Asianet Suvarna News Asianet Suvarna News

ಒಂದು ದೇಶ, ಒಂದು ಗ್ರಿಡ್'ಗೆ ಶೀಘ್ರ ಮಾರ್ಗ ನಿರ್ಮಾಣ

ಕೇಂದ್ರ ಪವರ್ ಗ್ರಿಡ್ ಕಾರ್ಪೋರೇಷನ್ (ಪಿಜಿಸಿಎಲ್) ವಿದ್ಯುತ್ ಪೂರೈಕೆಗೆ ಮಾರ್ಗ ರೂಪಿಸಲು ರಾಜ್ಯ ಸಹಕಾರ ನೀಡುತ್ತಿಲ್ಲ ಎಂದ ಆಪಾದನೆ ಇತ್ತು. ಈ ಹಿನ್ನೆಲೆಯಲ್ಲಿ ಪಿಜಿಸಿಎಲ್ನ ಅಧಿಕಾರಿಗಳ ತಂಡದ ಜತೆ ಚರ್ಚಿಸಿದ್ದೇನೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಪಿಜಿಸಿಎಲ್ ರಾಜ್ಯದಲ್ಲಿ ನಿಗದಿ ಮಾಡಿರುವ ದರಕಡಿಮೆ ಎಂದು ರೈತ ಹೇಳಿದ್ದಾರೆ

Soon Route For one nation one grid

ಬೆಂಗಳೂರು(ಜು.20): ಕೇಂದ್ರ ಗ್ರಿಡ್ನಿಂದ ವಿದ್ಯುತ್ ಪಡೆಯಲು ರಾಜ್ಯದಲ್ಲಿ 200 ಕಿ.ಮೀ. ಉದ್ದದ ವಿದ್ಯುತ್ ಮಾರ್ಗ ನಿರ್ಮಾಣ ಬಾಕಿ. ಇದಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಮತ್ತು ದರ ನಿಗದಿ ಸಮಸ್ಯೆ ಇನ್ನೆರಡು ತಿಂಗಳಲ್ಲಿ ಪರಿಹಾರವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿದ್ಯುತ್ ಮಾರ್ಗ ಸ್ಥಾಪಿಸಲು ಜಮೀನು ನೀಡುವ ರೈತರಿಗೆ ಕೇಂದ್ರ ನಿಗದಿ ಮಾಡಿರುವ ದರ ಕಡಿಮೆ ಎಂದು ಹೋರಾಟಗಳು ನಡೆಯುತ್ತಿವೆ. ಹೆಚ್ಚಿನ ದರ ದೊರಕಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಈ ಸಮಸ್ಯೆ ಪರಿಹಾರವಾದರೆ ಮಾರ್ಗ ನಿರ್ಮಾಣ ಕಾರ್ಯ ಸುಲಭವಾಗಲಿದೆ. ಆನಂತರ ಕೇಂದ್ರದಿಂದಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಏಕ ಕಾಲಕ್ಕೆ ಒಂದೇ ಗ್ರೀಡ್ನಿಂದ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ. ಆಗ ಕೇಂದ್ರ ಸರ್ಕಾರ ಹೇಳಿದಂತೆ ‘ಒಂದು ದೇಶ. ಒಂದು ಗ್ರೀಡ್’ ಸ್ಥಾಪನೆಯಾಗಲಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಪವರ್ ಗ್ರಿಡ್ ಕಾರ್ಪೋರೇಷನ್ (ಪಿಜಿಸಿಎಲ್) ವಿದ್ಯುತ್ ಪೂರೈಕೆಗೆ ಮಾರ್ಗ ರೂಪಿಸಲು ರಾಜ್ಯ ಸಹಕಾರ ನೀಡುತ್ತಿಲ್ಲ ಎಂದ ಆಪಾದನೆ ಇತ್ತು. ಈ ಹಿನ್ನೆಲೆಯಲ್ಲಿ ಪಿಜಿಸಿಎಲ್ನ ಅಧಿಕಾರಿಗಳ ತಂಡದ ಜತೆ ಚರ್ಚಿಸಿದ್ದೇನೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಪಿಜಿಸಿಎಲ್ ರಾಜ್ಯದಲ್ಲಿ ನಿಗದಿ ಮಾಡಿರುವ ದರಕಡಿಮೆ ಎಂದು ರೈತ ಹೇಳಿದ್ದಾರೆ. ಇದನ್ನು ಪಿಜಿಸಿಎಲ್ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಸರ್ಕಾರ ರೈತರ ಪರವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಅದರಲ್ಲೂ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮತ್ತು ಪೋಲೀಸ್ ಬಳಸದಂತೆ ಸಮಸ್ಯೆ ಪರಿಹಾರ ಮಾಡಲು ಮುಂದಾಗುತ್ತದೆ ಎಂದುಸಚಿವರು ವಿವರಿಸಿದರು.
ರಾಜ್ಯದಲ್ಲಿ ಪ್ರಮುಖವಾಗಿ 5 ವಿದ್ಯುತ್ ಮಾರ್ಗಗಳ ನಿರ್ಮಾಣ ಕಾರ್ಯ ಬಾಕಿಯಿದ್ದು, ಅವುಗಳ ಪೈಕಿ ರಾಮನಗರ ಜಿಲ್ಲೆಯಲ್ಲಿ 73ಕಿ.ಮೀ. ತುಮಕೂರು-31, ಬೆಂಗಳೂರು ನಗರ-36, ಚಿಕ್ಕಬಳ್ಳಾಪುರ- 4ಕಿ.ಮೀ. ಬೆಂಗಳೂರು ಗ್ರಾಮಾಂತರ 55 ಕಿ.ಮೀ.ಗಳಷ್ಟು ಮಾರ್ಗಗಳನ್ನು ಸ್ಥಾಪಿಸಬೇಕಿದೆ. ಆದರೆಇದಕ್ಕೆ ಪಿಜಿಸಿಎಲ್ ನೀಡುವ ದರದಲ್ಲಿ (ಸರ್ಕಾರಿ ಮಾರ್ಗಸೂಚಿ ದರದ ಶೇ.15ರಷ್ಟು) ಜಮೀನು ನೀಡಲು ರೈತರು ಸಿದ್ಧರಿಲ್ಲ.
ಆದ್ದರಿಂದ ರೈತರಿಗೆ ಪಿಜಿಸಿಎಲ್ ನೀಡಬೇಕಾದ ದರ ನಿಗದಿ ಮಾಡುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದ್ದು, ಇದಕ್ಕೆ ಪಿಜಿಸಿಎಲ್ ಕೂಡ ಒಪ್ಪಿಕೊಂಡಿದೆ. ಹಾಗೆಯೇಜಿಲ್ಲಾಧಿಕಾರಿಗಳು ಹೆಚ್ಚಿನ ದರ ನಿಗದಿ ಮಾಡಿದರೂ ನೀಡುವುದಾಗಿ ಪಿಜಿಸಿಎಲ್ ಹೇಳಿದೆ. ಹೀಗಾಗಿ ಇನ್ನೆರಡು ತಿಂಗಳಲ್ಲಿ ರೈತರ ಜಮೀನಗಳಿಗೆ ದರ ನಿಗದಿಯಾಗಲಿದೆ. ಈ ಸಮಸ್ಯೆ ಕೂಡ ಇತ್ಯರ್ಥವಾಗಲಿದೆ ಎಂದು ಶಿವಕುಮಾರ್ ತಿಳಿಸಿದರು.

 

Follow Us:
Download App:
  • android
  • ios