Asianet Suvarna News Asianet Suvarna News

ಬ್ರಹ್ಮಾವರ್ ನಂತರ ಮತ್ತೊಂದು ಆಘಾತ: ನೂರಾರು ಹಾಡು ಹಾಡಿದ ಎಲ್.ಎನ್.ಶಾಸ್ತ್ರಿ'ಗೆ ಕ್ಯಾನ್ಸ್'ರ್, ಆರ್ಥಿಕವಾಗಿ ಕಂಗಾಲು

ಶಿವರಾಜ್ ಕುಮಾರ್ ಅಭಿನಯದ "ಜನುಮದ ಜೋಡಿ" ಚಿತ್ರದ "ಕೋಲು ಮಂಡೆ ಜಂಗಮ ದೇವಾ, ಮಲ್ಲ ಚಿತ್ರದ 'ಕರುನಾಡೆ, ಶ್ 'ಅವನಲ್ಲಿ, ಇವಳಲ್ಲಿ, 'ಎ' ಚಿತ್ರದ ಚಾಂದಿನಿ, 'ಇಳಕೊಳ್ಳೋಕ್ಕೆ ಒಂದು ಊರು' ಹಾಗೂ ಇತ್ತೀಚಿನ ಅಧ್ಯಕ್ಷ ಚಿತ್ರದ ' ಅಧ್ಯಕ್ಷ ಅಧ್ಯಕ್ಷ' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು.

Singer LN Shastri Suffers From Cancer

ಬೆಂಗಳೂರು(ಆ.18): ಕೆಲವೇ ದಿನಗಳ ಹಿಂದೆ ಹಿರಿಯ ನಟ ಬ್ರಹ್ಮಾವರ್ ತೊಂದರೆಯಲ್ಲಿರುವ ವಿಷಯ ಕೇಳಿದ ಬೆನ್ನಲ್ಲೇ ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಕನ್ನಡ ಸಿನಿಮಾಗಳಲ್ಲಿ ನೂರಾರು ಇಂಪಾದ ಹಾಡುಗಳನ್ನು ಗುನುಗಿದ ಖ್ಯಾತ ಹಿನ್ನಲೆ ಗಾಯಕ ಎಲ್​.ಎನ್​. ಶಾಸ್ತ್ರಿ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕರಳು ಕ್ಯಾನ್ಸ್'ರ್'ಗೆ ತುತ್ತಾಗಿರುವ ಶಾಸ್ತ್ರಿ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ಶಾಸ್ತ್ರಿಗೆ ಗಾಯಕಿ ಸುಮಾ ಶಾಸ್ತ್ರಿ ಹಾರೈಕೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಕಂಗಾಲಾಗಿರುವ ಎಲ್. ಎನ್. ಶಾಸ್ತ್ರಿ ಸಹಾಯ ಹಸ್ತಕ್ಕಾಗಿ ಕಾದಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ "ಜನುಮದ ಜೋಡಿ" ಚಿತ್ರದ "ಕೋಲು ಮಂಡೆ ಜಂಗಮ ದೇವಾ, ಮಲ್ಲ ಚಿತ್ರದ 'ಕರುನಾಡೆ, ಶ್ 'ಅವನಲ್ಲಿ, ಇವಳಲ್ಲಿ, 'ಎ' ಚಿತ್ರದ ಚಾಂದಿನಿ, 'ಇಳಕೊಳ್ಳೋಕ್ಕೆ ಒಂದು ಊರು' ಹಾಗೂ ಇತ್ತೀಚಿನ ಅಧ್ಯಕ್ಷ ಚಿತ್ರದ ' ಅಧ್ಯಕ್ಷ ಅಧ್ಯಕ್ಷ' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ಜನುಮದ ಜೋಡಿ ಚಿತ್ರದ "ಕೋಲು ಮಂಡೆ ಜಂಗಮ ದೇವಾ' ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕನಾಗಿ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ. ಹಾಡುಗಳ ಜೊತೆ ಹಲವು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

ಸಂಗೀತ ನಿರ್ದೇಶಕರಾದ ವಿ. ಮನೋಹರ್ ಗಾಯಕ ವಿ. ಮನೋಹರ್ ಸೇರಿದಂತೆ ಹಲವು ಗಾಯಕರು ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿ ಶಾಸ್ತ್ರಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Follow Us:
Download App:
  • android
  • ios