Asianet Suvarna News Asianet Suvarna News

50 ರ ನೋಟಿನಲ್ಲಿ ರಾರಾಜಿಸಲಿದೆ ಸಾಂಸ್ಕೃತಿಕ ವೈಭವದ ಹಂಪಿ ರಥ

ಆರ್’ಬಿಐ ಶೀಘ್ರದಲ್ಲಿಯೇ 50 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದ್ದು, ನೋಟಿನಲ್ಲಿ ಹಂಪಿಯ ರಥ ರಾರಾಜಿಸಲಿದೆ.  

RBI Introduces 50 banknote in Mahatma Gandhi  Series

ನವದೆಹಲಿ (ಆ.18): ಆರ್’ಬಿಐ ಶೀಘ್ರದಲ್ಲಿಯೇ 50 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದ್ದು, ನೋಟಿನಲ್ಲಿ ಹಂಪಿಯ ರಥ ರಾರಾಜಿಸಲಿದೆ.  

50 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ನಮ್ಮ ಸಾಂಸ್ಕೃತಿಕ ವೈಭವವನ್ನು ಮೆರೆಸುವ ಹಂಪಿಯ ರಥ ರಾರಾಜಿಸಲಿದೆ. ನೋಟು ನೀಲಿ ಬಣ್ಣದ್ದಾಗಿದ್ದು, ನೂತನ ವಿನ್ಯಾಸವನ್ನು ಹೊಂದಿದೆ.

ನೋಟುಗಳು 66*135 ಮಿಮೀ ಉದ್ದದ್ದಾಗಿದ್ದು,  ಮಧ್ಯದಲ್ಲಿ ಗಾಂಧೀಜಿ ಭಾವಚಿತ್ರವನ್ನು ಹಾಕಲಾಗಿದೆ. ಸ್ವಚ್ಛ ಭಾರತದ ಘೋಷಣೆಯೊಂದಿಗೆ, ಲೋಗೋವನ್ನು ನೋಟಿನಲ್ಲಿ ನೋಡಬಹುದಾಗಿದೆ. ನೋಟಿನ ಹಿಂಭಾಗದಲ್ಲಿ ಹಂಪಿ ರಥದ ಭಾವಚಿತ್ರವಿದೆ. ಇದೇ ನೋಟಿನ ಪ್ರಮುಖ ಆಕರ್ಷಣೆಯಾಗಿದೆ.   

Follow Us:
Download App:
  • android
  • ios