(ವಿಡಿಯೋ)ತನ್ನ ಕೆನ್ನೆಗೆ ಬಾರಿಸಿದ ಶಿಕ್ಷಕಿಗೆ ಅದೇ ಧಾಟಿಯಲ್ಲಿ ಉತ್ತರಿಸಿದ ವಿದ್ಯಾರ್ಥಿನಿ!
news
By Suvarna Web Desk | 07:38 AM Tuesday, 18 April 2017

ಶಿಕ್ಷಕ ವೃತ್ತಿ ಒಂದು ಗೌರವಯುತ ಹಾಘೂ ಚಾಲೆಂಜಿಂಗ್ ವೃತ್ತಿ. ಆದರೆ ಕೆಲವೊಮ್ಮೆ ಏಕ ಕಾಲದಲ್ಲಿ ಹಲವಾಋಉ ವಿದ್ಯಾರ್ಥಿಯರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹಳ ಕಠಿಣ ಕೆಲಸವಾಗುತ್ತದೆ, ಅದರಲ್ಲೂ ಕಿರೋರಾವಸ್ಥೆಯ ವಿದ್ಯಾರ್ಥಿಗಳನ್ನು ಕಂಟ್ರೋಲ್ ಮಾಡುವುದು ಬಲು ಕಷ್ಟ. ಆದರೆ ಚೀನಾದ ತರಗತಿ ಕೊಠಡಿಯಲ್ಲಿ ನಡೆದ ಘಟನೆಯೊಂದು ಸದ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ನೋಡುಗರ ಮನದಲ್ಲಿ ಈ ರೀತಿಯೂ ಆಗುತ್ತದಾ ಎಂದು ಯೋಚಿಸುವಂತೆ ಮಾಡಿದೆ.

ಚೀನಾದ ಸಾಮಾಜಿ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವಿದ್ಯಾರ್ಥಿನಿಯ ಕೆಟ್ಟ ವರ್ತನೆಯಿಂದ ಬೇಸತ್ತ ಶಿಕ್ಷಕಿಯೊಬ್ಬಳು ಆಕೆಗೆ ಬೈಯ್ಯುತ್ತಾಳೆ. ಆದರೆ ಶಿಕ್ಷಕಿ ಎಂಬ ಗೌರವನ್ನೂ ತೋರದ ವಿದ್ಯಾರ್ಥಿನಿ ತಾನೂ ಜಗಳ ಮಾಡುತ್ತಾಳೆ. ಹೀಗೆ ಮಾತಿಗೆ ಮಾತು ಬೆಳೆದು ಶಿಕ್ಷಕಿ ಆಕೆಗೆ ಹೊಡೆದಿರುವುದು ಕಂಡು ಬರುತ್ತದೆ. ಆದರೆ ಈ ವಿಚಾರ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಶಿಕ್ಷಕಿಯಿಂದ ಏಟು ತಿಂದ ವಿದ್ಯಾರ್ಥಿನಿ ನಾನೂ ಏನೂ ಕಡಿಮೆ ಇಲ್ಲ ಎನ್ನುವಂತೆ ಮರು ಕ್ಷಣವೇ ಶಿಕ್ಷಕಿಯ ಕಪಾಳಕ್ಕೆ ಬಾರಿಸುತ್ತಾಳೆ. ವಿದ್ಯಾರ್ಥಿನಿಯ ದುರ್ವರ್ತನೆ ಕಂಡ ಶಿಕ್ಷಕಿಗೆ ಕೋಪ ನೆತ್ತಿಗೇರಿ ನಾನ್ಯಾಕೆ ಬಿಡಲಿ ಎನ್ನುವ ಧಾಟಿಯಲ್ಲಿ ಮತ್ತೆ ಹೊಡೆಯುತ್ತಾಳೆ. ಹೀಗೆ ಇವರಿಬ್ಬರ ಜಗಳ ಅತಿರೇಕಕ್ಕೆ ತಿರುಗಿ ಕೊನೆಗೆ ಇಡೀ ತರಗತಿಯ ವಿದ್ಯಾರ್ಥಿಗಳು ಇವರಿಬ್ಬರನ್ನು ಬೇರ್ಪಡಿಸಲು ಹರ ಸಾಹಸಪಟ್ಟಿರುವುದು ಸ್ಪಷ್ಟವಾಗಿ ಕಾಣುತ್ತದೆ.  

Show Full Article