ಸುವರ್ಣ ಇಂಪ್ಯಾಕ್ಟ್: ಶಿವನ ವಿಗ್ರಹ ತೆರವುಗೊಳಿಸಿದ ತೆಲುಗು ಚಿತ್ರ ತಂಡ
news
By Suvarna Web Desk | 12:38 PM Friday, 17 February 2017

ಚನ್ನಕೇಶವನ ಸನ್ನಿಧಿಯಲ್ಲಿ ಅಲ್ಲು ಅರ್ಜುನ್ ನಟನೆಯ ತೆಲುಗಿನ ಡಿಜೆ ಸಿನಿಮಾ ಶೂಟಿಂಗ್ ಭರದಿಂದ ನಡಿತಿದೆ. ಆದರೆ ಚಿತ್ರ ತಂಡ ದೇಗುಲದ ಚಿತ್ರಣವನ್ನೇ ಬದಲಿಸಿದ್ದು, ಭಕ್ತರ ಭಾವನೆಗಳನ್ನೂ ಪರಿಗಣಿಸದೇ ವೈಷ್ಣವ ದೇಗುಲದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಅಸಮಾಧಾನದ ಕಿಚ್ಚು ಹಚ್ಚಿತ್ತು.

ಹಾಸನ (ಫೆ.17):  ಜಗತ್ಪ್ರಸಿದ್ಧ ವೈಷ್ಣವ ದೇಗುಲವಾಗಿರುವ ಚೆನ್ನಕೇಶವ ದೇವಾಲಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಚಿತ್ರೀಕರಣ ನಡೆಸುತ್ತಿದ್ದ ಬಗ್ಗೆ ಸುವರ್ಣ ನ್ಯೂಸ್ ಮಾಡಿರುವ ವರದಿಯಿಂದ ಎಚ್ಚೆತ್ತುಕೊಂಡ ತೆಲುಗು ಚಿತ್ರತಂಡ ಶಿವನ ವಿಗ್ರಹವನ್ನು ತೆಗೆದಿದೆ.

ಇದನ್ನೂ ಓದಿ: ವೈಷ್ಣವ ದೇಗುಲದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ತೆಲುಗು ಸಿನೆಮಾ ಶೂಟಿಂಗ್!

ಚನ್ನಕೇಶವನ ಸನ್ನಿಧಿಯಲ್ಲಿ ಅಲ್ಲು ಅರ್ಜುನ್ ನಟನೆಯ ತೆಲುಗಿನ ಡಿಜೆ ಸಿನಿಮಾ ಶೂಟಿಂಗ್ ಭರದಿಂದ ನಡಿತಿದೆ. ಆದರೆ ಚಿತ್ರ ತಂಡ ದೇಗುಲದ ಚಿತ್ರಣವನ್ನೇ ಬದಲಿಸಿದ್ದು, ಭಕ್ತರ ಭಾವನೆಗಳನ್ನೂ ಪರಿಗಣಿಸದೇ ವೈಷ್ಣವ ದೇಗುಲದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಅಸಮಾಧಾನದ ಕಿಚ್ಚು ಹಚ್ಚಿತ್ತು.

ಅಷ್ಟು ಮಾತ್ರವಲ್ಲದೇ ಚಿತ್ರೀಕರಣ ವೇಳೆ ದೇಗುಲದ ದ್ವಾರ ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಈ ಬಗ್ಗೆ ಸುವರ್ಣ ನ್ಯೂಸ್ ಬೆಳಗ್ಗೆ ವರದಿ ಮಾಡಿತ್ತು.

Show Full Article