Asianet Suvarna News Asianet Suvarna News

ಸುವರ್ಣ ಬಿಗ್ ಇಂಪ್ಯಾಕ್ಟ್ : ಮಠದ ಆಸ್ತಿ ಮಾರಿದ ಕಳ್ಳ ಸ್ವಾಮಿಗೆ ಕೈ ತಪ್ಪಿತು ಪೀಠಾಧ್ಯಕ್ಷ ಸ್ಥಾನ !

ಹುಣಸಮಾರನಹಳ್ಳಿ ಮಠಕ್ಕೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ  ಭೂಮಿಯನ್ನ ,ತಿಂದು ತೇಗಿದ ಕಳ್ಳ ಸ್ವಾಮಿ,ಉಳಿದ ಮಠದ ಆಸ್ತಿಯನ್ನ ನುಂಗೋಕೆ ಹೊಂಚು ಹಾಕಿದ್ದ ಈಗ ಕಳ್ಳಸ್ವಾಮಿಯ ಆಸ್ತಿ ಕಬಳಿಸುವ ಕನಸಿಗೆ ತನ್ನೀರು ಎರಚಿದಂತಾಗಿದೆ. ಇದು ಸುವರ್ಣನ್ಯೂಸ್​​ನ ಬಿಗ್​ ಇಂಪ್ಯಾಕ್ಟ್!​

Suvarna News Big Impact

ಬೆಂಗಳೂರು (ಜೂ.19): ಹುಣಸಮಾರನಹಳ್ಳಿ ಮಠಕ್ಕೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ  ಭೂಮಿಯನ್ನ ,ತಿಂದು ತೇಗಿದ ಕಳ್ಳ ಸ್ವಾಮಿ,ಉಳಿದ ಮಠದ ಆಸ್ತಿಯನ್ನ ನುಂಗೋಕೆ ಹೊಂಚು ಹಾಕಿದ್ದ ಈಗ ಕಳ್ಳಸ್ವಾಮಿಯ ಆಸ್ತಿ ಕಬಳಿಸುವ ಕನಸಿಗೆ ತನ್ನೀರು ಎರಚಿದಂತಾಗಿದೆ. ಇದು ಸುವರ್ಣನ್ಯೂಸ್​​ನ ಬಿಗ್​ ಇಂಪ್ಯಾಕ್ಟ್!​

ಬೆಂಗಳೂರಿನ ಹುಣಸಮಾರನಹಳ್ಳಿ ಸಂಸ್ಥಾನ ಮಠದಲ್ಲಿ ನಡೆದಿರುವ ಆಸ್ತಿ ಕಬಳಿಕೆ ಸುದ್ದಿಯನ್ನ ಸುವರ್ಣನ್ಯೂಸ್​ ಪ್ರಸಾರ ಮಾಡುತ್ತಿದ್ದಂತೆ, ಮಠದ ಭಕ್ತ ವೃಂದ್ಧದಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು. ಮಠದ ಪೀಠಾಧ್ಯಕ್ಷರೆ ಮಠದ ಆಸ್ತಿಯನ್ನ ಮಾರಿದರಾ ಎಂಬ ಚರ್ಚೆ ಭಕ್ತರಲ್ಲಿ ಆರಂಭವಾಗಿದೆ..

ಪವರ್ತರಾಜ ಶಿವಾಚಾರ್ಯ ಸ್ವಾಮಿಗಳು, ತಮ್ಮ ಪುಂಡ ಮಗ ದಯಾನಂದ ಅಲಿಯಾಸ ನಂಜೇಶ್ವರ ಸ್ವಾಮಿಯ ಜೊತೆ ಸೇರಿ ಮಠದ 60 ಎಕರೆ ಭೂಮಿಯನ್ನ ಕೋಟಿ ಕೋಟಿ ರೂಪಾಯಿಗೆ ಮಾರಾಟ ಮಾಡಿದರು. ಮಠದ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಹಣ ನುಂಗಿದ ಇವರು , ಉಳಿದ 70 ಎಕರೆ ಭೂಮಿಯನ್ನ ಮಾರಾಟ ಮಾಡಲು ಸಿದ್ಧರಾಗಿದ್ದರು. ಆದರೆ ಈಗ ಅವರ ಕನಸು ಭಗ್ನವಾಗಿದೆ. ಸುವರ್ಣನ್ಯೂಸ್ ​ ಈ ಸ್ವಾಮಿಗಳ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ, ಭಾನುವಾರ ನಡೆಯಬೇಕಿದ್ದ ಪೀಠಾಧ್ಯಕ್ಷರ ಪಟ್ಟಾಭಿಷೇಕ ಕಾರ್ಯಕ್ರಮ ರದ್ದಾಗಿದೆ.  ಪಟ್ಟಾಭೀಷೇಕಕ್ಕೆ ಬರಬೇಕಾದ ಶ್ರೀಗಳೆಲ್ಲ ಇವರ ಅಸಲಿಯತ್ತು ತಿಳಿದು ಕಾರ್ಯಕ್ರಮಕ್ಕೆ ಬಂದಿಲ್ಲ.

ಪರ್ವತರಾಜ ಶಿವಾಚಾರ್ಯರ ಗುರುವಂದನಾ ಕಾರ್ಯಕ್ರಮದಲ್ಲೇ , ಅವರ ಮಗ ಕಳ್ಳ ದಯಾನಂದನ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ದಯಾನಂದನ ಅಸಲಿಯತ್ತನ ಸುವರ್ಣನ್ಯೂಸ್​​ ಬಯಲು ಮಾಡುತ್ತಿದ್ದಂತೆ ಪಟ್ಟಾಭಿಷೇಕ ಕಾರ್ಯಕ್ರಮ ರದ್ದಾಗಿದೆ.. ಕೇವಲ ತನ್ನ ತಂದೆ ಪರ್ವತರಾಜರ ಗುರುವಂದನಾ ಕಾರ್ಯಕ್ರಮ ಮಾತ್ರ ನಡೆದ್ದಿದೆ.

ಇನ್ನು ಮಠದ ಆಸ್ತಿ ಕಬಳಿಕೆ ವಿಚಾರ ಇಲ್ಲಿಗೆ ಬಿಟ್ಟರೆ ಉಳಿದ ಭೂಮಿಯನ್ನು ಇವರು ಮಾರುವದರಲ್ಲಿ ಯಾವುದೆ ಅನುಮಾನ ಇಲ್ಲ. ಈಗಲೇ ವೀರಶೈವ ಸಮಾಜ ಜನ ಇದರ ಬಗ್ಗೆ ಪ್ರಶ್ನಿಸಿ ಸೂಕ್ತ ಮಠಾಧ್ಯಕ್ಷರನ್ನ ಆಯ್ಕೆ ಮಾಡಬೇಕಿದೆ.. ಇನ್ನೂ ಈ ದಯಾನಂದ ಭಾಗ-2 ಶಿಘ್ರದಲ್ಲೇ ಸುವರ್ಣನ್ಯೂಸ್​ ಪ್ರಸಾರ ಮಾಡಲಿದೆ.

 

 

 

 

 

 

Follow Us:
Download App:
  • android
  • ios