. ಈ ವಿಚಾರ ಕೇರಳ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಮಹಿಳಾ ಉದ್ಯೋಗಿಗಳಿಗೂ ಈ ಸಮಯದಲ್ಲಿ ರಜೆ ನೀಡಬೇಕೆಂದು ಶಾಸಕರೊಬ್ಬರು ಒತ್ತಾಯಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಸರ್ಕಾರ ಇದರ ಬಗ್ಗೆ ಚಿಂತನೆ ನಡೆಸಿ ನಿಲುವನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದರು.  

Follow Us:
Download App:
  • android
  • ios