Asianet Suvarna News Asianet Suvarna News

13 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಶಿಕ್ಷಕಿಗೆ 10 ವರ್ಷ ಜೈಲು

6 ವರ್ಷದ ಬಾಲಕಿಯ ತಾಯಿಯಾಗಿರುವ ಶಿಕ್ಷಕಿ ಅಲೆಗ್ಯಾಂಡ್ರಿಯಾ ವೆರಾ ಇಂಥದ್ದೊಂದು ಹೀನ ಕೃತ್ಯ ಎಸಗಿದ್ದಾಳೆ. ತಮ್ಮ ಸಂಬಂಧದ ಬಗ್ಗೆ ಬಾಲಕನ ಪೋಷಕರಿಗೂ ತಿಳಿದಿತ್ತು. ಅವರೂ ಸಹ ಸಮ್ಮತಿ ಸೂಚಿಸಿದ್ದರು ಎಂದು ವೆರಾ ಕೋರ್ಟ್`ನಲ್ಲಿ ವಾದಿಸಿದ್ದಳು. ಆದರೆ, ವೆರಾ ವಾದವನ್ನ ಒಪ್ಪದ ಕೋರ್ಟ್ ಶಿಶುಕಾಮದ ಕಾಯ್ದೆಯಡಿ 10 ವರ್ಷ ಶಿಕ್ಷೆ ವಿಧಿಸಿದೆ.

texas teacher gets 10 years jail for having sex with boy

ಟೆಕ್ಸಾಸ್(ಜ.16): 13 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ಲೈಂಗಿಕ ಕ್ರಿಯೆ ನಡೆಸಿ ಗರ್ಭವತಿಯಾಗಿದ್ದಾಗಿ ಒಪ್ಪಿಕೊಂಡ ಶಿಕ್ಷಕಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಘಟನೆ ಟೆಕ್ಸಾಸ್`ನಲ್ಲಿ ನಡೆದಿದೆ.

6 ವರ್ಷದ ಬಾಲಕಿಯ ತಾಯಿಯಾಗಿರುವ ಶಿಕ್ಷಕಿ ಅಲೆಗ್ಯಾಂಡ್ರಿಯಾ ವೆರಾ ಇಂಥದ್ದೊಂದು ಹೀನ ಕೃತ್ಯ ಎಸಗಿದ್ದಾಳೆ. ತಮ್ಮ ಸಂಬಂಧದ ಬಗ್ಗೆ ಬಾಲಕನ ಪೋಷಕರಿಗೂ ತಿಳಿದಿತ್ತು. ಅವರೂ ಸಹ ಸಮ್ಮತಿ ಸೂಚಿಸಿದ್ದರು ಎಂದು ವೆರಾ ಕೋರ್ಟ್`ನಲ್ಲಿ ವಾದಿಸಿದ್ದಳು. ಆದರೆ, ವೆರಾ ವಾದವನ್ನ ಒಪ್ಪದ ಕೋರ್ಟ್ ಶಿಶುಕಾಮದ ಕಾಯ್ದೆಯಡಿ 10 ವರ್ಷ ಶಿಕ್ಷೆ ವಿಧಿಸಿದೆ.

ಈಕೆ ಸ್ವಭಾವತಃ ಶೀಶುಕಾಮಿ ಎಂದೆನಿಸುತ್ತಿಲ್ಲ. ಹೀಗಾಗಿ, ಸಮಾಜದ ಇತರೆ ವಿದ್ಯಾರ್ಥಿಗಳಿಗೆ ಈಕೆಯಿಂದ ಯಾವುದೇ ತೊಂದರೆ ಇಲ್ಲ ಎಂದೆನಿಸುತ್ತಿದೆ. ಆದರೆ, ಈ ಶಿಕ್ಷೆ ಸಮಾಜಕ್ಕೊಂದು ಸಂದೇಶವಾಗಿರುತ್ತೆ. ಮತ್ಯಾರೂ ಶಿಶುಕಾಮಕ್ಕೆ ಮುಂದಾಗದಿರಲೆಂಬುದೇ ಈ ಶಿಕ್ಷೆಯ ಉದ್ಧೇಶ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.