Asianet Suvarna News Asianet Suvarna News

ವೈದ್ಯಕೀಯ ವರದಿ ಆಧರಿಸಿ 24 ವಾರಗಳ ಬಳಿಕವೂ ಗರ್ಭಪಾತಕ್ಕೆ ಸಮ್ಮತಿಸಿದ ಸುಪ್ರೀಂಕೋರ್ಟ್

ಕಾನೂನಿನಲ್ಲಿ ಗರ್ಭಪಾತದ ಮಿತಿ 20 ವಾರಗಳಿಗೆ ಮಾತ್ರ ಇರುವುದರಿಂದ ಯುವತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಯುವತಿಯನ್ನ ವೈಕೀಯ ಪರೀಕ್ಷೆಗೊಳಪಡಿಸುವಂತೆ ಕೆಇಇಎಂ ಆಸ್ಪತ್ರೆಗೆ ಸೂಚಿಸಿತ್ತು. ಇದೀಗ, ವೈದ್ಯಕೀಯ ವರದಿಯಲ್ಲಿ ಭ್ರೂಣದ ಬೆಳವಣಿಗೆಯಲ್ಲಿ ಲೋಪ ಕಂಡುಬಂದಿದ್ದು, ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದೆ.

SC allows termination of pregnancy in 24th week

ನವದೆಹಲಿ(ಜ.16): ವೈದ್ಯಕೀಯ ವರದಿಯಲ್ಲಿ ಮಗುವಿನ ತಲೆಬುರುಡೆ ಸೂಕ್ತವಾಗಿ ಬೆಳವಣಿಗೆಯಾಗದ್ದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ 24 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. 22 ವರ್ಷದ ಮಹಾರಾಷ್ಟ್ರದ ಗರ್ಭಿಣಿಗೆ ಮಗು ಸೂಕ್ತವಾಗಿ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.

ಆದರೆ, ಕಾನೂನಿನಲ್ಲಿ ಗರ್ಭಪಾತದ ಮಿತಿ 20 ವಾರಗಳಿಗೆ ಮಾತ್ರ ಇರುವುದರಿಂದ ಯುವತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಯುವತಿಯನ್ನ ವೈಕೀಯ ಪರೀಕ್ಷೆಗೊಳಪಡಿಸುವಂತೆ ಕೆಇಇಎಂ ಆಸ್ಪತ್ರೆಗೆ ಸೂಚಿಸಿತ್ತು. ಇದೀಗ, ವೈದ್ಯಕೀಯ ವರದಿಯಲ್ಲಿ ಭ್ರೂಣದ ಬೆಳವಣಿಗೆಯಲ್ಲಿ ಲೋಪ ಕಂಡುಬಂದಿದ್ದು, ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದೆ.