Asianet Suvarna News Asianet Suvarna News

ಡಾಕ್ಟ್ರಾ ಸಲಹೆ: ಮದ್ವೆಯಾಗಿ ಒಂದು ವಾರವಾಯಿತು : ಸಮಸ್ಯೆ ನನ್ನದೆ ಅಥವಾ ಪತಿಯದೆ

ಡಾಕ್ಟ್ರಾ ಸಲಹೆ: ಮದ್ವೆಯಾಗಿ ಒಂದು ವಾರವಾಯಿತು : ಸಮಸ್ಯೆ ನನ್ನದೆ ಅಥವಾ ಪತಿಯದೆ

Sex Tips For Couples

1) ನನಗೆ 26 ವರುಷ. ವಿವಾಹಿತೆ. ಮದ್ವೆಯಾಗಿ ಒಂದು ವಾರವಾಯಿತು. ಪತಿಯೊಂದಿಗೆ ಹಲವು ಸಲ ಸಂಭೋಗಿಸಲೆತ್ನಿಸಿದಾಗಲೂ ಜನನಾಂಗ ಪ್ರವೇಶ ಸಾಧ್ಯವಾಗುತ್ತಿಲ್ಲ. ವಿಪರೀತ ನೋವಾಗುತ್ತದೆ. ಯೋನಿ ಕಿರಿದಾದರೆ ಹೀಗಾಗುವುದೇ? ಅಥವಾ ನನ್ನ ಪತಿಯಲ್ಲೇ ದೌರ್ಬಲ್ಯ ಇದೆಯೇ? ಇದಕ್ಕಿರುವ ಸೂಕ್ತ ಚಿಕಿತ್ಸೆ ಅಥವಾ ಪರಿಹಾರಗಳೇನು?
ಹೆಸರುಬೇಡ, ಊರುಬೇಡ
ಉ) ಮೊದಮೊದಲು ಹೀಗೆ ಸ್ವಲ್ಪ ಕಷ್ಟವಾಗುವುದು ಸಹಜ. ನಾಚಿಕೆ, ಮುಜುಗರ, ಭಯ, ಪೂರ್ವಸಿದ್ಧತೆ ಇಲ್ಲದಿರುವುದು- ಇವುಗಳಿಂದ ಯೋನಿ ಸೆಟೆದು, ಸಂಕುಚಿತಗೊಂಡು ಹೀಗಾಗಿದೆಯಷ್ಟೇ. ಮೊದಲು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಿ. ಯೋನಿ ಪ್ರವೇಶ ಸುಲಭ ಆಗಬೇಕೆಂದರೆ, ಹೆಚ್ಚು ಹೊತ್ತು ಸಂಭೋಗಪೂರ್ವ ರತಿಯಾಟಗಳಲ್ಲಿ ತೊಡಗಬೇಕು. ಅನೇಕ ಪುರುಷರು ಹೆಚ್ಚು ಹೊತ್ತು ರಸಿಕತೆಯಿಂದ ಆಲಿಂಗನ, ಚುಂಬನಾದಿಗಳನ್ನು ನಡೆಸದೆ ಬೇಗನೆ ಸಂಭೋಗಕ್ಕೆ ಪ್ರಯತ್ನಿಸುವುದರಿಂದ ಸ್ತ್ರೀಯರು ಇನ್ನೂ ಸಿದ್ಧವಾಗಿರದೆ ಹೀಗಾಗುತ್ತದೆ. ರತಿಯಾಟಗಳಿಂದ ಮೈಮರೆತು ಯೋನಿ ಒದ್ದೆಯಾದಾಗ ಪ್ರವೇಶ ಸುಲಭ. ಅಲ್ಲದೆ ಈ ವೇಳೆ ನೋವಿರುವುದಿಲ್ಲ. ಅಷ್ಟುಒದ್ದೆಯಾಗುತ್ತಿಲ್ಲವೆಂದರೆ ‘ಕೆ ವೈ ಜೆಲ್ಲಿ' ಎಂಬ ದ್ರಾವಣ ಸವರಿಕೊಳ್ಳಬಹುದು. ಕನ್ಯಾಪೊರೆ ಅಥವಾ ಹೈಮೆನ್‌ ಇನ್ನೂ ಹರಿದಿಲ್ಲದಿದ್ದರೆ, ಕೆಲವೊಮ್ಮೆ ಅದು ಹರಿಯಲು ಕಷ್ಟವಾಗಿ ಹೀಗಾಗಬಹುದು. ಮೇಲೆ ತಿಳಿಸಿದ ಪರಿಹಾರದಿಂದ ಸಮಸ್ಯೆ ಬಗೆಹರಿಯದಿದ್ದರೆ, ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ. ಅವರು ಯೋನಿಯನ್ನು ಪರೀಕ್ಷಿಸಿ, ಕನ್ಯಾಪೊರೆ ಇನ್ನೂ ಹರಿದಿಲ್ಲವಾದರೆ, ಶಸ್ತ್ರಕ್ರಿಯೆಯಿಂದ ಹರಿಯುತ್ತಾರೆ. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

ಡಾ. ಬಿ.ಆರ್. ಸುಹಾಸ್, ಲೈಂಗಿಕ ತಜ್ಞ

(ಕನ್ನಡ ಪ್ರಭ)

Follow Us:
Download App:
  • android
  • ios