Asianet Suvarna News Asianet Suvarna News

ರಾಮ್'ನಾಥ್ ಕೋವಿಂದ್ ಭಾರತದ 14ನೇ ರಾಷ್ಟ್ರಪತಿ: ಜು.25ಕ್ಕೆ ಪ್ರಮಾಣ ವಚನ

ಭಾರತದ 14ನೇ ರಾಷ್ಟ್ರಪತಿಯಾಗಿ ಬಿಹಾರದ ಮಾಜಿ ರಾಜ್ಯಪಾಲ ರಾಮ್'ನಾಥ್ ಕೋವಿಂದ್ ಆಯ್ಕೆಯಾಗಿದ್ದಾರೆ

RamNath Kovind To Be Indias 14th President With 65Ps Votes

ನವದೆಹಲಿ(ಜು.20): ಬಿಹಾರದ ಮಾಜಿ ರಾಜ್ಯಪಾಲ ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಮತದಾನ ಎಣಿಕೆಯಲ್ಲಿ ಕೋವಿಂದ್ ಅವರು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಎನ್'ಡಿಎ ಅಭ್ಯರ್ಥಿ 3,34 730 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕೋವಿಂದ್ ಅವರು 7,02,044 ಮತಗಳ ಮೌಲ್ಯ ಪಡೆದರೆ ಮೀರಾ ಕುಮಾರ್ ಅವರು 3,67, 314 ಮತಗಳನ್ನು ಪಡೆದಿದ್ದಾರೆ. ರಾಮ್'ನಾಥ್ ಅವರ ಗೆಲುವು ನಿರೀಕ್ಷೆಯಾಗಿತ್ತು. ಲೋಕಸಭೆಯಲ್ಲಿ ಹೆಚ್ಚು ಬಹುಮತ ಹಾಗೂ ಹಲವು ರಾಜ್ಯಗಳಲ್ಲಿ  ಬಿಜೆಪಿ ಬಹುಪತ ಪಡೆದಿರುವ ಕಾರಣ ಜಯ ಕೋವಿಂದ್ ಅವರಿಗೆ ನಿಚ್ಚಳವಾಗಿತ್ತು.ಜುಲೈ 17 ರಂದು ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಶೇಕಡಾ 99 ಕ್ಕೂ ಹೆಚ್ಚು ದಾಖಲೆಯ ಮತದಾನವಾಗಿತ್ತು. ಮೊದಲು ಸಂಸತ್‌ ಭವನದ ಮತಪೆಟ್ಟಿಗೆ ತೆಗೆಯಲಾಗುವುದು.  ನಂತರ ವಿವಿಧ ರಾಜ್ಯಗಳ ಮತಪೆಟ್ಟಿಗೆ  ತೆರೆಯಲಾಗಿತ್ತು.771 ಸಂಸದರಲ್ಲಿ 768 ಸಂಸದರು, 4109 ಶಾಸಕರಲ್ಲಿ 4083 ಶಾಸಕರು  ಮತ ಚಲಾಯಿಸಿದ್ದರು.

ಜು.25ಕ್ಕೆ ಪ್ರಮಾಣ ವಚನ

ಜುಲೈ 24ಕ್ಕೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಮುಕ್ತಾಯಗೊಳ್ಳಲಿದ್ದು, ಜು.25 ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕರ್ನಾಟಕವನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯಗಳಲ್ಲಿ ಕೋವಿಂದ್ ಅವರಿಗೆ ಹೆಚ್ಚು ಮತ ನೀಡಿದ್ದಾರೆ. ಕೋವಿಂದ್ ಅವರ ಪರ 522, ಮೀರಾ ಕುಮಾರ್ ಅವರ ಪರ 225 ಮಂದಿ ಸಂಸದರು ಮತ ಚಲಾಯಿಸಿದ್ದಾರೆ. ಒಟ್ಟು 77 ಮತ ತಿರಸ್ಕೃತಗೊಂಡಿದ್ದು, ಇದರಲ್ಲಿ 21 ಸಂಸದರು ಸೇರಿದ್ದಾರೆ. ಒಟ್ಟು 5 ರಾಜ್ಯಗಳಲ್ಲಿ ಅಡ್ಡ ಮತದಾನವಾಗಿತ್ತು.ಕರ್ನಾಟಕದಲ್ಲಿ ಮೀರಾ ಕುಮಾರ್​ ಪರ 163 ಮತ ಕೋವಿಂದ್​ 53 ಮತ ಲಭಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವು ಗಣ್ಯರು ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಕೋವಿಂದ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

 

 

 

Follow Us:
Download App:
  • android
  • ios