Asianet Suvarna News Asianet Suvarna News

ರೋಲ್ಸ್‌ ರಾಯ್ಸ್ ಕಾರಿಗೆ ಭಾರತದಲ್ಲಿ 1 ಕೋಟಿ ಡಿಸ್ಕೌಂಟ್‌!

ರೋಲ್ಸ್‌ ರಾಯ್ಸ್, ಆ್ಯಸ್ಟನ್‌ ಮಾರ್ಟಿನ್‌ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

Rs 1 cr Discount on Rolls Royce Cars

ನವದೆಹಲಿ: ಬ್ರೆಕ್ಸಿಟ್‌ನಿಂದಾಗಿ ರುಪಾಯಿ ಎದುರು ಪೌಂಡ್‌ ಮೌಲ್ಯ ಶೇ.20ರಷ್ಟುಕಡಿಮೆಯಾಗಿದೆ. ಹೀಗಾಗಿ ಭಾರತಕ್ಕೆ ಬ್ರಿಟನ್‌ನಿಂದ ರಫ್ತಾಗುವ ಐಷಾರಾಮಿ ಕಾರುಗಳ ಬೆಲೆ ಇಳಿಕೆಯಾಗಿದೆ.

ಹೀಗಾಗಿ  ರೋಲ್ಸ್‌ ರಾಯ್ಸ್, ಆ್ಯಸ್ಟನ್‌ ಮಾರ್ಟಿನ್‌ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.  ರೋಲ್ಸ್‌ ರಾಯ್ಸ್ ಕಂಪನಿ ತನ್ನ ಐಷಾರಾಮಿ ‘ಫ್ಯಾಂಟಮ್‌' ಕಾರಿಗೆ ಭಾರತದಲ್ಲಿ 1 ಕೋಟಿ ರು. ರಿಯಾಯಿತಿ ಘೋಷಿಸಿದೆ.

ಈ ಮುನ್ನ 9 ಕೋಟಿ ರು. ಇದ್ದ ಬೆಲೆ 8 ಕೋಟಿ ರು.ಗೆ ಇಳಿಸಲಾಗಿದೆ. ‘ಘೋಸ್ಟ್‌' ಬೆಲೆಯನ್ನು 5.25 ಕೋಟಿ ರು.ನಿಂದ 4.75 ಕೋಟಿ ರು.ಗೆ ಇಳಿಸಿದೆ.

Follow Us:
Download App:
  • android
  • ios