Asianet Suvarna News Asianet Suvarna News

ಜಿಯೋದಿಂದ ಮತ್ತೊಂದು ಉಚಿತ ಸೂಪರ್ ಬಂಪರ್ ಆಫರ್ ಘೋಷಣೆ: ಹೆಸರೇನು ಗೊತ್ತಾ ?

3 ತಿಂಗಳ ಪರ್ಯಾಯ 'ಸಮ್ಮರ್  ಸರ್ಪೈಸ್'  ಯೋಜನೆಯನ್ನು ರದ್ದುಗೊಳಿಸಿದ ನಂತರ   ಹೊಸ ಯೋಜನೆ ಘೋಷಿಸಿದೆ

Reliance Jio launches Dhan Dhana Dhan offers three months of complimentary data for Rs 309

ಮುಂಬೈ(ಏ.11): ದೇಶದ ಅಂತರ್ಜಾಲ ಪ್ರಪಂಚದಲ್ಲಿ 6 ತಿಂಗಳಿಗೂ ಹೆಚ್ಚು ಉಚಿತ ಇಂಟರ್'ನೆಟ್,ಕರೆ, ಎಸ್'ಎಂಎಸ್ ಸೇವೆಗಳನ್ನು ನೀಡಿ ಹೊಸ ಇತಿಹಾಸ ಬರೆದ ಟೆಲಿಕಾಂ ಸಂಸ್ಥೆ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಫ್ರೀ ಆಫರನ್ನು ನೀಡಿದೆ.

ಈ ಉಚಿತ ಯೋಜನೆಯ ಹೆಸರು 'ಧನ್ ದನಾ ಧನ್'. ಟ್ರಾಯ್ ಸೂಚನೆಯ ಮೇರೆಗೆ 3 ತಿಂಗಳ ಪರ್ಯಾಯ 'ಸಮ್ಮರ್  ಸರ್ಪೈಸ್'  ಯೋಜನೆಯನ್ನು ರದ್ದುಗೊಳಿಸಿದ ನಂತರ  ಮತ್ತೊಂದು 3 ತಿಂಗಳ ಉಚಿತ ಯೋಜನೆಯನ್ನು ಗ್ರಾಹಕರಿಗೆ ಸಮರ್ಪಿಸಿದೆ.

ಈ ಆಫರ್ ಪ್ರೈಮ್ ಹಾಗೂ ನಾನ್ ಪ್ರೈಮ್ ಗ್ರಾಹಕರಿಗೆ ಎರಡೂ ರೀತಿಯಲ್ಲಿ ಅನ್ವಯವಾಗಲಿದೆ. ಪ್ರೈಮ್ ಸದಸ್ಯರು  309 ರೂ. ರೀಚಾರ್ಜ್ ಮಾಡಿಸಿದರೆ ಪ್ರತಿನಿತ್ಯ 1 ಜಿಬಿ ಉಚಿತ ಇಂಟರ್'ನೆಟ್, ಉಚಿತ ಕರೆ,ಎಸ್'ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು 84 ದಿನಗಳ ಕಾಲ ಪಡೆಯಬಹುದು.

ನಾನ್ ಪ್ರೈಮ್ ಚಂದದಾರರು  309 ರೂ ರೀಚಾರ್ಜ್ ಜೊತೆಗೆ ಹೆಚ್ಚುವರಿ 99 ರೂ.ಗಳನ್ನು ರಿಚಾರ್ಜ್ ಮಾಡಿಸಬೇಕು. ಈ ಯೋಜನೆಯಲ್ಲಿ ಮೇಲಿನ ಎಲ್ಲ ಸೌಲಭ್ಯಗಳು ದೊರಯಲಿವೆ. ಅದೇ ರೀತಿ 509 ರೂ. ರಿಚಾರ್ಜ್ ಮಾಡಿಸಿದರೆ ನಿತ್ಯ 2 ಜಿಬಿ ಡಾಟಾ ಒಳಗೊಂಡು ಉಳಿದ ಉಚಿತ ಸೌಲಭ್ಯಗಳು ದೊರಯಲಿವೆ. ಇದು ಪ್ರೈಮ್ ಚಂದಾದಾರರಿಗೆ ಅನ್ವಯ. ನಾನ್ ಪ್ರೈಮ್ ಚಂದದಾರರು 99 ರೂ. ಹೆಚ್ಚುವರಿ ಪಾವತಿಸಬೇಕು. ಈ ಎಲ್ಲ ಮಾಹಿತಿಗಳನ್ನು ವೆಬ್'ಸೈಟ್'ನಲ್ಲಿ ಪ್ರಕಟಿಸಲಾಗಿದೆ.

Follow Us:
Download App:
  • android
  • ios