Asianet Suvarna News Asianet Suvarna News

ಉಚಿತ ಆಫರ್: ಜಿಯೋಗೆ 22.50 ಕೋಟಿ ನಷ್ಟ

2015ರ ಸಾಲಿನ ಸೆಪ್ಟೆಂಬರ್‌- ಮಾರ್ಚ್ ಅವಧಿಯಲ್ಲಿ ರಿಲಯನ್ಸ್‌ ಜಿಯೋ 7.46 ಕೋಟಿ ರುಪಾಯಿ ನಷ್ಟಅನುಭವಿಸಿತ್ತು ಎಂದು ಸ್ವತಃ ಕಂಪನಿಯೇ ಷೇರುಪೇಟೆಗೆ ತಿಳಿಸಿದೆ

Reliance Jio loss widens to Rs22 crore for second half of FY17

ನವದೆಹಲಿ(ಏ.25): ಕಳೆದ ಸೆಪ್ಟೆಂಬರ್‌'ನಿಂದ ಮಾರ್ಚ್'ವರೆಗೆ ಕೋಟ್ಯಂತರ ಜನರಿಗೆ ಉಚಿತ ಕರೆ, ಇಂಟರ್ನೆಟ್‌ ಸೌಲಭ್ಯ ಒದಗಿಸಿದ ರಿಲಯನ್ಸ್‌ ಜಿಯೋ ಕಂಪನಿ 22.50 ಕೋಟಿ ರುಪಾಯಿ ನಷ್ಟ ಅನುಭವಿಸಿದೆ.

ಈ ಅವಧಿಯಲ್ಲಿ ಜಿಯೋಗೆ ಯಾವುದೇ ಆದಾಯ ಬಂದಿಲ್ಲ. 2015ರ ಸಾಲಿನ ಸೆಪ್ಟೆಂಬರ್‌- ಮಾರ್ಚ್ ಅವಧಿಯಲ್ಲಿ ರಿಲಯನ್ಸ್‌ ಜಿಯೋ 7.46 ಕೋಟಿ ರುಪಾಯಿ ನಷ್ಟಅನುಭವಿಸಿತ್ತು ಎಂದು ಸ್ವತಃ ಕಂಪನಿಯೇ ಷೇರುಪೇಟೆಗೆ ತಿಳಿಸಿದೆ.

2016-17ನೇ ಸಾಲಿನಲ್ಲಿ ಕಂಪನಿ ಒಟ್ಟಾರೆ 31.37 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಕಂಪನಿಯ ಒಟ್ಟು 70,864 ಕೋಟಿ ರುಪಾಯಿ ಮೌಲ್ಯವನ್ನು ಹೊಂದಿದೆ.

Follow Us:
Download App:
  • android
  • ios