ಒಬಾಮಾಗೆ ಜಾಬ್ ಆಫರ್ ಮಾಡಿದ ಪ್ರಸಿದ್ಧ ಮ್ಯೂಸಿಕ್ ಕಂಪನಿ
news
By Suvarna Web Desk | 11:42 PM Tuesday, 10 January 2017

ಹೀಗಿರುವಾಗಲೇ, ಅಚ್ಚರಿಯೆನಿಸುವಂಥ ಹೊಸ ವಿಚಾರವೊಂದು ತಿಳಿದುಬಂದಿದೆ. ಅದೇನೆಂದರೆ, ಒಬಾಮ ಅವರಿಗೆ ಕಂಪನಿಯೊಂದು ಕೆಲಸದ ಆಫರ್ ನೀಡಿದೆ.

ವಾಷಿಂಗ್ಟನ್(ಜ.10): ಕಳೆದ ಎಂಟು ವರ್ಷಗಳಿಂದ ಅಮೆರಿಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಬರಾಕ್ ಒಬಾಮ ಅವರು ಇನ್ನೇನು ಕೆಲವೇ ವಾರಗಳಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ನಂತರ ಅವರೇನು ಮಾಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿರಬಹುದು.

ಹೀಗಿರುವಾಗಲೇ, ಅಚ್ಚರಿಯೆನಿಸುವಂಥ ಹೊಸ ವಿಚಾರವೊಂದು ತಿಳಿದುಬಂದಿದೆ. ಅದೇನೆಂದರೆ, ಒಬಾಮ ಅವರಿಗೆ ಕಂಪನಿಯೊಂದು ಕೆಲಸದ ಆಫರ್ ನೀಡಿದೆ. ವಿಶ್ವದ ಪ್ರಮುಖ ಮ್ಯೂಸಿಕ್ ಕಂಪನಿಯಾಗಿರುವ ‘ಸ್ಪೋಟಿೈ’ ಇದೀಗ ‘ಪ್ರೆಸಿಡೆಂಟ್ ಆಫ್  ಪ್ಲೇಲಿಸ್ಟ್’ ಹಾಗೂ ‘ಕನಿಷ್ಠ  8 ವರ್ಷದ ಅನುಭವವುಳ್ಳ, ದೇಶದ ಬಗ್ಗೆ ಅಪಾರ ಒಲವಿರುವವರು ಬೇಕಾಗಿದ್ದಾರೆ,’’ ಎಂಬ ಜಾಹೀರಾತನ್ನು ಪ್ರಕಟಿಸಿದೆ. ಅಷ್ಟೇ ಅಲ್ಲ, ನಮ್ಮಲ್ಲಿ ಕೆಲಸಕ್ಕೆ ಸೇರುವವರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಕಲಾವಿದರು, ಸಂಗೀತ ಪ್ರೇಮಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು,’’ ಎಂದೂ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಈ ಮೂಲಕ ಕಂಪನಿಯು ಪರೋಕ್ಷವಾಗಿ ಒಬಾಮ ಅವರಿಗೆ ಆಫರ್ ನೀಡಿದೆ.

Show Full Article